ನಿಮಗೆ ಅರಿಯದಂತೆ ಆರೋಗ್ಯ ಹಾಳು ಮಾಡುತ್ತಿವೆ ಮನೆಯಲ್ಲಿರುವ ಈ ಮೂರು ವಸ್ತುಗಳು

Lifestyle news: ಮನೆಯ ಅಲಂಕಾರಕ್ಕೆ ನಾವು ಅನೇಕ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಆದರೆ ನಾವು ಅಲಂಕಾರಕ್ಕೆಂದು ಬಳಸುವ ಕೆಲ ವಸ್ತುಗಳು ನಮಗೆ ಲಾಭಕ್ಕಿಂತ ಜಾಸ್ತಿ ನಷ್ಟವನ್ನೇ ತರಬಹುದು. ನಮಗೆ ಅರಿವಿಲ್ಲದಂತೆ ನಾವೇ ಹಣಕೊಟ್ಟು ಮನೆಗೆ ವಿಷವನ್ನು ತಂದಿಟ್ಟಿರಬಹುದು.

ಅಮೆರಿಕ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್​ ಎಂಬವರು ಡೇಂಜರ್​ ಗೃಹೋಪಯೋಗಿ ವಸ್ತುಗಳನ್ನು ಪಟ್ಟಿ ಮಾಡಿದ್ದು ಇದರಲ್ಲಿ ಯಾವೆಲ್ಲ ವಸ್ತುಗಳು ಸ್ಥಾನ ಪಡೆದಿವೆ ಎಂಬುದನ್ನು ತಿಳಿದುಕೊಳ್ಳೋಣ.

ಈ ಪಟ್ಟಿಯಲ್ಲಿ ಸ್ಥಾನಪಡೆದಿರುವ ಪ್ರಮುಖ ಮೂರು ವಸ್ತುಗಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಕೆಯಲ್ಲಿದೆ. ಇವುಗಳು ರಹಸ್ಯವಾಗಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದೆ ಎಂದು ಡಾ. ಸೌರಭ್​ ಹೇಳಿದ್ದಾರೆ. ಹೀಗಾಗಿ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಕೂಡಲೇ ಅವುಗಳನ್ನು ಕಸದ ಡಬ್ಬಿಗೆ ಹಾಕುವ ಸಲಹೆ ನೀಡಿದ್ದಾರೆ ಡಾ. ಸೌರಭ್​.

ಈ ಮೂರು ವಸ್ತುಗಳನ್ನು ಎಂದಿಗೂ ನಿಮ್ಮ ಮನೆಗೆ ಖರೀದಿಸಿ ತರಬೇಡಿ

ಸುಗಂಧದ್ರವ್ಯಯುಕ್ತ ಮೇಣದಬತ್ತಿ

Lifestyle News: ಅನೇಕರು ಮನೆಯಲ್ಲಿ ಸಂಜೆ ಸಮಯದಲ್ಲಿ ಸುಗಂಧವನ್ನು ಸ್ರವಿಸುವ ಮೇಣದಬತ್ತಿಯನ್ನು ಹಚ್ಚುತ್ತಾರೆ. ಆದರೆ ಬಹುತೇಕ ಪರಿಮಳಯುಕ್ತ ಮೇಣದಬತ್ತಿಗಳು ಥಾಲೇಟ್​ಗಳನ್ನು ಹೊಂದಿರುತ್ತದೆ.ಇವುಗಳು ನಮ್ಮ ದೇಹದಲ್ಲಿ ಹಾರ್ಮೋನ್​ಗಳ ಕಾರ್ಯಕ್ಕೆ ಅಡ್ಡಿಪಡಿಸುತ್ತವೆ. ಅಲ್ಲದೇ ಇವುಗಳು ಶ್ವಾಸಕೋಶದ ಆರೋಗ್ಯಕ್ಕೂ ಸೂಕ್ತವಾದದ್ದಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟಿಕ್​ ಕಟ್ಟಿಂಗ್​ ಬೋರ್ಡ್​ಗಳು :

ಇದಂತೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕಾಣಸಿಗುತ್ತದೆ. ತರಕಾರಿ ಕತ್ತರಿಸಲು ಬಹುತೇಕರು ಇದನ್ನು ಬಳಕೆ ಮಾಡುತ್ತಾರೆ. ಆದರೆ ನಿಮ್ಮ ಮನೆಯಲ್ಲಿರುವ ಪ್ಲಾಸ್ಟಿಕ್​ ಕಟ್ಟಿಂಗ್​ ಬೋರ್ಡ್​ಗಳ ಮೇಲಿರುವ ಚಾಕುವಿನ ಗುರುತುಗಳನ್ನೊಮ್ಮೆ ಗುರುತಿಸಿ.

ಇದರಲ್ಲಿ ಕತ್ತರಿಸಿದ ತರಕಾರಿಗಳ ಸೇವನೆಯಿಂದ ದೇಹದ ಒಳಗೆ ಮೈಕ್ರೋಪ್ಲಾಸ್ಟಿಕ್​ಗಳು ಸೇರುತ್ತದೆ. ಕ್ರಮೇಣವಾಗಿ ಇದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದರ ಬದಲು ಬಿದಿರಿನ ಅಥವಾ ಗಾಜಿನ ಬೋರ್ಡ್​ಗಳನ್ನು ಬಳಕೆ ಮಾಡಬಹುದಾಗಿದೆ.

Also Read: ಕರ್ಪೂರದಲ್ಲಿದೆ ವಾಸ್ತು ದೋಷಕ್ಕೆ ಪರಿಹಾರ

ನಾನ್​ಸ್ಟಿಕ್​ ಪಾತ್ರೆಗಳು :

ನಾನ್​ಸ್ಟಿಕ್​ ಪಾತ್ರೆಗಳನ್ನು ಈಗ ಬಹುತೇಕರು ಬಳಕೆ ಮಾಡುತ್ತಾರೆ. ಆದರೆ ಇದರ ಮೇಲೆ ಬೀಳುವ ಒಂದೇ ಒಂದು ಗೀರು ಸಾಕಷ್ಟು ತೊಂದರೆಗಳಿಗೆ ಕಾರಣವಾಗಬಹುದು. PFOA ರಾಸಾಯನಿಕಗಳು ಇದು ಸಂತಾನೋತ್ಪತ್ತಿ ಮತ್ತು ಹಾರ್ಮೋನುಗಳ ಸಮಸ್ಯೆಗಳಿಗೆ ಸಂಬಂಧಿಸಿದ ರಾಸಾಯನಿಕವಾಗಿದೆ.

ಈಗ ಮಾರುಕಟ್ಟೆಗಳಲ್ಲಿ PFOA-ಮುಕ್ತವಾಗಿರುವ ಆಧುನಿಕ ನಾನ್-ಸ್ಟಿಕ್ ಪ್ಯಾನ್‌ಗಳು ಸಹ ಲಭ್ಯವಿದೆ. ಆದರೂ ಈ ಗೀರು ಬಿದ್ದಾಗ ಈ ಪಾತ್ರೆಗಳು ಸಹ ಸೂಕ್ಷ್ಮ ಲೇಪನ ಕಣಗಳನ್ನು ಬಿಡುಗಡೆ ಮಾಡಬಹುದು. ಕಾಲಾಂತರದಲ್ಲಿ ಈ ಪಾತ್ರೆಗಳನ್ನು ಬಿಸಿ ಮಾಡಿದಾಗ ವಿಷದಂಶ ಬಿಡುಗಡೆಯಾಗುತ್ತದೆ ಎಂದು ತಿಳಿದುಬಂದಿದೆ.

ಹೀಗಾಗಿ ಸ್ಟೇನ್​ಲೆಸ್​ ಸ್ಟೀಲ್​ಗಳು, ಕಬ್ಬಿಣ, ಸೆರಾಮಿಕ್​ ಕುಕ್​ವೇರ್​ಗಳನ್ನು ಬಳಕೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಉತ್ತಮ ಆಯ್ಕೆಯಾಗಿದೆ. ಇವುಗಳ ನಿರ್ವಹಣೆ ಕೊಂಚ ಕಷ್ಟವಾಗಿದ್ದರೂ ಸಹ ಆರೋಗ್ಯದ ಮೇಲೆ ಅಡ್ಡಪರಿಣಾಮ ಇರುವುದಿಲ್ಲ

Also Read: ದೀಪಾವಳಿ 2025 ಯಾವಾಗ? ದಿನಾಂಕ, ತಿಥಿ, ಪೂಜಾ ಸಮಯ ತಿಳಿಯಿರಿ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories