ಆರೋಗ್ಯದ ವರ್ಧನೆಗೆ ಬೆಸ್ಟ್‌ ಟೊಮೆಟೊ ಸೂಪ್‌: ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ

Tomato Soup Recipe: ಋತುಮಾನದ ಬದಲಾವಣೆಯ ಸಮಯ ಬಹಳ ಸೂಕ್ಷ್ಮವಾಗಿರುತ್ತದೆ. ಈ ಸಮಯದಲ್ಲಿ ಆರೋಗ್ಯದ ಹದಗೆಡುವುದು ಹೆಚ್ಚು. ಆರೋಗ್ಯದ ಕಾಳಜಿಗಾಗಿ ಹಲವು ಆಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳುವುದು ಮುಖ್ಯ. ದೇಹಕ್ಕೆ ಶಕ್ತಿಯ ಮರುಪೂರ್ಣಗೊಳಿಸಲು ಕೆಲವು ಆಹಾರಗಳನ್ನು ಸೇವಿಸುವುದು ಮುಖ್ಯವಾಗಿದೆ. ಅವುಗಳಲ್ಲಿ ಸೂಪ್‌ಗಳು ಉತ್ತಮವಾಗಿದೆ. ಭಾರತದಲ್ಲಿ ಟೊಮೆಟೊ ಸೂಪ್‌ ಎಲ್ಲರ ಅಚ್ಚುಮೆಚ್ಚು. ಇದು ರುಚಿಯಾಗಿರುವುದರ ಜೊತೆಗೆ ಆರೋಗ್ಯಕರವೂ ಹೌದು. ಟೊಮೆಟೊ ಸೂಪ್‌ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಸೇವಿಸಬಹುದು. ಟೊಮೆಟೊ ಸೂಪ್‌ ತಯಾರಿಸುವ ಸುಲಭದ ವಿಧಾನ ಮತ್ತು ಅದರ ಪ್ರಯೋಜನಗಳನ್ನು ತಿಳಿಯೋಣ.

ಟೊಮೆಟೊ ಸೂಪ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಟೊಮ್ಯಾಟೊ – 4-5 ಕೆಂಪಗಿರುವ ದೊಡ್ಡ ಟೊಮೆಟೊ
ಶುಂಠಿ – 1 ಇಂಚು
ಬೆಳ್ಳುಳ್ಳಿ – 3-4 ಎಸಳು (ಸಣ್ಣಗೆ ಕತ್ತರಿಸಿದ್ದು)
ಈರುಳ್ಳಿ – 1 ಸಣ್ಣ ಈರುಳ್ಳಿ (ಸಣ್ಣಗೆ ಕತ್ತರಿಸಿದ್ದು)
ಬೆಣ್ಣೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಪ್ಪು ಮೆಣಸಿನ ಪುಡಿ – ಅರ್ಧ ಟೀ ಚಮಚ
ತಾಜಾ ಕ್ರೀಮ್
ಬ್ರೆಡ್ ಕ್ರೂಟಾನ್‌ಗಳು

ತಯಾರಿಸುವ ವಿಧಾನ

ಮೊದಲಿಗೆ ಟೊಮೆಟೊವನ್ನು ಸ್ವಚ್ಛವಾಗಿ ತೊಳೆದು ದೊಡ್ಡ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಶುಂಠಿ, ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಕುಕ್ಕರಿಗೆ ಹಾಕಿ ವಿಷಲ್‌ ಹಾಕಿಸಿ.

ಕುಕ್ಕರ್‌ ತಣ್ಣಗಾದ ನಂತರ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಜರಡಿಯ ಸಹಾಯದಿಂದ ಸೋಸಿಕೊಳ್ಳಿ.

ಒಂದು ಪ್ಯಾನ್‌ಗೆ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ಪಲಾವ್‌ ಎಲೆ, ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

ಈಗ ತಯಾರಿಸಿಟ್ಟುಕೊಂಡು ಟೊಮೆಟೊ ರಸವನ್ನು ಸೇರಿಸಿ. ಸ್ವಲ್ಪ ನೀರು ಬೆರೆಸಿ ಹದ ಮಾಡಿಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ.

ಸುಮಾರು 5 ರಿಂದ 10 ನಿಮಿಷಗಳ ವರೆಗೆ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ.

ತಯಾರಾದ ಸೂಪ್‌ಗೆ ತಾಜಾ ಕ್ರೀಮ್‌ ಮತ್ತು ಬ್ರೆಡ್‌ ಕ್ರೂಟಾನ್‌ ಸೇರಿಸಿ ಸವಿಯಿರಿ.

ಇದನ್ನೂ ಓದಿ: ಚಳಿಗಾಲದ ಫೇಮಸ್‌ ಸಿಹಿ ರುಚಿ ಕ್ಯಾರೆಟ್‌ ಹಲ್ವಾ; ಈ ರೀತಿ ಮನೆಯಲ್ಲೇ ಸುಲಭವಾಗಿ ತಯಾರಿಸಿ

ಟೊಮೆಟೊ ಸೂಪ್‌ನಿಂದ ಸಿಗುವ ಪ್ರಯೋಜನಗಳು

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಟೊಮೆಟೊದಲ್ಲಿ ಸಮೃದ್ಧವಾಗಿರುವ ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್ ಗಳು ಋತುಮಾನದ ಸಾಮಾನ್ಯ ಕಾಯಿಲೆಗಳಾದ ಶೀತ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ದೇಹವನ್ನು ಬೆಚ್ಚಗಿಡುತ್ತದೆ – ಸೂಪ್‌ನ ಉಷ್ಣತೆ ಮತ್ತು ಅದರಲ್ಲಿರುವ ಕರಿಮೆಣಸು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ – ಈ ಚಳಿಗಾಲದಲ್ಲಿ ನಿಮ್ಮ ತೂಕ ಹೆಚ್ಚಾಗಿದ್ದರೆ ಟೊಮೆಟೊ ಸೂಪ್ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಫೈಬರ್ ಅಧಿಕವಾಗಿದ್ದು, ದೀರ್ಘಕಾಲದವರೆಗೆ ನಿಮ್ಮನ್ನು ಹೊಟ್ಟೆ ತುಂಬಿದಂತೆ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ – ಟೊಮೆಟೊದಲ್ಲಿ ಲೈಕೋಪೀನ್ ಇದ್ದು ಅದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories