ಈ ಬಾರಿಯೂ ನಾನೇ, 2028ರಲ್ಲಿಯೂ ನಾನೇ ಸಿಎಂ : ಸದನದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ಭಾರೀ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಇದೇ ಅಸ್ತ್ರವಾಗಿಸಿಕೊಂಡ ಬಿಜೆಪಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್​ ಮೇಲೆ ಮುಗಿಬೀಳಲು ಯತ್ನಿಸುತ್ತಿದೆ. ಆದರೆ ಸದನದಲ್ಲಿ ವಿಪಕ್ಷಗಳ ಮಾತಿಗೆ ಸಿಎಂ ಸಿದ್ದರಾಮಯ್ಯ ಗುಡುಗಿದ್ದು ಅಹಿಂದ ನಾಯಕನ ಹೇಳಿಕೆಗೆ ಡಿಕೆ ಬಣ ಕಂಗಾಲಾಗಿದೆ.

ಕುರ್ಚಿ ಕಾಳಗದ ವಿಚಾರವಾಗಿ ವಿಪಕ್ಷಗಳ ಮಾತಿಗೆ ಆಕ್ರೋಶ ಭರಿತರಾಗಿಯೇ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಇಂದಿಗೂ ನಾನೇ ಸಿಎಂ ಅಷ್ಟೇ ಏಕೆ 2028ರಲ್ಲಿಯೂ ನಾನೇ ಸಿಎಂ ಎಂದು ಹೇಳಿದ್ದಾರೆ. ಈ ಹೇಳಿಕೆಯು ವಿಪಕ್ಷಗಳ ಬಾಯಿ ಮುಚ್ಚಿಸೋದು ಹಾಗಿರಲಿ ಡಿ.ಕೆ ಬಣಕ್ಕೆ ಹೊಸ ಟೆನ್ಶನ್​ ತಂದೊಡ್ಡಿದೆ.
ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಸರ್ಕಾರ ರಚನೆ ಮಾಡಿದ್ದೇವೆ. ಇದನ್ನು ನನ್ನ ಸರ್ಕಾರ ಎಂದು ಹೇಳಬಾರದು. ನಮ್ಮ ಸರ್ಕಾರ ಎಂದೇ ಹೇಳಬೇಕು. ಹೈಕಮಾಂಡ್​ ಹೇಳುವವರೆಗೂ ನಾನೇ ಸಿಎಂ, ಈ ಐದು ವರ್ಷ ಮಾತ್ರವಲ್ಲ, 2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ, ಆಗಲೂ ಕರ್ನಾಟಕದ ಸಿಎಂ ಸ್ಥಾನ ನಾನೇ ಅಲಂಕರಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಮಾನಯಾನಕ್ಕೆ ₹47 ಕೋಟಿಗೂ ಅಧಿಕ ಖರ್ಚು ಮಾಡಿದ ಸ’ಮಜಾ’ವಾದಿ ಸಿಎಂ ಸಿದ್ದರಾಮಯ್ಯ..!

ಹೇಗಾದರೂ ಮಾಡಿ ಈ ಬಾರಿಯೇ ಡಿ.ಕೆ ಶಿವಕುಮಾರ್​ ಸಿಎಂ ಖುರ್ಚಿಯಲ್ಲಿ ಕೂರುವ ಕನಸು ಕಾಣ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಈ ಬಾರಿ ಹಾಗಿರಲಿ, ಮುಂದಿನ ಬಾರಿಯೂ ನಾನೇ ಸಿಎಂ ಎಂದು ಹೇಳಿದ್ದನ್ನು ನೋಡಿದರೆ ಡಿಕೆಶಿ ಪಾಲಿಗೆ ಸಿಎಂ ಕುರ್ಚಿ ಕೈಗೆಟುಕದ ದ್ರಾಕ್ಷಿ ಎಂಬಂತೆ ಭಾಸವಾಗುತ್ತಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories