ಬೆಂಗಳೂರಿನಲ್ಲಿ ಇನ್ಮುಂದೆ ಲಂಡನ್ ಅನುಭವ : ಸಿಟಿಯಲ್ಲಿ ಸಂಚರಿಸಲಿದೆ ಡಬಲ್ ಡೆಕ್ಕರ್ ಬಸ್
ರಾಜ್ಯ ರಾಜಧಾನಿ ಬೆಂಗಳೂರಿನ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಸೇವೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಬಸ್ಗೆ ಸಚಿವ ಎಚ್.ಕೆ ಪಾಟೀಲ ಚಾಲನೆ ನೀಡಿದ್ರು.
ಮೈಸೂರು ದಸರಾ ಸಂದರ್ಭದಲ್ಲಿ ಎಲ್ಲರ ಕಣ್ಮನ ಸೆಳೆದಿದ್ದ ಈ ಬಸ್ ಇನ್ಮುಂದೆ ರಾಜ್ಯ ರಾಜಧಾನಿಯಲ್ಲೂ ಸಂಚರಿಸಲಿದೆ. ಕೇವಲ 180 ರೂಪಾಯಿ ಪಾವತಿಸಿ ಈ ಬಸ್ ಏರುವ ಮೂಲಕ ಸಿಟಿ ಮಂದಿ ಲಂಡನ್ ಮಾದರಿಯ ಪ್ರಯಾಣದ ಅನುಭವ ಪಡೆಯಬಹುದಾಗಿದೆ.
ಐಷಾರಾಮಿ ಆಸನಗಳು, ಸೌಂಡ್ ಸಿಸ್ಟಂ ಸೇರಿದಂತೆ ನಾನಾ ಸೌಕರ್ಯಗಳನ್ನು ಬಸ್ಗೆ ನೀಡಲಾಗಿದೆ. ಪ್ರಯಾಣಿಕರು ಆನ್ಲೈನ್ ಇಲ್ಲವೇ ದೂರವಾಣಿ ಕರೆ ಮೂಡಕ ಸೀಟು ಬುಕ್ ಮಾಡಿ ದಿನವಿಡೀ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ: ಬಸ್ ಅಗ್ನಿ ದುರಂತ ತಡೆಗೆ ಹೊಸ ಕ್ರಮ : ಬಸ್ ಮಾಲೀಕರಿಗೆ ಈ 8 ನಿಯಮ ಪಾಲನೆ ಕಡ್ಡಾಯ
ಈ ವಿಚಾರವಾಗಿ ಮಾತನಾಡಿದ ಸಚಿವ ಎಚ್.ಕೆ ಪಾಟೀಲ, ಬೆಂಗಳೂರು ಇದುವರೆಗೂ ಒಂದು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿಲ್ಲ. ಇಲ್ಲಿ ವಿಧಾನಸೌಧ ಸೇರಿದಂತೆ ಸಾಕಷ್ಟು ವಿಶ್ವ ಮಟ್ಟದಲ್ಲಿ ಖ್ಯಾತಿಪಡೆದ ಸ್ಥಳಗಳಿವೆ. ಇನ್ಮುಂದೆ ಈ ಬಸ್ ಪ್ರಯಾಣದ ಮೂಲಕ ಪ್ರವಾಸದ ಅನುಭವ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.



