ರಾಜಧಾನಿ ಮಂದಿಗೆ ಮೆಟ್ರೋದಿಂದ ಗುಡ್​ನ್ಯೂಸ್​..! ಭಾನುವಾರದಂದು ಮಧ್ಯರಾತ್ರಿಯರೆಗೂ ಸೇವೆ ವಿಸ್ತರಣೆ

ಇಂಡಿಯನ್​ ಪ್ರೀಮಿಯರ್​ ಲೀಗ್​ ಉದ್ಘಾಟನಾ ಪಂದ್ಯದ ಸಂದರ್ಭದಲ್ಲಿ ಅಭಿಮಾನಿಗಳ ಸುರಕ್ಷತಾ ದೃಷ್ಠಿಯಿಂದ ಬಿಎಂಆರ್​ಸಿಎಲ್​ ಮಧ್ಯರಾತ್ರಿ 2 ಗಂಟೆಯವರೆಗೂ ಪ್ರಯಾಣಿಕರಿಗೆ ತನ್ನ ಸೇವೆ ನೀಡಿತ್ತು. ಇದೀಗ ಭಾನುವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ (RCB Vs CSK 2026)​ ನಡುವೆ ಹಣಾಹಣಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಿಎಂಆರ್​ಸಿಎಲ್​ ಮಧ್ಯರಾತ್ರಿಯವರೆಗೂ ಸೇವೆ ನೀಡಲು ಮುಂದಾಗಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಭಾನುವಾರ ನಮ್ಮ ಮೆಟ್ರೋ ಮಧ್ಯರಾತ್ರಿ 2 ಗಂಟೆಯವರೆಗೂ ಸಂಚರಿಸಲಿದೆ.

ಕೊನೆಯ ರೈಲುಗಳು, ‘ವೈಟ್‌ಫೀಲ್ಡ್ ನಿಂದ ರಾತ್ರಿ 12.30ಕ್ಕೆ ಮತ್ತು ಚೆಲ್ಲಘಟ್ಟ ದಿಂದ ರಾತ್ರಿ 12.45 ಗಂಟೆಗೆ ಹೊರಡಲಿವೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ ರಾತ್ರಿ 12.45 ಗಂಟೆಗೆ ಇನ್ನೂ ಬೊಮ್ಮಸಂದ್ರ ದಿಂದ ರಾತ್ರಿ 12.30 ಹಾಗೂ ಆರ್.ವಿ. ರಸ್ತೆಯಿಂದ ರಾತ್ರಿ 02.00ಕ್ಕೆ ಕೊನೆಯ ರೈಲು ಹೊರಡುತ್ತವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡತ್ತವೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಭಾನುವಾರ ಬಹುನಿರೀಕ್ಷಿತ ಚೆನ್ನೈ ವರ್ಸಸ್​ ಆರ್​ಸಿಬಿ ಮ್ಯಾಚ್​ : ಕೇವಲ 60 ಸೆಕೆಂಡುಗಳಲ್ಲಿ ಟಿಕೆಟ್ಸ್​ ಸೋಲ್ಡ್​ಔಟ್

ಐಪಿಎಲ್​ ಪಂದ್ಯಗಳ ಟಿಕೆಟ್​​ನಲ್ಲಿ ಮೆಟ್ರೋ ಪ್ರಯಾಣದ ಕ್ಯೂಆರ್​ ಕೋಡ್​ ನೀಡಲಾಗಿರುತ್ತದೆ. ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ, ನಿರ್ಗಮನ ಗೇಟ್‌ ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಸಬೇಕಿದೆ. ಲಿಂಕ್ ರಸ್ತೆ ಭಾಗದಿಂದ ಪ್ರವೇಶ, ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಮೂಲಕ ಬರುವಂತೆ ಬಿಎಂಆರ್​ಸಿಎಲ್​ ಮಾಹಿತಿ ನೀಡಿದೆ.

ಇನ್ನು ಇದರ ಜೊತೆಯಲ್ಲಿ ತಾಂತ್ರಿಕ ಕೆಲಸದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್​ಸಿಎಲ್​ ಮನವಿ ಮಾಡಿದೆ. 9 ಗಂಟೆಯ ಬಳಿಕ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಎಂದಿನಂತೆ ನಡೆಯಲಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories