Husbend Wife Relation Tips: ನೀವು ಹೇಳಿದ್ದನ್ನೇ ಬೈದದ್ದು ಅಂತಾಳಾ ಹೆಂಡತಿ!? ಪತಿ-ಪತ್ನಿಯ ನಡುವಿನ “ಮಾತು ಮುತ್ತಾಗೋದು” ಹೇಗೆ?

“ನಾನು ಹೇಳಿದ್ದು ಒಂದಾದ್ರೆ, ನೀನು ಅಂದ್ಕೊಂಡಿದ್ದು ಬೇರೆನೇ! ಇದು ಬೈಗುಳ ಅಲ್ಲ” – ಇದು ಎಷ್ಟೋ ಮನೆಗಳಲ್ಲಿ ದಿನಾ ಕೇಳೋ ಮಾತು. ಆದ್ರೆ, ನೀವು ಕೊಟ್ಟ ಸಣ್ಣ ಸಲಹೆ ಕೂಡ ನಿಮ್ಮ ಹೆಂಡತಿಗೆ ಕಠಿಣ ಟೀಕೆ ಅಥವಾ ಬೈದಂತೆ ಯಾಕೆ ಅನಿಸುತ್ತೆ? ಮುಖ್ಯ ಕಾರಣ ಏನು ಗೊತ್ತಾ? ನಾವು ಮಾತನಾಡುವ ಧ್ವನಿ ಮತ್ತು ಆ ಮಾತನ್ನು ಹೇಳೋ ಸಮಯ.

ಮಾತು ಮುತ್ತಾಗೋಕೆ 3 ಸುಲಭ ಟಿಪ್ಸ್:

ಧ್ವನಿಯನ್ನ ಸರಿ ಇಟ್ಟುಕೊಳ್ಳಿ: ನೀವು ಏನು ಹೇಳ್ತೀರಿ ಅನ್ನೋದಕ್ಕಿಂತ, ಹೇಗೆ ಹೇಳ್ತೀರಿ ಅನ್ನೋದು ಮುಖ್ಯ. ನೀವು ಸುಸ್ತಾಗಿರುವಾಗ, ಸಿಟ್ಟಿರುವಾಗ ಅಥವಾ ಆತುರದಲ್ಲಿ ಮಾತನಾಡುವಾಗ, ನಿಮ್ಮ ಧ್ವನಿ ತಾನಾಗಿಯೇ ಒರಟಾಗುತ್ತೆ. “ಇದನ್ನ ಹೀಗೆ ಮಾಡು” ಅಂತ ಹೇಳುವಾಗ, ನಿಮ್ಮ ಧ್ವನಿಯಲ್ಲಿ ಆಜ್ಞೆ ಇರದೆ ಪ್ರೀತಿ ಇರಲಿ.

ಸರಿಯಾದ ಸಮಯ ನೋಡಿ: ಹೆಂಡತಿ ಅಡುಗೆಮನೆಯಲ್ಲಿ ತಲೆ ಕೆಡಿಸಿಕೊಂಡಿರುವಾಗ ಅಥವಾ ದಣಿದಿರುವಾಗ ನೀವು ಏನೇ ಸಲಹೆ ಕೊಟ್ಟರೂ ಅದು ಟೀಕೆ ತರಹನೇ ಕಾಣುತ್ತೆ. ಇಬ್ಬರೂ ಆರಾಮವಾಗಿರುವಾಗ ಮತ್ತು ಖುಷಿಯಾಗಿರುವಾಗ ವಿಷಯಗಳ ಬಗ್ಗೆ ಮಾತನಾಡಿ.

ಮೊದಲು ಮೆಚ್ಚುಗೆ ಹೇಳಿ: ಏನನ್ನಾದರೂ ಸರಿಪಡಿಸುವ ಮೊದಲು ಅಥವಾ ಸಲಹೆ ನೀಡುವ ಮೊದಲು, ಅವರು ಮಾಡಿದ ಕೆಲಸವನ್ನು ಮೆಚ್ಚಿ ಮಾತು ಶುರುಮಾಡಿ. ಉದಾಹರಣೆಗೆ: “ನೀನು ಇವತ್ತು ತುಂಬಾ ಕಷ್ಟಪಟ್ಟಿದ್ದೀಯಾ. ಈ ಕೆಲಸವನ್ನ ಇಬ್ಬರೂ ಸೇರಿ ಇನ್ನೊಂದು ರೀತಿ ಮಾಡೋಣವಾ?” ಈ ರೀತಿ ಮಾತು ಶುರು ಮಾಡಿದರೆ, ಅವರು ನಿಮ್ಮ ಮಾತನ್ನು ಒಪ್ಪಿಕೊಳ್ಳಲು ಸುಲಭ ಆಗುತ್ತೆ.

ನೆನಪಿಡಿ, ಗಂಡ-ಹೆಂಡತಿಯ ನಡುವಿನ ಮಾತು ಬರಿ ಶಬ್ದಗಳಲ್ಲ, ಅದು ಪ್ರೀತಿ ಹೆಚ್ಚಿಸೋ ಸಂಬಂಧ. ನಿಮ್ಮ ಮಾತುಗಳು ಪ್ರೀತಿಯನ್ನು ಇನ್ನಷ್ಟು ಗಟ್ಟಿ ಮಾಡಲಿ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories