ಹಿಮ್ಮಡಿ ಒಡೆತಕ್ಕೆ ಇಲ್ಲಿದೆ ಮನೆಮದ್ದು

ಜನರಿಗೆ ಪಾದದ ಒಡೆತ ಕಾಮನ್‌ ಆಗಿಬಿಟ್ಟಿದೆ. ಅದರಲ್ಲಿಯೂ ವಿಶೇಷವಾಗಿ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಪಾದದ ಒಡೆತ ಬೇಗನೆ ಬರುತ್ತದೆ ಅಂದರೂ ತಪ್ಪಾಗಲಾರದು. ಏಕೆಂದರೆ, ಹಳ್ಳಿಯ ಜನರು ಅವಲಂಬಿಸಿಕೊಂಡಿದ್ದೆ ಭೂಮಿಯನ್ನ. ಹೀಗಿದ್ದಾಗ ಬದುಕು ಕಟ್ಟಿಕೊಳ್ಳಲು ಪ್ರತಿನಿತ್ಯವೂ ಭೂಮಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ. ಕೆಲಸದ ಸಂದರ್ಭದಲ್ಲಿ ಮಣಿನಲ್ಲಿರುವ ಧೂಳಿನ ಕಣಗಳು ಪಾದಕ್ಕೆ ಅಂಟಿಕೊಳ್ಳವುದು ಸಹಜವೂ ಕೂಡಾ.

ಸಾಮಾನ್ಯವಾಗಿ ಕೆಲವರಿಗೆ ಹಿಮ್ಮಡಿ ಒಡೆತದಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೊತ್ತಿನ ಒದ್ದೆಯ ಕಾಲು, ಪಾದವನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇರುವುದು, ಚರ್ಮದ ಬಿರುಕು, ಹೆಚ್ಚು ಕಾಲ ನಿಂತೇ ಇರುವುದು, ಬೊಜ್ಜಿನ ಸಮಸ್ಯೆ ಇರುವುದು, ಈ ರೀತಿಯ ಕೆಲವು ಸ್ಥಿತಿಗಳಿಂದ ಹಿಮ್ಮಡಿ ಒಡೆತ ಕಾಣಿಸಿಕೊಳ್ಳುತ್ತದೆ. ಅಲಕ್ಷ್ಯ ಮಾಡಿದಷ್ಟೂ ಹೆಚ್ಚುತ್ತದೆ ಈ ಒಡೆತ. ಹಾಗಿರುವಾಗ ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಹಿಮ್ಮಡಿ ಒಡೆತವನ್ನು ಹೇಗೆ  ಕಡಿಮೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಯೋಣ.

ಇನ್ನು, ಹಸುವಿನ ಕೊಟ್ಟಿಗೆಯಲ್ಲಿ ಕೆಲಸ ಮಾಡುವುದು, ಗೊಬ್ಬರದ ಕೆಲಸ, ಹೀಗೆ ಇನ್ನಿತರ ಕೆಲಸಗಳಲ್ಲಿ ತೊಡಗಿಕೊಂಡಿರುವವರಿಗೆ ಪಾದದ ಒಡೆತ ಬಹುಬೇಗ ಕಾಣಿಸಿಕೊಳ್ಳುತ್ತದೆ. ಪಾದದ ಹಿಮ್ಮಡಿಯ ಒಡೆತ ಎಂಬ ಕಾರಣಕ್ಕೆ ಬದುಕನ್ನೇ ನಡೆಸುತ್ತಿರುವ ಕೃಷಿ ಕೆಲಸವನ್ನಂತೂ ಬಿಟ್ಟು ಬದಕುಲು ಸಾಧ್ಯವೇ ಇಲ್ಲ. ಹಾಗಿದ್ದಮೇಲೆ ಪಾದದ ಒಡೆತಕ್ಕೆ ಏನಾದರೂ  ಮನೆಮದ್ದು ಮಾಡಿ ರೋಗವನ್ನು ನಿವಾರಿಸಿಕೊಳ್ಳಬಹುದು ಅಲ್ಲವೇ?. ಅಂತಹ ಕೆಲವು ಮನೆ ಮದ್ದುಗಳನ್ನು ತಿಳಿಯೋಣ.

ಹಿಮ್ಮಡಿ ಒಡೆದಿದ್ದರೆ ಇದನ್ನು ಬಳಸಿ;

ಒಂದು ಮುಷ್ಟಿ ಕಹಿಬೇವಿನ ಎಲೆಯನ್ನು ತೆಗೆದುಕೊಂಡು ಅದನ್ನು ಒಂದು ಚಮಚ ತಪ್ಪದಲ್ಲಿ ಹುರಿಯಿರಿ. ಅದರ ಬಿಸಿ ಆರಿದ ನಂತರದಲ್ಲಿ  ನುಣ್ಣಗೆ ಪುಡಿ ಮಾಡಿ. ಇದಕ್ಕೆ ನಾಲ್ಕರಿಂದ ಐದು ಚಮಚ ಜೇನಿನ ಮೇಣವನ್ನು ಸೇರಿಸಿ, ಇದನ್ನು ಗಾಳಿಯಾಡದ ಬಾಟಲಿಯಲ್ಲಿ ಸ್ಟೋರ್‌ ಮಾಡಿಟ್ಟುಕೊಳ್ಳಿ. ಗಾಜಿನ ಬಾಟಲಿಯಾದರೆ ಉತ್ತಮ.

ದಿನಕ್ಕೆ ಒಂದು ಬಾರಿ, ನಿಮ್ಮ ಪಾದವನ್ನು (ಹಿಮ್ಮಡಿಯನ್ನು), ಬಿಸಿ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ, ಐದು ನಿಮಮಿಷಗಳ ಕಾಲ ನೆನೆಸಿ. ಪಾದಕ್ಕಂಟಿರುವ ಮಣ್ಣು, ಧೂಳು ಹೋದ ನಂತರ, ಹಿಮ್ಮಡಿಯನ್ನು ತೊಳೆದು, ವಸ್ತ್ರದಲ್ಲಿ ಒರೆಸಿ. ನಂತರದಲ್ಲಿ ಮಾಡಿಕೊಂಡಿರುವ ಮನೆಮದ್ದನ್ನು ಹಿಮ್ಮಡಿಗೆ ಹಚ್ಚಿ. ಒಡೆದಿರುವ ಜಾಗಕ್ಕೆ ಸರಿಯಾಗಿ ಮನೆಮದ್ದು ತಾಗಬೇಕು. ಈ ರೀತಿ ಮಾಡುವುದುರಿಂದ ನಿಮ್ಮ ಹಿಮ್ಮಡಿ ಒಡೆತ ಕಡಿಮೆಯಾಗುತ್ತದೆ.

ಅಲೋವೇರಾ ಜೆಲ್‌ ಬಳಸಿ:

ಅಲೋವೇರಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹಕ್ಕೆ ಹೆಚ್ಚು ತಂಪು ಕೂಡಾ. ಹಾಗಾಗಿ ನೀವು ಅಲೋವೇರಾವನ್ನು ಮಿಕ್ಸಿ ಮಾಡಿ ಸಹ ಹಿಮ್ಮಡಿಯ ಒಡೆತಕ್ಕೆ ಹಚ್ಚಬಹುದು, ಇಲ್ಲವೇ, ಅಲೋವೇರಾದ ಜೆಲ್ಲನ್ನು ಒಡೆತದ ಸುತ್ತಲೂ ಹಚ್ಚಿ, ಸ್ವಚ್ಛಗಿನ ಒಣ ಬಟ್ಟೆಯಲ್ಲಿ ಕಟ್ಟಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ನೋವನ್ನು ಶಮನ ಮಾಡುತ್ತದೆ, ಜೊತೆಗೆ ಹಿಮ್ಮಡಿಯ ಸವೆತ ತಡೆಗಟ್ಟಲು ಸಹಾಯಕವಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories