ಹೊಸ ವರ್ಷದ ಸಂಭ್ರಮಾಚರಣೆಗೆ ಪೊಲೀಸರಿಂದ ಬ್ರೇಕ್ : ರೇವ್ ಪಾರ್ಟಿಗಿಲ್ಲ ಅವಕಾಶ
ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದ್ದು ಹೊಸ ವರ್ಷಾಚರಣೆಯ ನೆಪದಲ್ಲಿ ರೇವ್ ಪಾರ್ಟಿ ಸೇರಿದಂತೆ ಇನ್ನಿತರ ಯಾವುದೇ ಅಕ್ರಮ ಪಾರ್ಟಿಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಮಹಿಳೆಯರಿಗೆ ಉಂಟಾಗದಂತೆ ಹೆಲ್ತ್ ಡೆಸ್ಕ್ ಸ್ಥಾಪನೆ ಮಾಡಲಾಗುತ್ತಿದೆ. ರಾಣಿ ಚೆನ್ನಮ್ಮ ಪಡೆಗಳು ಕಾರ್ಯನಿರ್ವಹಿಸಲಿವೆ. ಮಹಿಳೆಯರು ಕೆಎಸ್ಪಿ ಆ್ಯಪ್ ಮುಖಾಂತರ ಪೊಲೀಸರ ನೆರವು ಪಡೆಯಬಹುದು. ನಮ್ಮ 112ಗೆ ಕರೆ ಮಾಡಿದರೂ ಪೊಲೀಸರ ತಕ್ಷಣ ಸ್ಪಂದನೆ ಸಿಗಲಿದೆ.
ಓಲಾ ಹಾಗೂ ಊಬರ್ ಕಂಪನಿಗಳೂ ಪೊಲೀಸ್ ಇಲಾಖೆಯೊಂದಿಗೆ ಜೈ ಜೋಡಿಸಿದ್ದು ಎರಡೂ ಕಂಪನಿಗಳ ಆ್ಯಪ್ಗಳಲ್ಲಿ ಪೊಲೀಸರ ಸಹಾಯವಾಣಿಯನ್ನು ತೆರಯಲಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮಾತ್ರವಲ್ಲದೇ ಬೆಂಗಳೂರು ನಗರದಾದ್ಯಂತ ಸಿಸಿ ಕ್ಯಾಮರಾ ಹಾಗೂ ಎಐ ಕ್ಯಾಮರಾಗಳ ಸಂಖ್ಯೆ ಹೆಚ್ಚಿಸಲಾಗಿದ್ದು ಎಲ್ಲೆಡೆ ಹದ್ದಿನ ಕಣ್ಣಿಡಲಿದ್ದೇವೆ ಎಂದು ನಗರ ಪೊಲೀಸ್ ಆಯಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಹೌಸಿಂಗ್ ಸೊಸೈಟಿ ಸೈಟುಗಳು ಕಡಿಮೆ ಬೆಲೆಗೆ ಸಿಗುವುದೇಕೆ? ಖರೀದಿಸುವ ಮುನ್ನ ಈ ಅಪಾಯಗಳ ಬಗ್ಗೆ ತಿಳಿದಿರಲಿ!
ಒಟ್ನಲ್ಲಿ ಈ ಬಾರಿಯ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ. ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದ್ದು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸರ್ವ ಸನ್ನದ್ಧವಾಗಿದೆ.



