ಕರಾವಳಿಯಲ್ಲಿ ಗಾಳಿ ಮಳೆ ಆರ್ಭಟ : ಜುಲೈ 21ರವರೆಗೆ ಬಾರೀ ಮಳೆ ಎಚ್ಚರಿಕೆ

ಉಡುಪಿ / ಮಂಗಳೂರು : ಕರಾವಳಿಯ ಹಲವೆಡೆ ಬಾರೀ ಮಳೆಯಾಗುವ (Extreme Rain Alert) ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಜುಲೈ 21ರ ವರೆಗೆ ಮುಂದುವರಿಕೆಯಾಗಲಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜುಲೈ 15 ರಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದಿದೆ. ಈ ಹಿನ್ನೆಲೆಯಲ್ಲಿ ಜುಲೈ 21ರ ವರೆಗೆ ಆರೆಂಜ್ ಆಲರ್ಟ್ ಘೋಷಿಸಲಾಗಿದೆ.
Extreme Rain Alert : ಕರಾವಳಿಯಲ್ಲಿ 200 ಮಿ.ಮೀ. ಮಳೆ
ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 15 ರಿಂದ ಜುಲೈ 21 ರವರೆಗೆ ಕನಿಷ್ಠ 115 ಮಿಲಿಮೀಟರ್‌ನಿಂದ 200 ಮಿಲಿಮೀಟರ್‌ವರೆಗೂ “ಭಾರಿ ಅತಿ ಭಾರಿ ಮಳೆಯಾಗಲಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸೇರಿದಂತೆ ಮೂರು ಜಿಲ್ಲೆಗಳಿಗೆ ಜುಲೈ 16 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಒಳನಾಡು ಕರ್ನಾಟಕ (ಉತ್ತರ ಮತ್ತು ದಕ್ಷಿಣ ಒಳನಾಡು): ಈ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜುಲೈ 15 ರಂದು ದಕ್ಷಿಣ ಒಳನಾಡಿನ ಕೆಲವು ಭಾಗಗಳಿಗೆ “ಭಾರೀ ಮಳೆ” ಗೆ ಅಲರ್ಟ್ ಇದೆ.
Also Read : ಕಾರ್ಕಳ ಪರಶುರಾಮನ ಮೂರ್ತಿ ಹಿತ್ತಾಳೆ, ಫೈಬರ್ ಅಂದವರಿಗೆ ಹಿನ್ನೆಡೆ : ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಕೆ
ಬೆಂಗಳೂರಿನ ಕೆಲವು ಕಡೆಗಳಲ್ಲಿ ಭಾಗಶಃ ಮಳೆಯಾಗಲಿದೆ. ಆದರೆ ಜುಲೈ 17 ಮತ್ತು 18ರಂದು ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
Extreme Rain Alert : ಜುಲೈನಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ
ಜುಲೈ ತಿಂಗಳು ಕರ್ನಾಟಕದಲ್ಲಿ ಮುಂಗಾರು ಮಳೆಯ ಸಕ್ರಿಯ ಅವಧಿಯಾಗಿದೆ. ಸಾಮಾನ್ಯವಾಗಿ, ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತದೆ.
ಆದರೆ ಬಯಲುಸೀಮೆ ಮತ್ತು ಒಳನಾಡಿನಲ್ಲಿ ಸಾಧಾರಣ ಮಳೆಯಾಗುತ್ತದೆ. ಈ ವರ್ಷ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ 15 ರಂದು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಒಳನಾಡಿನ ಕೆಲವು ಭಾಗಗಳಲ್ಲೂ ಮಳೆಯಾಗಲಿದೆ.
Also Read : ಪಿಎಂ ಕಿಸಾನ್ ಸಮ್ಮಾನ ಯೋಜನೆ : 20ನೇ ಕಂತಿನ ಹಣ ಬಿಡುಗಡೆ, ಚೆಕ್ ಮಾಡುವುದು ಹೇಗೆ ?
ಪ್ರವಾಸಿಗರು ಮತ್ತು ನಿವಾಸಿಗಳು ಹವಾಮಾನ ಇಲಾಖೆಯ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
Extreme Rain Alert In Coastal Karnataka Udupi Mangalore in Kannada News



