ಕೆಟ್ಟ ದೃಷ್ಠಿಗಳು ನಿಮ್ಮನ್ನು ತಾಕುತ್ತಿದ್ದೆಯೇ : ಇದರಿಂದ ಪಾರಾಗಲು ವಾಸ್ತು ಶಾಸ್ತ್ರದಲ್ಲಿದೆ ಮಾರ್ಗ

Vastu Shastra: ಇತ್ತೀಚಿಗೆ ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅಭ್ಯಾಸ ಹಲವರದ್ದು. ಖುಷಿಯ ಕ್ಷಣಗಳನ್ನು ತೋರ್ಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹಂಚಿಕೊಂಡಷ್ಟೂ ಖುಷಿ ಹೆಚ್ಚುತ್ತದೆ. ಆದರೆ ಕೆಟ್ಟ ದೃಷ್ಟಿ ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಇರಲು ಬಿಡುವುದಿಲ್ಲ.

ಇದು ಕೇವಲ ಸಾಮಾಜಿಕ ಜಾಲತಾಣ ಮಾತ್ರವಲ್ಲ. ನಾವು ನಮ್ಮ ಕುಟುಂಬಸ್ಥರೊಂದಿಗೆ ಚೆನ್ನಾಗಿರುವುದನ್ನು ನೋಡಿದ ಯಾರು ಬೇಕಿದ್ದರೂ ಕಣ್ಣು ಹಾಕಬಹುದು. ಹೀಗಾಗಿ ಕೆಟ್ಟ ದೃಷ್ಠಿ ಅಥವಾ ನಜರ್​ಗಳಿಂದ ಪಾರಾಗಲು ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ.

ಮನೆಯ ಮುಂಭಾಗದಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡಿ :

ಮನೆಯ ಪ್ರವೇಶ ದ್ವಾರ ಎನ್ನುವುದು ಅತ್ಯಂತ ಮುಖ್ಯವಾದ ಸ್ಥಳ. ಇದು ಹೊರಗಿನ ಜಗತ್ತಿಗೂ ಮನೆಯ ಒಳಾಂಗಣಕ್ಕೂ ಇರುವ ಪ್ರಮುಖ ಕೊಂಡಿ. ನಿಮ್ಮ ಮನೆಗೆ ಬರುವ ಪ್ರತಿಯೊಬ್ಬರೂ ಇದನ್ನು ದಾಟಿಕೊಂಡೇ ಬರುತ್ತಾರೆ. ಹೀಗಾಗಿ ಮನೆಯ ಪ್ರವೇಶ ದ್ವಾರದಲ್ಲಿ ನೀವು ಓಂ ಅಥವಾ ಸ್ವಸ್ತಿಕ ಚಿಹ್ನೆಯನ್ನು ಇರಿಸಬೇಕು. ಇದು ನಿಮ್ಮನ್ನು ಕೆಟ್ಟ ದೃಷ್ಠಿಯಿಂದ ಪಾರು ಮಾಡುತ್ತದೆ.

Also Read: Deepavali: ದೀಪಾವಳಿಗೂ ಮುನ್ನ ಮನೆಯ ಈ ದಿಕ್ಕುಗಳಲ್ಲಿ ಕೈಗೊಳ್ಳಿ ಸ್ವಚ್ಛತೆ : ಲಕ್ಷ್ಮೀ ದೇವಿಯ ವಾಸ ಇಲ್ಲಿದೆ

ಮನೆಯ ಆಗ್ನೇಯ ದಿಕ್ಕು ಹೀಗಿರಲಿ :

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಆಗ್ನೇಯ ದಿಕ್ಕನ್ನು ಎಲ್ಲಾ ದುಷ್ಟ ಶಕ್ತಿಗಳಿಂದ ರಕ್ಷಿಸುವ ಅಗ್ನಿ ದೇವತೆ ದುರ್ಗಾ ದೇವಿಗೆ ಸಮರ್ಪಿಸಲಾಗಿದೆ. ಈ ದಿಕ್ಕಿನಲ್ಲಿ ನೀವು ಮರದ ಮೇಜಿನ ಮೇಲೆ ಹಿತ್ತಾಳೆಯ ದೀಪ ಬೆಳಗಿಸಬೇಕು. ಇದು ದುರ್ಗಾ ದೇವಿಯನ್ನು ಸಂತಸಪಡಿಸುತ್ತದೆ. ಅಲ್ಲದೇ ತಾಮ್ರದ ಲೋಹದಿಂದ ತಯಾರಿಸಿದ ಸ್ವಸ್ತಿಕ ಚಿಹ್ನೆಯನ್ನು ಕೂಡ ನೀವಿರುಸುವುದು ಉತ್ತಮ.

ಮನೆಯ ಈಶಾನ್ಯ ದಿಕ್ಕು :

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ನಂಬಿಕೆಯಿದೆ. ಮನೆಯ ಸದಸ್ಯರಿಗೆ ದೇವಾನು ದೇವತೆಗಳ ಅನುಗ್ರಹ ಒಲಿಯುವ ದಿಕ್ಕು ಇದಾಗಿದೆ. ಹೀಗಾಗಿ ಈ ದಿಕ್ಕನ್ನು ಅಸ್ತವ್ಯಸ್ತವಾಗಿ ಇಡಬಾರದು. ಇಲ್ಲಿ ಯಾವುದೇ ಕಾರಣಕ್ಕೂ ಭಾರದ ವಸ್ತುಗಳನ್ನು ಇಡುವಂತಿಲ್ಲ.

Also Read: ಇಂದು ಧನ್ತೇರಸ್‌, ಧನ್ವಂತರಿ ಜಯಂತಿ: ಈ ದಿನದ ಮಹತ್ವ ತಿಳಿಯಿರಿ

ನಝರ್​ಗಳಿಂದ ಬಚಾವಾಗಲು ಪರಿಣಾಮಕಾರಿ ಮಾರ್ಗ :

ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಲು ಮತ್ತೊಂದು ಪ್ರಮುಖ ಮಾರ್ಗವೆಂದರೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಶ್ರೀಗಂಧ ಅಥವಾ ಕರ್ಪೂರವನ್ನು ಸುಡುವುದು. ನೈಋತ್ಯದಲ್ಲಿ ದೇವದಾರು ಮರವನ್ನು ನೆಡುವುದರಿಂದ ನಿಮ್ಮ ಸುರಕ್ಷಿತ ಭಾವನೆಯನ್ನು ನೀಡುತ್ತದೆ.

ತುಳಸಿ ಗಿಡ :

ತುಳಸಿ ಗಿಡಗಳು ಆರ್ಯುವೇದದಲ್ಲಿ ಪ್ರಮುಖ ಗಿಡಮೂಲಿಕೆಯಾಗಿದೆ. ಪ್ರತಿ ಹಿಂದೂಗಳ ಮನೆಯಲ್ಲಿ ನೀವು ತುಳಸಿ ಗಿಡಗಳನ್ನು ಬೆಳೆಯುವುದನ್ನು ನೀವು ಕಾಣಬಹುದಾಗಿದೆ. ಪೂರ್ವ, ಉತ್ತರ ಅಥವಾ ಈಶಾನ್ಯ ಬಾಗಿಲು ಅಥವಾ ಕಿಟಕಿಗಳ ಬಳಿಯಲ್ಲಿ ತುಳಸಿ ಗಿಡವನ್ನು ಇರಿಸಬೇಕು.

ವೈಜ್ಞಾನಿಕವಾಗಿ ಈ ಗಿಡಗಳು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಈ ಗಿಡಕ್ಕೆ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories