ಪಕ್ಷ ನಿಷ್ಠೆಗೆ ಮಣೆ : ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಗೆ ಮೆಸ್ಕಾಂ ಅಧ್ಯಕ್ಷ ಸ್ಥಾನ

ಮಂಗಳೂರು: ಪಕ್ಷ ನಿಷ್ಠೆಗೆ ಕಾಂಗ್ರೆಸ್ ಅವಕಾಶ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ( Harish Kumar ) ಅವರಿಗೆ ಮೆಸ್ಕಾಂ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

ಜಿಲ್ಲಾ ಕಾಂಗ್ರೆಸ್ ಅನ್ನು ಬಹಳಷ್ಟು ಬ್ಯಾಲೆನ್ಸಿಂಗ್ ಆಗಿ ನಡೆಸಿಕೊಂಡು ಬಂದಿರುವ ಹರೀಶ್ ಕುಮಾರ್ ಪಕ್ಷದ ಹೈಕಮಾಂಡ್ ಆದೇಶಗಳ ಅನ್ವಯ ಕಾರ್ಯನಿರ್ವಹಿಸಿದ್ದು ಈಗ ಮತ್ತೊಂದು ಅವಕಾಶವನ್ನು ಹರೀಶ್ ಕುಮಾರ್ ಅವರಿಗೆ ಪಕ್ಷ ನೀಡಿದೆ.

ಪಕ್ಷದ ಅತ್ಯಂತ ಕಠಿಣ ಸಂದರ್ಭದಲ್ಲಿ ಯಾವುದೇ ಲಾಬಿ ಹಾಗೂ ಒತ್ತಡಕ್ಕೂ ಮಣಿಯದೆ ಪಕ್ಷವನ್ನು ನಡೆಸಿಕೊಂಡು ರೀತಿಯ ಬಗ್ಗೆ ಹೈಕಮಾಂಡಿಗೆ ಹರೀಶ್ ಕುಮಾರ್ ಬಗ್ಗೆ ಅಪಾರ ಗೌರವವಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಧರ್ಮಸ್ಥಳ ಸೌಜನ್ಯ ಮನೆಗೆ ಬಿವೈ ವಿಜಯೇಂದ್ರ ಭೇಟಿ : ಕೇಸರಿ ಪಾಳಯದಲ್ಲಿ ಮೊಳಗಿದ ಅಸಮಾಧಾನ

ಈ ಮೊದಲು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಎಂಎಲ್ಸಿಯಾಗಿ ಹಲವಾರು ಗುರುತರ ಹುದ್ದೆಗಳ ನಿರ್ವಹಿಸಿಕೊಂಡ ಬಂದ ಹರೀಶ್ ಕುಮಾರ್ ಅವರಿಗೆ ಈಗ ಮೆಸ್ಕಾಂ ಅಧ್ಯಕ್ಷ ಸ್ಥಾನ ಅರ್ಹವಾಗಿ ಒಲಿದುಬಂದಿದೆ.

ಇದನ್ನೂ ಓದಿ : ಮಂಗಳೂರು : ಮನಾಪದಲ್ಲಿ ಕನ್ನಡ ಬಾರದ ಅಧಿಕಾರಿ ನೇಮಕ : ಸಾರ್ವಜನಿಕರ ಆಕ್ರೋಶ

Dakshina Kannada Congress district president Harish Kumar gets MESCOM chairman

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories