ಮಂಗಳೂರು : ಆಂಬುಲೆನ್ಸ್​ಗೆ ದಾರಿ ಬಿಡದೇ ಪುಂಡಾಟ : ಕಿಡಿಗೇಡಿ ಬಂಧನ

Mangaluru Ambulance Biker Arrest : ಮಂಗಳೂರು : ಆಂಬುಲೆನ್ಸ್​ಗಳು ಜೀವ ರಕ್ಷಿಸುವ ವಾಹನಗಳು. ಹೀಗಾಗಿ ಆಂಬುಲೆನ್ಸ್​ಗಳು ಸಂಚರಿಸುವಾಗ ರಸ್ತೆಯಲ್ಲಿ ವೇಗವಾಗಿ ಚಲಿಸುವ ಅನುವು ಮಾಡಿಕೊಡಬೇಕು ಎಂಬ ನಿಯಮವೇ ಇದೆ. ಆದರೂ ಕೂಡ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್​ನಲ್ಲಿ ಯುವಕನೊಬ್ಬ ಆಂಬುಲೆನ್ಸ್​ಗೆ ದಾರಿ ನೀಡದೆ ಪುಂಡಾಟ ಮೆರೆದಿದ್ದು ಇದೀಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾನೆ.

ಬಂಧಿತ ಬೈಕ್​ ಸವಾರನನ್ನು ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ 38 ವರ್ಷದ ಮಹಮ್ಮದ್​ ಮನ್ಸೂರು ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ದ್ವಿಚಕ್ರ ವಾಹನ KA22C1382 ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

Also Read : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಮೋಸ

ನಿನ್ನೆ ಬಿಸ್ಲೆ ಘಾಟ್​ ಬಳಿ ಅಪಘಾತ ಸಂಭವಿಸಿತ್ತು. ಈ ವೇಳೆ ಗಾಯಾಳುವನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಬಿ.ಸಿ ರೋಡ್​ ಬಳಿಯಲ್ಲಿ ಎದುರಿಗೆ ಬಂದ ಬೈಕ್​ ಸವಾರ ಮುಹಮ್ಮದ್​ ಸುಮಾರು ಮೂರ್ನಾಲ್ಕು ಕಿಲೋಮೀಟರ್​ವರೆಗೂ ಆಂಬುಲೆನ್ಸ್​ಗೆ ದಾರಿ ಮಾಡಿಕೊಡದೇ ಪುಂಡಾಟ ಮೆರೆದಿದ್ದ.

ಈ ಸಂಬಂಧ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಆಂಬುಲೆನ್ಸ್​ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಬೈಕ್​ ಸವಾರನ ವಿರುದ್ಧ ಬಂಟ್ವಾಳ ನಗರ ಠಾಣಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ .

Also Read : ಧರ್ಮಸ್ಥಳ ಬುರುಡೆ ಪ್ರಕರಣ : ಕೇಸ್‌ ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ ಎಸ್‌ಐಟಿ ನೋಟಿಸ್‌

Mangaluru Ambulance Biker Arrest

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories