ನಿಮ್ಮ ಮುಖದ ಗ್ಲೋ ಹೆಚ್ಚಿಸೋಕೆ ಇಲ್ಲಿದೆ ಸೂಪರ್ ಐಡಿಯಾ
Health Lifestyle : ಚರ್ಮದ ಆರೈಕೆಯಲ್ಲಿ ಇತ್ತೀಚೆಗೆ ಫೇಸ್‌ಪ್ಯಾಕ್ ಒಂದು ಉತ್ತಮ ಸಲಹೆ ಅಂತಾನೇ ಹೇಳಬಹುದು. ನೋಡೋಕೆ ಚೆನ್ನಾಗಿ ಕಾಣಿಸ್ಬೇಕು, ನನ್ನ ಚರ್ಮ ಯಾವಾಗ್ಲೂ ಹೊಳೆಯುತ್ತಾ ಇರಬೇಕು, ಅನ್ನೋದು ಎಲ್ಲರ ಆಸೆ. ಅದರಲ್ಲಿಯೂ ಈಗಿನ ಫ್ಯಾಷನ್ ವರ್ಡ್‌ನಲ್ಲಂತೂ ಚರ್ಮ ಗ್ಲೋ ಬಂದಷ್ಟೂ ಸಾಕಾಗಲ್ಲ!. ಹೀಗಿರೋವಾಗ, ನಮ್ಮ ಮುಖದ ಕಾಂತಿ ಹೆಚ್ಚಿಸೋಕೆ, ಮುಖ ಯಾವಾಗಲೂ ಫ್ರೆಶ್ ಅನಿಸೋಕೆ ಒಂದಿಷ್ಟು ಟಿಪ್ಸ್‌ಗಳನ್ನು ತಿಳಿದುಕೊಳ್ಳೋಣ.
ನಮ್ಮ ದೇಹದಲ್ಲಿನ ರಕ್ತದ ಹರಿವು ಹೇಗಿದೆ ಅನ್ನುವುದನ್ನು ತಿಳಿದುಕೊಂಡು, ನಮಗೆ ಯಾವ ಸಮಯ ಫೇಸ್‌ಪ್ಯಾಕ್ ಹಾಕಿಕೊಳ್ಳೋಕೆ ಸೂಕ್ತ ಅನ್ನೋದನ್ನ ತಿಳಿದುಕೊಳ್ಳಬೇಕು.
ಸಾಮಾನ್ಯವಾಗಿ ಸಂಜೆ ಅಥವಾ ಮಲಗುವ ಮುನ್ನ ಫೇಸ್‌ಪ್ಯಾಕ್ ಹಚ್ಚಿಕೊಳ್ಳುವುದು ಉತ್ತಮ. ಸಂಜೆ ಫೇಸ್‌ಪ್ಯಾಕ್ ಹಚ್ಚಿಕೊಂಡರೆ ಹೆಚ್ಚಿನ ಸಮಯದವರೆಗೆ ಅದರಲ್ಲಿರುವ ಕಂಟೆಂಟ್ ನಮ್ಮ ಚರ್ಮದ ಒಳಗೆ ಬೆರೆಯುತ್ತದೆ. ಅದರಿಂದ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.
Health Lifestyle : ಹಾಗಾದರೆ ಫೇಸ್‌ಪ್ಯಾಕ್ ಹಚ್ಚಿಕೊಳ್ಳುವ ಕ್ರಮ ಹೇಗೆ?
- ಮೊದಲು ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ : ನೀವು ಕಲ್ಮಷಗಳು ಅಂಟಿಕೊಂಡಿರುವ ಮುಖಕ್ಕೆ ನೇರವಾಗಿ ಫೇಸ್‌ಪ್ಯಾಕ್ ಹಚ್ಚಿದರೆ, ಫೇಸ್‌ಪ್ಯಾನ ಜೊತೆ ಆ ಕಲ್ಮಷಗಳು ನಿಮ್ಮ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಅದರ ಬದಲಿ, ಮುಖವನ್ನು ಸ್ಚಚ್ಛವಾಗಿ ತೊಳೆದು ನಂತರ ಫೇಸ್‌ಪ್ಯಾಕ್ ಹಚ್ಚುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.
- ಮೇಲ್ಮುಖವಾಗಿ ಸವರಿ: ಫೇಸ್‌ಪ್ಯಾಕನ್ನು ಮೇಲ್ಮುಖವಾಗಿ ಹಚ್ಚಿಕೊಂಡರೆ, ಅದು ನಿಮ್ಮ ಚರ್ಮಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಮತ್ತು ನಿಮ್ಮ ಮುಖದಲ್ಲಿನ ಚಿಕ್ಕ ಚಿಕ್ಕ ರಂಧ್ರದೊಳಗೆ ಸೇರಿಕೊಂಡಿರುವ ಕಲ್ಮಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
- ಮುಖಕ್ಕೆ ಹಬೆಯನ್ನು ತಾಗಿಸಿ: ಬೆಚ್ಚಗಿನ ನೀರಿನ ಹಬೆಗೆ ನಿಮ್ಮ ಮುಖವನ್ನ ತಾಗಿಸುವುದರಿಂದ ಚರ್ಮದಲ್ಲಿರುವ ಸಣ್ಣ ಸಣ್ಣ ರಂಧ್ರಗಳು ತೆರೆದುಕೊಳ್ಳುತ್ತದೆ. ಇದರಿಂದ ಫೇಸ್‌ಪ್ಯಾಕ್ ತನ್ನ ಪರಿಣಾಮವನ್ನು ಬೀರಲು ಸಹಾಯಕವಾಗಿದೆ. ಮತ್ತು ಫೇಸ್‌ಪ್ಯಾಕ್ ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳಲು ಸುಲಭವೂ ಕೂಡಾ. ನಂತರ ಒಣ ಬಟ್ಟೆಯಲ್ಲಿ ಮುಖವನ್ನು ಒರೆಸಿ ನಂತರ ಫಸ್‌ಪ್ಯಾಕ್ ಹಚ್ಚಿಕೊಳ್ಳಿ.
- ವಿಶ್ರಾಂತಿ : ಫೇಸ್‌ಪ್ಯಾಕ್ ಹಚ್ಚಿದ ಹದಿನೈದರಿಂದ ಇಪ್ಪತ್ತು ನಿಮಿಷಗಳು ನೀವು ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ. ಅದರಲ್ಲಿಯೂ ಮುಖ್ಯವಾಗಿ ಯಾವುದೇ ಕಾರಣಕ್ಕೂ ಮುಖ ಚಲನೆಯನ್ನು ಮಾಡಬೇಡಿ. ಚರ್ಮವನ್ನು ಸಡಿಲಗೊಳಿಸುವುದು ಮತ್ತು ಬಿಗಿಗೊಳಿಸುವುದು ಮಾಡುವುದರ ಪರಿಣಾಮ ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು.
- ತೊಳೆಯಿರಿ : ಫೇಸ್‌ಪ್ಯಾಕನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಹೆಚ್ಚು ಗಟ್ಟಿಯಾಗಿ ಸ್ಕ್ರಬ್ ಮಾಡದೇ, ನಿಧಾನವಾಗಿ ವೃತ್ತಾಕಾರದ ಚಲನೆಯಲ್ಲಿ ತೆಗೆದುಹಾಕಿ.



