ಕರಾವಳಿ ಭಾಗದ ಜನತೆಗೆ ಕಾದಿದ್ಯಾ ಸಿಹಿಸುದ್ದಿ : ಶೀಘ್ರದಲ್ಲೇ ವಂದೇ ಭಾರತ್​ ರೈಲು..!?

ರಾಜ್ಯ ರಾಜಧಾನಿಯಿಂದ ರಾಜ್ಯ ಕರಾವಳಿ ಭಾಗವನ್ನೂ ಒಳಗೊಂಡು ಗೋವಾಕ್ಕೆ ತೆರಳಲು ಹೈ ಸ್ಪೀಡ್​ ರೈಲು ಸಂಪರ್ಕ ಬೇಕು ಎಂಬುದು ಬಹುದಿನಗಳ ಬೇಡಿಕೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್​.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದು ಕರಾವಳಿಗರಲ್ಲಿ ಮತ್ತೊಮ್ಮೆ ವಂದೇ ಭಾರತ್​ ರೈಲಿನ ಕನಸು ಚಿಗುರೊಡೆದಿದೆ.
ಬೆಂಗಳೂರು – ಮಂಗಳೂರು – ಕಾರವಾರ – ಮಡಂಗಾವ್​ ಮಾರ್ಗವಾಗಿ ವಂದೇಭಾರತ್​ ಎಕ್ಸ್​ಪ್ರೆಸ್​ ರೈಲು ಆರಂಭಿಸಿ ಎಂದು ಮನವಿ ಮಾಡಿ ಕೇಂದ್ರ ರೈಲ್ವೆ ಸ್ವಚಿವ ಅಶ್ವಿನಿ ವೈಷ್ಣವ್​ ಅವರಿಗೆ ಪತ್ರ ಬರೆಯಲಾಗಿದೆ.
ಕರ್ನಾಟಕ ಕರಾವಳಿ ಪ್ರದೇಶ ಹಾಗೂ ಗೋವಾ ನಡುವೆ ವೇಗವಾಗ ರೈಲು ಸಂಪರ್ಕದ ಅಗತ್ಯವಿದೆ. ಈಗಾಗಲೇ ಘಾಟ್​ ಪ್ರದೇಶದ ರೈಲ್ವೇ ಮಾರ್ಗದ ವಿದ್ಯುದೀಕರಣದ ಕಾಮಗಾರಿ ಕೂಡ ಪೂರ್ಣಗೊಂಡಿದೆ. ಹೀಗಾಗಿ ವಂದೇಭಾರತ್​ ರೈಲು ಈ ಮಾರ್ಗದಲ್ಲಿ ಆರಂಭಿಸಲು ಯಾವುದೇ ತಾಂತ್ರಿಕ ತೊಂದರೆಗಳಿಲ್ಲ. ಆದ್ದರಿಂದ ಬೆಂಗಳೂರು-ಮಂಗಳೂರು-ಕಾರವಾರ-ಮಡಗಾವ್ ಮಾರ್ಗದಲ್ಲಿ ಶೀಘ್ರದಲ್ಲಿಯೇ ವಂದೇ ಭಾರತ್​ ರೈಲು ಆರಂಭಿಸುವಂತೆ ಪತ್ರದಲ್ಲಿ ಎಚ್​ಡಿಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಟಾಟಾ vs ಅದಾನಿ: ಭಾರತದ ಬಲಿಷ್ಠ ಕಂಪನಿಗಳ ಮಹಾಕಾಳಗ ಶುರು!

ಕರಾವಳಿ ಭಾಗದ ಜನತೆ ಈ ಮಾರ್ಗದಲ್ಲಿ ರೈಲು ಆರಂಭಿಸಬೇಕೆಂದು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಪ್ರವಾಸೋದ್ಯಮ, ವಾಣಿಜ್ಯದ ದೃಷ್ಠಿಯಿಂದ ಈ ರೈಲು ಸಾಕಷ್ಟು ಜನರಿಗೆ ಲಾಭ ತಂದುಕೊಡಲಿದೆ. ಅಲ್ಲದೇ ಕರ್ನಾಟಕ ಹಾಗೂ ಗೋವಾ ಸಂಪರ್ಕವನ್ನು ಈ ರೈಲು ಮಾರ್ಗವು ಬಲಪಡಿಸಲಿದೆ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories