Dahi Paneer Recipe: ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್ ದಹಿ ಪನೀರ್
Dahi Paneer Recipe : ಭಾರತದ ಆಹಾರ ಪದ್ಧತಿಯಲ್ಲಿ ಪನೀರ್ಗೆ ವಿಶೇಷ ಮಹತ್ವ ನೀಡಲಾಗಿದೆ. ಪನೀರ್ ಮಸಾಲಾ, ಪನೀರ್ ಟೀಕಾ, ಕಡಾಯಿ ಪನೀರ್, ಪಾಲಕ್ ಪನೀರ್ ಒಂದೇ ಎರಡೇ, ಪನೀರ್ ನಿಂದ ತರೇವಾರಿ ಅಡುಗೆಗಳನ್ನು ತಯಾರಿಸಲಾಗುತ್ತದೆ.
ಎಲ್ಲಾ ವಯೋಮಾನದವರು ಇಷ್ಟ ಪಡುವ ಪನೀರ್ ಒಂದು ಸಸ್ಯಾಹಾರಿ. ಹೋಟೆಲ್, ರೆಸ್ಟೋರೆಂಟ್ಗಳ ಡಿಶ್ಗಳಲ್ಲಿ ಪನೀರ್ ನಿಂದ ತಯಾರಿಸುವ ಅಡುಗೆಗಳಿಗೆ ಅಗ್ರ ಸ್ಥಾನ.
ಅಲ್ಲಿನ ಪನೀರ್ನ ಸ್ವಾದಿಷ್ಟ ಅಡುಗೆಗಳ ರುಚಿ ಜಿವ್ಹಾ ಚಪಲವನ್ನು ತಣಿಸುತ್ತದೆ. ಹಾಗೆಂದು ಪ್ರತಿಸಲ ರೆಸ್ಟೋರೆಂಟ್ಗಳಿಗೆ ಹೋಗಿ ಅದನ್ನು ಸವಿಯುವುದು ಆಗದ ಮಾತು.
ಆದ್ದರಿಂದ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಅಡುಗೆಗಳನ್ನು ಕಲಿತರೆ ನಮಗೆ ಬೇಕಾದಾಗಲೆಲ್ಲಾ ಮಾಡಿ ಸವಿಯಬಹುದು.
ಆದರೆ ಪ್ರತಿಬಾರಿ ಒಂದೇ ರುಚಿಯ ಪನೀರ್ ಅಡುಗೆಗಳನ್ನು ಮಾಡಿದರೆ ಅದು ತಿಂದು ಬೇಸರ ಮೂಡಬಹುದು. ಡಿಫರೆಂಟ್ ಆಗಿ ದಹಿ ಪನೀರ್ ಅನ್ನು ಟ್ರೈ ಮಾಡಿ ನೋಡಿ.
ಸುಲಭವಾಗಿ ಹಾಗೂ ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ದಹಿ ಪನೀರ್ ತಯಾರಿಸುವುದು ಹೇಗೆ ಎಂದು ನೋಡೋಣ.
ಇದನ್ನೂ ಓದಿ: ಈರುಳ್ಳಿ ಪಕೋಡಾ ತಿಂದು ಬೇಜಾರಾಗಿದ್ಯಾ; ಸುರಿಯೋ ಮಳೆಯಲ್ಲಿ ಸವಿಯಿರಿ ಸೋರೆಕಾಯಿ ಪಕೋಡಾ
Dahi Paneer Recipe: ದಹಿ ಪನೀರ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಪನೀರ್ – 400 ಗ್ರಾಂ
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 2 ಚಮಚ
ಜೀರಿಗೆ ಪುಡಿ – 2 ಟೀ ಚಮಚ
ಅರಿಶಿನ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 2 ಚಮಚ
ಕಪ್ಪು ಉಪ್ಪು – 1 ಚಮಚ
ಸಾಸಿವೆ ಎಣ್ಣೆ – 1/4 ಕಪ್
ಗೋಡಂಬಿ – 100 ಗ್ರಾಂ
ಮೊಸರು –1 ಬಟ್ಟಲು
ಅಡುಗೆ ಎಣ್ಣೆ – 2 ಚಮಚ
ಬೆಣ್ಣೆ– 1 ಚಮಚ
ಜೀರಿಗೆ -1 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿರು ಮೆಣಸಿನಕಾಯಿಗಳು – 4 ರಿಂದ 5
ಕಸೂರಿ ಮೇಥಿ -1 ಚಮಚ
ಕೊತ್ತೊಂಬರಿ ಸೊಪ್ಪು – 1 ಚಮಚ
ದಹಿ ಪನೀರ್ (Dahi Paneer Recipe) ತಯಾರಿಸುವ ವಿಧಾನ
ದಹಿ ಪನೀರ್ ತಯಾರಿಸಲು ಮೊದಲಿಗೆ ಪನೀರ್ ಅನ್ನು ತುಂಡುಗಳನ್ನಾಗಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಕತ್ತರಿಸಿದ ಪನೀರ್ ತೆಗೆದುಕೊಳ್ಳಿ.
ಅದಕ್ಕೆ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
ನಂತರ ಬೇಯಿಸಿದ ಗೋಡಂಬಿಗೆ ಸ್ವಲ್ಪ ನೀರು ಬರೆಸಿ ಪೇಸ್ಟ್ ಮಾಡಿಕೊಳ್ಳಿ.
ಈಗ ದಹಿ ಮಿಶ್ರಣ ತಯಾರಿಸಿಕೊಳ್ಳಲು ಮೊಸರನ್ನು ತೆಗೆದುಕೊಂಡು ಅದಕ್ಕೆ ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ, ಕಪ್ಪು ಉಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ನಂತರ ಒಂದು ಪ್ಯಾನ್ನಲ್ಲಿ ಎಣ್ಣೆ ಮತ್ತು ಬೆಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ, ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
ಒಂದು ನಿಮಿಷ ಹುರಿದುಕೊಳ್ಳಿ. ಅದಕ್ಕೆ ಕಸೂರಿ ಮೇಥಿ ಸೇರಿಸಿ ಮತ್ತೊಂದು ನಿಮಿಷ ಹುರಿಯಿರಿ. ಈಗ ಅದಕ್ಕೆ ಮ್ಯಾರಿನೇಟ್ ಮಾಡಿದ ಪನೀರ್ ಸೇರಿಸಿ.
ಪನೀರ್ ಚೆನ್ನಾಗಿ ಹುರಿದ ನಂತರ, ದಹಿ ಮಿಶ್ರಣ ಮತ್ತು ಗೋಡಂಬಿ ಪೇಸ್ಟ್ ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ನಂತರ ಸ್ವಲ್ಪ ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ರುಚಿಯಾದ ದಹಿ ಪನೀರ್ ಸವಿಯಲು ರೆಡಿ. ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್ ಆಗಿರುವ ದಹಿ ಪನೀರ್ ಲಂಚ್ ಬಾಕ್ಸ್ಗೂ ಉತ್ತಮವಾಗಿದೆ.
ಇದನ್ನೂ ಓದಿ: Avalakki Bath Recipe : ಚಿತ್ರಾನ್ನ ತಿನ್ನುವ ಬದಲು ಅವಲಕ್ಕಿ ಬಾತ್ (ಪೋಹಾ) ತಿನ್ನಿರಿ



