Vastu Tips: ಮುರಿದ ಆಟಿಕೆಗಳು ಜಾಸ್ತಿ ದಿನ ಮನೆಯಲ್ಲಿಯೇ ಇದ್ರೆ ಏನಾಗತ್ತೆ? ವಾಸ್ತು ಹೇಳುವುದೇನು?

ಮಕ್ಕಳ ಮುರಿದ ಆಟಿಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಏನೆಲ್ಲಾ ಅನಾನುಕೂಲಗಳು ಉಂಟಾಗಬಹುದು? ವಾಸ್ತು ಸಲಹೆ ಏನು?

Vastu Tips: ಪುಟ್ಟ ಮಕ್ಕಳು ಮನೆಯಲ್ಲಿದ್ದಾರೆ ಅಂದ್ರೆ ಆ ಮನೆಯಲ್ಲಿ ಆಟಿಕೆಗಳ ದೊಡ್ಡ ರಾಶಿಯೇ ಇರುತ್ತದೆ ಎಂದರೂ ತಪ್ಪಾಗಲಾರದು. ಕೆಲವೊಂದಿಷ್ಟು ಮಕ್ಕಳು ಆಸೆ ಪಟ್ಟಿದ್ದಾದರೆ, ಇನ್ನು ಕೆಲವು ಮಕ್ಕಳು ಆಡಲಿ ಎಂದು ಪೋಷಕರು ಖರೀದಿಸಿ ತಂದಿರುತ್ತಾರೆ. ಮಕ್ಕಳ ಹುಟ್ಟಿದ ಹಬ್ಬದ ಸಮಯದಲ್ಲೂ ಆಟಿಕೆಗಳನ್ನು ಉಡುಗೊರೆಯಾಗಿ ಕೊಡುವುದನ್ನು ಕಾಣಬಹುದು. ಇವೆಲ್ಲವೂ ಸೇರಿ ಆಟಿಕೆಗಳು ಮನೆಯ ತುಂಬೆಲ್ಲಾ ಇರುತ್ತವೆ. ಆಟ ಆಡುವ ಉತ್ಸಾಹದಲ್ಲಿ ಆಟಿಕೆಗಳನ್ನು ಮುರಿದುಕೊಳ್ಳುವುದು ಸಹಜ. ಹಾಗಾಗಿ ಆಟಿಕೆಗಳ ರಾಶಿಯಲ್ಲಿ ಒಳ್ಳೆಯ ಆಟಿಕೆಗಳ ಜೊತೆಗೆ ಮುರಿದ, ಹಾಳಾದ ಆಟಿಕೆಗಳು ಇರುತ್ತವೆ. ಆದರೆ ಮನೆಯ ಎಲ್ಲೆಂದರಲ್ಲಿ ಮುರಿದ, ಹಾಳದ ಆಟಿಕೆಗಳು ಇರುವುದು ಶುಭವಲ್ಲ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ. ಅದರ ಪ್ರಕಾರ ಮುರಿದ, ಹಾಳಾದ ಆಟಿಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅನೇಕ ತೊಂದರೆಗಳಿಗೆ ಜಾಗ ಮಾಡಿಕೊಟ್ಟಂತೆ ಎಂದು ಹೇಳುತ್ತದೆ. ಮಕ್ಕಳ ಮುರಿದ ಆಟಿಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಏನೆಲ್ಲಾ ಅನಾನುಕೂಲಗಳು ಉಂಟಾಗಬಹುದು ಎಂದು ನೋಡೋಣ.

ಮನೆಯಲ್ಲಿ ಮುರಿದ ಆಟಿಕೆಗಳನ್ನು ಇಟ್ಟುಕೊಳ್ಳುವುದರಿಂದ ಆಗುವ ಅನಾನಕೂಲಗಳೇನು?

ವಾಸ್ತು ಪ್ರಕಾರ ಮುರಿದ ವಸ್ತುಗಳು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತವೆ. ಮನೆಯಲ್ಲಿ ತೊಂದರೆಗಳು ಪ್ರಾರಂಭವಾಗುತ್ತವೆ. ಇದರಿಂದ ಕಿರಿಕಿರಿ, ಒತ್ತಡ, ವಿದ್ಯಾಭ್ಯಾಸ ಅಡ್ಡಿಯಾಗಬಹುದು. ಕ್ಷುಲ್ಲಕ ಕಾರಣಕ್ಕೆ ಕೌಟಂಬಿಕ ಘರ್ಷಣೆ ಉಂಟಾಗುತ್ತದೆ. ಆರ್ಥಿಕ ಸಂಕಷ್ಟ ಮತ್ತು ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗಬಹುದು.

ಮುರಿದ ಆಟಿಕೆಗಳನ್ನು ಬೇರೆಯವರಿಗೆ ಕೊಡುವುದು ಸರಿಯಾ?

ವಾಸ್ತು ಪ್ರಕಾರ ಮುರಿದು ಹೋದ ಆಟಿಕೆಗಳನ್ನು ಎಂದಿಗೂ ಯಾರಿಗೂ ದಾನ ಮಾಡಬಾರದು. ಒಂದು ವೇಳೆ ದಾನ ಮಾಡಿದರೆ ದಾನ ತೆಗೆದುಕೊಂಡ ಮಕ್ಕಳಿಗೂ ತೊಂದರೆಗಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಅವುಗಳನ್ನು ಎಸೆಯುವುದೇ ಉತ್ತಮ. ಭಾನುವಾರ ಮತ್ತು ಗುರುವಾರದಂದು ಮುರಿದ ಆಟಿಕೆಗಳನ್ನು ಮನೆಯಿಂದ ಹೊರಗೆ ಎಸೆಯುವುದು ಶುಭವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಶುಭ ಕಾರ್ಯಗಳಲ್ಲಿ 1 ರೂಪಾಯಿಗೆ ಏಕಿಷ್ಟು ಮಹತ್ವ? ಧಾರ್ಮಿಕ ನಂಬಿಕೆಯ ಜೊತೆಗೆ ವೈಜ್ಞಾನಿಕ ಕಾರಣ ಹೀಗಿದೆ

ಯಾವ ಸ್ಥಳದಲ್ಲಿ ಮುರಿದ ಆಟಿಕೆಗಳಿದ್ದರೆ ಹೆಚ್ಚು ತೊಂದರೆ?

ಮಕ್ಕಳು ಓದುವ ಟೇಬಲ್‌ ಮೇಲೆ ಹಾಗೂ ಈಶಾನ್ಯ ಮೂಲೆಯಲ್ಲಿ ಮುರಿದ ಆಟಿಕೆಗಳನ್ನು ಇಡಬೇಡಿ. ಅದರಿಂದ ಅವರ ಏಕಾಗ್ರತೆ ಕ್ಷೀಣಿಸಬಹುದು. ಜೊತೆಗೆ ದೇವರ ಮನೆಯಲ್ಲೂ ಇಡಬೇಡಿ. ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಜೊತೆಗೆ ವಾಸ್ತು ದೋಷಕ್ಕೂ ಕಾರಣವಾಗುತ್ತದೆ.

ಮುರಿದ ಆಟಿಕೆಗಳನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬಹುದು?

ಮೊದಲನೆಯದಾಗಿ ಮುರಿದ ಆಟಿಕೆಗಳನ್ನು ಮನೆಯಲ್ಲಿ ಇರಿಸಿಕೊಳ್ಳಲೇ ಬಾರದು. ಹಾಗೊಂದುವೇಳೆ ಇಟ್ಟುಕೊಳ್ಳಬೇಕೆನಿಸಿದರೆ ಅವುಗಳನ್ನು ನೈರುತ್ಯ ಮೂಲೆಯಲ್ಲಿಡಿ. ಏಕೆಂದರೆ ನೈರುತ್ಯ ದಿಕ್ಕಿನಲ್ಲಿ ಇಡುವುದರಿಂದ ವಾಸ್ತು ದೋಷ ಸ್ವಲ್ಪ ಕಡಿಮೆ. ಆದರೂ ಬಹಳ ದಿನಗಳವರೆಗೆ ಮುರಿದ ಆಟಿಕೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories