Mary Kom: ಮೇರಿ ಕೋಮ್‌ಗೆ ವ್ಯಾಪಕ ಛೀಮಾರಿ, ಮದುವೆ-ಡಿವೋರ್ಸ್ ವಿವಾದಕ್ಕೆ ಏನು ಕಾರಣ?
Mary Kom Marriage and divorce: ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆ ಇದೆ, ಅದು ಬೀದಿಗೆ ಬಂದ್ರೆ ಹೇಗೆ ಜನರ ಬಾಯ್ಚಪಲಕ್ಕೆ ಸಲ್ಲೋ ಉಪ್ಪಿನಕಾಯಿ ಆದೀತು ಅನ್ನೋದಕ್ಕೆ ಈ ಎರಡು ಭಾರತದ ಶ್ರೇಷ್ಠ ಕ್ರೀಡಾಪಟುಗಳೇ ಸಾಕ್ಷಿ. ಅವಳು ಮೇರಿ ಕೋಮ್ ಭಾರತದ ಹೆಮ್ಮೆ, ಆತ ಒಕ್ಲೆನ್ ಕೋಮ್ ಭಾರತದ ಫುಟ್‌ಬಾಲ್ ಪ್ರಪಂಚಕ್ಕೆ ಒಂದು ಆಸ್ತಿ. ಆದರೆ ತದ್ವಿರುದ್ದವೆಂಬಂತೆ ಒಂದು ಬೈಟಕ್ ಅಲ್ಲಿ ಮುಗಿಯಬಹುದಾದ ಸಣ್ಣ ಗೊಂದಲಗಳನ್ನು ಪರದೆಯ ಮುಂದೆ ಹಿಡಿದು ಇಬ್ಬರೂ ಮಸಿ ಬಳಿದುಕೊಂಡರಾ? ಅನ್ನೋ ಯೋಚನೆ ಬರದೇ ಇರಲು ಸಾಧ್ಯವಿಲ್ಲ.
ಮೇರಿ ಕೋಮ್ ನೀವು ಹೇಳಿದ್ದು ಸರೀನಾ?
ಮೇರಿ ಕೋಮ್ ಜನಪ್ರಿಯ ಶೋ ಆದ ʼಆಪ್ ಕಿ ಅದಾಲತ್ʼನಲ್ಲಿ ನಿರೂಪಕ ಕೇಳಿದ ಒಂದು ಪ್ರಶ್ನೆಗೆ ಮೇರಿ ಕೋಮ್ ಉತ್ತರಿಸಿದ ಧಾಟಿ ಎಲ್ಲಾ ಗಂಡಸರಿಗೂ ನೋವು ಮಾಡಿತ್ತು, ಅಲ್ಲದೇ ನೈಜ ಮಹಿಳಾವಾದ ಇದೇನಾ? ಎಂದು ಎಲ್ಲರೂ ವ್ಯಂಗ್ಯವಾಡುವಂತೆಯೂ ಮಾಡಿತ್ತು, ಅಸಲಿಗೆ ಆಗಿದ್ದು ಏನೆಂದರೆ ನಿರೂಪಕ ʼನಿಮ್ಮ ಗಂಡನ ತ್ಯಾಗದ ಬಗ್ಗೆ ಏನು ಹೇಳುತ್ತೀರಿ? ಓಕ್ಲೇನ್ ಕೋಮ್ ಅವರು ತಮ್ಮ ಯಶಸ್ವಿ ಫುಟ್ ಬಾಲ್ ಜೀವನವನ್ನು ನಿಮ್ಮ ಭವಿಷ್ಯ ಹಾಗೂ ಮಕ್ಕಳಿಗಾಗಿ ತ್ಯಾಗ ಮಾಡಿದ್ದಾರೆ ಅಲ್ವೇ?ʼ ಎಂದಾಗ ʼಎಲ್ಲಿಯ ತ್ಯಾಗ? ಹೆಂಡತಿಯ ದುಡಿಮೆಯಲ್ಲಿ ಕೂತು ಊಟ ಮಾಡೋದು ಎಲ್ಲಿಯ ಗಂಡಸ್ತನ? ಆತ ಗಲ್ಲಿ ಫುಟ್‌ಬಾಲರ್ ನನ್ನ ಯಶಸ್ವಿ ಆಟಗಾರ ಅಲ್ಲ, ಇಷ್ಟೂ ದಿನ ಆತ ನನ್ನ ದುಡ್ಡು ಉಡಾಯಿಸಿದʼ ಎನ್ನುತ್ತಾರೆ.
ಇದನ್ನೂ ಓದಿ: ಡಿಜಿಪಿ ಕೆ. ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್
ದೋಸೆ ತಿರುವಿದ ಮೇರಿ ಕೋಮ್!
ಆದರೆ ಅವರ ಮೊದಲಿನ ಇಂಟರ್ ವ್ಯೂ ನೋಡಿದಾಗ ʼಗಂಡನ ಸಪೋರ್ಟ್ ಇಲ್ಲದೇ ನಾನೇನು ಮಾಡಲು ಸಾಧ್ಯವಿಲ್ಲ, ಅವರ ತ್ಯಾಗವೇ ನನ್ನನ್ನು ಇಲ್ಲಿಯ ತನಕ ಕರೆತಂದದ್ದುʼ ಎಂದು ಹೇಳಿದ ವಿಡಿಯೋಗಳು ಜಾಲತಾಣದ ತುಂಬೆಲ್ಲಾ ಹರಿದಾಡಿವೆ. ಇದರ ಹಿಂದಿನ ಕಾರಣ ಏನು? ಎಂದು ಹುಡುಕಾಡಿದಾಗ ನಿಜಕ್ಕೂ ಆಶ್ಚರ್ಯಕರ ವಿಷಯ ತಿಳಿದು ಬರುತ್ತೆ.
ಮೇರಿ ಕೋಮ್ ಅಫೇರ್ ಇಷ್ಟೆಲ್ಲಕ್ಕೂ ಕಾರಣವೇ?
ಆಕೆ ತನ್ನನ್ನು ಸಮರ್ಥಿಸಿಕೊಳ್ಳಲು ನನ್ನ ಗಂಡ ನನ್ನ ಹಣದಲ್ಲಿ ನನಗೆ ಗೊತ್ತಿಲ್ಲದೇ ದುಡ್ಡು ಮಾಡಿದ, ನನಗೆ ಗೊತ್ತಿಲ್ಲದೇ ಮನೆ, ಜಾಗ ಖರೀದಿಸಿ ಫ್ರಾಡ್ ಮಾಡಿದ ಅನ್ನೋದು. ಆದರೆ ಓಕ್ಲೇನ್ ಹೇಳೋದು ಏನೆಂದರೆ ನಾನು ಅದ್ಯಾವುದೂ ಮಾಡಿಲ್ಲ, ಆದರೆ ಇಲ್ಲಿ ಆಗಿದ್ದೇ ಬೇರೆ 2013 ಹಾಗೂ 2017 ರಲ್ಲಿ ಆಕೆ ಅಕ್ರಮ ಸಂಬಂಧ ಹೊಂದಿದ್ದಳು ಹಾಗೆಯೇ ಅದರ ಹಿಂದೆಯೇ ಹಿತೇಶ್ ಚೌಧರಿ ಹಾಗೂ ಮತ್ತೊಬ್ಬ ಜೂನಿಯರ್ ಬಾಕ್ಸರ್ ನ ಹೆಸರು ಬಹಿರಂಗಗೊಳಿಸಿದರು. ಇದನ್ನು ಮೇರಿಕೊಮ್ ತಳ್ಳಿ ಹಾಕಿದ್ದಾರೆ.
ಮಕ್ಕಳ ಗತಿ ಏನು?
ಒಟ್ಟಾರೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ನನ್ನ ಹೆಸರಲ್ಲಿ ಗಂಡ ಮಾಡಿದ್ದಾನೆ ಎಂದು ಆಕೆ ಹಾಗೆಯೇ ನನಗೆ ಅಫೇರ್ ಇಟ್ಕೊಂಡು ಈಕೆ ಮೋಸ ಮಾಡಿದ್ದಾಳೆ ಎಂದು ಗಂಡ ಪರಸ್ಪರ ದೋಷಾರೋಪ ಮಾಡಿದ್ದು ಇಬ್ಬಂದಿಯಾಗಿ ಮಕ್ಕಳು ಸಿಲುಕಿರುವುದು ಮಾತ್ರ ವಿಪರ್ಯಾಸ ಎನಿಸಿದೆ.



