ಹಿಂದೂ ಮುಖಂಡ ಶರಣ್​ ಪಂಪ್​ವೆಲ್​ ಪೊಲೀಸ್ ವಶಕ್ಕೆ : ಆಕ್ಷೇಪಾರ್ಹ ಫೇಸ್​ಬುಕ್​ ಪೋಸ್ಟ್​

Sharan Pumpwell in Arrest : ಫೇಸ್​ಬುಕ್​ನಲ್ಲಿ ಪ್ರಚೋದನಕಾರಿ ಪೋಸ್ಟ್​ ಶೇರ್​ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಕದ್ರಿ ಪೊಲಿಸರು ವಿಶ್ವ ಹಿಂದೂ ಪರಿಷತ್​​ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್​ ಪಂಪ್​ವೆಲ್​​ರನ್ನು ವಶಕ್ಕೆ ಪಡೆದಿದ್ದಾರೆ.

ಆರ್​ಎಸ್​ಎಸ್​ ಮುಖಂಡರೊಬ್ಬರ ವಿವಾದಾತ್ಮಕ ಭಾಷಣದ ತುಣುಕನ್ನು ಶೇರ್​ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸುಮೋಟೋ ಕೇಸ್​ ದಾಖಲಿಸಿಕೊಂಡ ಕದ್ರಿ ಠಾಣಾ ಪೊಲೀಸರು ಶರಣ್​ ಪಂಪ್​ವೆಲ್​ರನ್ನು ವಶಕ್ಕೆ ಪಡೆದಿದ್ದಾರೆ.

Sharan Pumpwell in Arrest : ಏನಿದು ಪ್ರಕರಣ ?

ಬಿಜೆಪಿ ಮುಖಂಡ ವಿಕಾಸ್​ ಪುತ್ತೂರು ಎಂಬವರು ಆರ್​ಎಸ್​ಎಸ್​ ಮುಖಂಡರೊಬ್ಬರ ಭಾಷಣದ ತುಣುಕನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಭಾಷಣದಲ್ಲಿ ಆರ್​ಎಸ್​ಎಸ್​ ಮುಖಂಡರೊಬ್ಬರು ಕಳೆದ 2 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಹುಟ್ಟಿದ್ದಾರೆಂದು ನಾನೊಂದು ಲೆಕ್ಕ ತೆಗೆದೆ.

4,57,000 ಮಕ್ಕಳು ಹುಟ್ಟಿದ್ದಾರೆ. ಆದರೆ ಇದರಲ್ಲಿ 23,200 ಮಕ್ಕಳು ಹಿಂದೂಗಳು ಹಾಗೂ 22,200 ಮಕ್ಕಳು ಅಲ್ಪಸಂಖ್ಯಾತರು. ನಮ್ಮ ಜಿಲ್ಲೆಯ 78 ಪ್ರತಿಶತ ಜನಸಂಖ್ಯೆಗೆ ಹುಟ್ಟಿದ ಮಕ್ಕಳು 23,200 . ಅದೇ 28 ಪ್ರತಿಶತ ಜನಸಂಖ್ಯೆಗೆ ಹುಟ್ಟಿದ ಮಕ್ಕಳು 22,200 .

Also Read: ಮಂಗಳೂರು : ಆಂಬುಲೆನ್ಸ್​ಗೆ ದಾರಿ ಬಿಡದೇ ಪುಂಡಾಟ : ಕಿಡಿಗೇಡಿ ಬಂಧನ

ಹಾಗಾದರೆ ಇನ್ನೊಂದು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿಗೆ ಹೋಗುತ್ತೆ ? ಆಗ ದೇಶ ಉಳಿಯುತ್ತಾ ? ಸಮಾಜ ಉಳಿಯುತ್ತಾ ? ನಾವೊಂದು ನಿಶ್ಚಯ ಮಾಡಬೇಕಿದೆ ಎಂದು ಮಾಡಿದ್ದ ಭಾಷಣದ ತುಣುಕನ್ನು ಮುಸ್ಲಿಮರ ಜನಸಂಖ್ಯೆ ಜಿಹಾದ್​ ಮೆಟ್ಟಿ ನಿಲ್ಲೋಣ ಎಂಬ ವಾಕ್ಯದಡಿಯಲ್ಲಿ ವಿಕಾಸ್​ ಪುತ್ತೂರು ಶೇರ್ ಮಾಡಿದ್ದರು.

ಈ ಪೋಸ್ಟ್​ನ್ನೇ ಶರಣ್​ ಪಂಪ್​ವೆಲ್​ ಕೂಡ ಶೇರ್​ ಮಾಡಿದ್ದಾರೆ. ಈ ಪೋಸ್ಟ್​ ಆಧರಿಸಿ ಠಾಣಾ ಸಿಬ್ಬಂದಿ ನಾಗರಾಜ್​ ಭರ್ಜರಿ ಎಂಬವರು A1 ಆರೋಪಿ ವಿಕಾಸ್ ಪುತ್ತೂರು, A2 ಆರೋಪಿ ಶರಣ್ ಪಂಪ್ ವೆಲ್ ವಿರುದ್ಧ ಬಿ ಎನ್ ಎಸ್ 353(2),ಅಡಿ ಎಫ್ ಐ ಆರ್ ದಾಖಲಿಸಿದ್ದಾರೆ.

ಇನ್ನು ಶರಣ್​ ಪಂಪ್​ವೆಲ್​ರನ್ನು ಬಂಧಿಸುತ್ತಿದ್ದಂತೆಯೇ ಕದ್ರಿ ಪೊಲೀಸ್​ ಠಾಣೆಯ ಬಳಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ. ನೋಟಿಸ್​ ಕೂಡ ನೀಡದೇ ವಶಕ್ಕೆ ಪಡೆಯಲಾಗಿದೆ. ಈ ವಿಡಿಯೋ ತುಣುಕನ್ನು ತುಂಬಾ ಜನ ಹಂಚಿಕೊಂಡಿದ್ದಾರೆ.

Also Read: ಧರ್ಮಸ್ಥಳ ಬುರುಡೆ ಪ್ರಕರಣ : ಕೇಸ್​ ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ SIT ನೋಟಿಸ್​

ಎಲ್ಲರನ್ನೂ ಬಿಟ್ಟು ಶರಣ್​ ಪಂಪ್​ವೆಲ್​ರನ್ನೇ ಏಕೆ ವಶಕ್ಕೆ ಪಡೆಯಲಾಗಿದೆ. ಅವರು ಹಿಂದೂ ಸಂಘಟನೆ ಮುಖಂಡ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಕಾಂಗ್ರೆಸ್​ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ .

ಕೂಡಲೇ ಈ ಕೇಸು ಹಿಂಪಡೆಯಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುತ್ತೇವೆಂದು ವಿಶ್ವ ಹಿಂದೂ ಪರಿಷತ್​ ಮುಖಂಡ ಪ್ರದೀಪ್​ ಸರಿಪಳ್ಳ ಆಕ್ರೋಶ ಹೊರ ಹಾಕಿದ್ದಾರೆ.

Hindu leader Sharan Pumpwell in Arrest Objectionable Facebook post

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories