ಕರಾವಳಿಯಲ್ಲಿ ಗುಡುಗು ಸಹಿತ ಮಳೆ, ರೈತರಲ್ಲಿ ಆತಂಕ : ಇನ್ನೆಷ್ಟು ದಿನ ಸುರಿಯಲಿದೆ ಮಳೆ ?

Heavy Rain Weather Report ಉಡುಪಿ/ ಮಂಗಳೂರು : ಕರ್ನಾಟಕದಲ್ಲಿ ಸದ್ಯ ವರುಣನ ನರ್ತನ ಕೊನೆಗಾಣುವ ಲಕ್ಷಣ ಕಾಣುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ಹವಾಮಾನ ಇಲಾಖೆ ರಾಜ್ಯದಲ್ಲಿ ಮಳೆ ಮುಕ್ತಾಯವಾಗುವ ಸುಳಿವು ನೀಡಿತ್ತು.ಆದರೆ ಇದೀಗ ಮತ್ತೆ ವರುಣರಾಯ ಆಗಮನದ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇಂದು ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.ಬೆಳಗ್ಗೆಯಿಂದಲೇ ಕರಾವಳಿ ಜಿಲ್ಲೆಯಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಉಂಟಾಗಿದೆ. ಇನ್ನುಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಉಡುಪಿ :ಹಳ್ಳಿಹೈದನ ವಿಭಿನ್ನ ಪ್ರೀವೆಡ್ಡಿಂಗ್‌ ಪೋಟೋ ಶೂಟ್‌

ದಕ್ಷಿಣ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರ ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಲಘು ಮಳೆ ಸಂಭವಿಸಲಿದೆ ಎನ್ನಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳು ಸೇರಿದಂತೆ ಉತ್ತರ ಕನ್ನಡದಲ್ಲಿಯೂ ಒಣ ಹವೆ ಇರಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ : 38 ಶವಗಳ ತನಿಖೆ ಬಿಗಿಗೊಳಿಸಿದ ಎಸ್‌ಐಟಿ

ಈ ಬಾರಿ ಮೇ ತಿಂಗಳಲ್ಲಿಯೇ ವರ್ಷಧಾರೆ ಆರಂಭಗೊಂಡಿತ್ತು. ವರ್ಷಾಂತ್ಯ ಸಮೀಪಿಸಿದರೂ ಸಹ ಮಳೆ ಮುಗಿಯುವ ಲಕ್ಷಣ ಮಾತ್ರ ಗೋಚರವಾಗುತ್ತಿಲ್ಲ.
ಇನ್ನೇನು ಮಳೆ ಮುಕ್ತಾಯಗೊಂಡಿತು ಎನ್ನುವಷ್ಟರಲ್ಲಿ ವರುಣ ಮತ್ತೊಮ್ಮೆ ತನ್ನ ಆರ್ಭಟ ಪ್ರದರ್ಶಿಸುತ್ತಿದ್ದು ಜನಸಾಮಾನ್ಯರು ಯಾವಾಗ ಮಳೆಯ ಕಾಟ ಮುಗಿಯುತ್ತೋ ಎಂದು ಗೊಣಗುಡುವಂತಾಗಿದೆ.

Coastal Karnataka Heavy Rain Weather Report

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories