ಒಂದೇ ರೀತಿಯ ಪುಲಾವ್ ತಿಂದು ಬೇಜಾರಾಗಿದ್ರೆ, ಡಿಫರೆಂಟ್ ಆಗಿ ಟೊಮೊಟೊ ಪುಲಾವ್ ತಯಾರಿಸಿ
Tomato Pulao Recipe: ಪ್ರತಿದಿನ ಒಂದೇ ರೀತಿಯ ಊಟ ಯಾರಿಗಾದರೂ ಬೇಸರ ತರಿಸುತ್ತದೆ. ಅದಕ್ಕಾಗಿಯೇ ಹೊಸ ಹೊಸ ರುಚಿ ಪ್ರಯತ್ನಿಸಿ ಸವಿಯುತ್ತಾರೆ. ಆದರೆ ಕೆಲವೊಮ್ಮೆ ಸಮಯ ಬಹಳ ಕಡಿಮೆಯಿರುತ್ತದೆ.
ಆದರೂ, ಏನಾದರೂ ಮಸಾಲೆಯುಕ್ತ, ಜಿಹ್ವಾ ಚಪಲ ತೀರಿಸುವ ಅಡುಗೆ ಬೇಕೆನಿಸುತ್ತಿರುತ್ತದೆ. ಹಾಗೆ ನೀವೂ ಕೂಡ ಯೋಚಿಸುತ್ತಿದ್ದರೆ ಇಲ್ಲಿದೆ ರುಚಿಕರವಾದ, ಅಷ್ಟೇ ಸುಲಭವಾಗಿ ತಯಾರಿಸಬಹುದಾದ ಟೊಮೆಟೊ ಪುಲಾವ್.
ಹುಳಿ, ಖಾರ, ಸಿಹಿ ಮಿಶ್ರಿತ ಟೊಮೆಟೊ ಪುಲಾವ್ ಮಧ್ಯಾಹ್ನದ ಲಂಚ್ ಬಾಕ್ಸ್‌ಗೆ ಹಾಗೂ ರಾತ್ರಿಯ ಊಟ ಎರಡಕ್ಕೂ ಸೂಪರ್ ಆಗಿರುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಅಡುಗೆಯನ್ನು ಮಾಡುವುದು ಹೇಗೆ ಎಂದು ನೋಡೋಣ.
ಟೊಮೆಟೊ ಪುಲಾವ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ: 1 ಕಪ್
ಟೊಮ್ಯಾಟೊ: ಮಧ್ಯಮ ಗಾತ್ರದಲ್ಲಿ ಕತ್ತರಿಸಿದ 2 ದೊಡ್ಡ ಟೊಮೆಟೊ
ಈರುಳ್ಳಿ: ಮಧ್ಯಮ ಗಾತ್ರದಲ್ಲಿ ಕತ್ತರಿಸಿದ 1 ಈರುಳ್ಳಿ
ಹಸಿರು ಬಟಾಣಿ ಮತ್ತು ಗೋಡಂಬಿ: ಕಾಲು ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ
ಹಸಿ ಮೆಣಸಿನಕಾಯಿ: 2
ಪುಲಾವ್ ಪುಡಿ: 1 ಚಮಚ
ಅರಿಶಿಣ ಪುಡಿ:ಅರ್ಧ ಟೀ ಚಮಚ
ಕೆಂಪು ಮೆಣಸಿನ ಪುಡಿ: ಅರ್ಧ ಚಮಚ
ಜೀರಿಗೆ: 1 ಚಮಚ
ಎಣ್ಣೆ/ತುಪ್ಪ: 2 ಚಮಚ
ಉಪ್ಪು: ರುಚಿಗೆ ತಕ್ಕಂತೆ
ಸಕ್ಕರೆ/ಬೆಲ್ಲ : ಕಾಲ ಚಮಚ
ನೀರು: 2 ಕಪ್
ಕೊತ್ತಂಬರಿ ಸೊಪ್ಪು: ಸ್ವಲ್ಪ
ಇದನ್ನೂ ಓದಿ: ಬಿಸಿ ಬಿಸಿ ಪಾವ್ ಭಾಜಿ: ಸಿಂಪಲ್ ಆಗಿ ಕೇವಲ ಹದಿನೈದೇ ನಿಮಿಷದಲ್ಲಿ ಹೀಗೆ ತಯಾರಿಸಿ
ಟೊಮೆಟೊ ಪುಲಾವ್ ತಯಾರಿಸುವ ವಿಧಾನ
– ಮೊದಲು ಅಕ್ಕಿಯನ್ನು ತೊಳೆದು 15-20 ನಿಮಿಷ ನೆನೆಸಿಡಿ. ಇದರಿಂದ ಅಕ್ಕಿ ಮೃದುವಾಗಿ ಮತ್ತು ಉದುರಾಗುತ್ತದೆ.
– ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿ ಮಾಡಿ.
– ಎಣ್ಣೆ ಬಿಸಿಯಾದ ನಂತರ ಜೀರಿಗೆ ಸೇರಿಸಿ.
– ಈಗ ಅದಕ್ಕೆ ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
– ಈರುಳ್ಳಿ ಹುರಿದ ನಂತರ, ಹಸಿರು ಬಟಾಣಿ, ಗೋಡಂಬಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ. ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
– ಈಗ ಹೆಚ್ಚಿಟ್ಟ ಟೊಮೆಟೊ ಸೇರಿಸಿ, ಒಂದು ನಿಮಿಷ ಹುರಿಯಿರಿ. ನಂತರ ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಪುಲಾವ್ ಮಸಾಲಾ ಪುಡಿ, ಸಕ್ಕರೆ/ಬೆಲ್ಲ ಸೇರಿಸಿ. ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 1 ರಿಂದ 2 ನಿಮಿಷ ಹುರಿಯಿರಿ.
– ನೆನೆಸಿದ ಅಕ್ಕಿಯಿಂದ ನೀರನ್ನು ಬಸಿದು ಕುಕ್ಕರ್ ಗೆ ಹಾಕಿ. ಅಕ್ಕಿಯನ್ನು ಮಸಾಲೆಗಳೊಂದಿಗೆ ನಿಧಾನವಾಗಿ 1 ನಿಮಿಷ ಹುರಿಯಿರಿ.
– ಈಗ ಅದಕ್ಕೆ ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
– ಕುಕ್ಕರ್ ನ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ಸೀಟಿ ಹಾಕಿಸಿ.
– ಕುಕ್ಕರ್ ತಣ್ಣಗಾದ ನಂತರ ಮುಚ್ಚುಳ ತರೆಯಿರಿ. ಈಗ ಅದಕ್ಕೆ ಕೊತ್ತೊಂಬರಿ ಸೊಪ್ಪು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಉ
– ರುಚಿಕರ ಟೊಮೆಟೊ ಪುಲಾವ್ ಸವಿಯಲು ಸಿದ್ಧ. ಮೊಸರು ಬಜ್ಜಿಯ ಜೊತೆ ಸರ್ವ್ ಮಾಡಿ.
ರುಚಿಯಾಗಿರುವ ಈ ರೀತಿಯ ಅನ್ನದ ಅಡುಗೆಗಳು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ, ಜೊತೆಗೆ ಅವರ ಲಂಚ್ ಬಾಕ್ಸ್‌ಗೂ ಉತ್ತಮವಾಗಿದೆ.
ಇದನ್ನೂ ಓದಿ: Sprouts Seed Pulao Recipe: ಆರೋಗ್ಯಕರ ರೈಸ್ ಐಟಮ್: ಮೊಳಕೆ ಕಾಳಿನ ಪುಲಾವ್ ರೆಸಿಪಿ ಹೀಗೆ ತಯಾರಿಸಿ
(quick and easy tomato pulao recipe suitable for lunch box and dinner)



