Oppo Find X8 Pro Price Drops: ಓಪ್ಪೋ ಮುಂದಿನ ತಿಂಗಳು ಭಾರತದಲ್ಲಿ ಫೈಂಡ್ X9 ಸರಣಿ ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
ಅದಕ್ಕೂ ಮುನ್ನ ಕಂಪನಿಯು ಈಗಾಗಲೇ ಬಹು ಬೇಡಿಕೆಯಲ್ಲಿರುವ ಮಾದರಿಗಳ ಬೆಲೆಯನ್ನು ಕಡಿತಗೊಳಿಸಿದೆ. ಇ–ಕಾಮರ್ಸ್ ಫ್ಲಾಟ್‌ಫಾರ್ಮ್ ಕ್ರೋಮಾದಲ್ಲಿ ಈ ರಿಯಾಯಿತಿ ಡೀಲ್‌ಗಳನ್ನು ಸಕ್ರಿಯಗೊಳಿಸಿದೆ.
ಓಪ್ಪೋದ ಫೈಂಡ್ X8 ಪ್ರೋ ಗಮನಾರ್ಹ ರಿಯಾಯಿತಿಯನ್ನು ಪಡೆದುಕೊಂಡು ಗ್ರಾಹಕರನ್ನು ಆಕರ್ಷಿಸಲು ಸಜ್ಜಾಗಿದೆ. ಪ್ರಬಲ ಕ್ಯಾಮೆರಾ ಹೊಂದಿರುವ ಈ ಫೋನ್ ಪೋಟೋಗ್ರಾಫಿಯ ಬಗ್ಗೆ ಒಲವು ಇದ್ದವರ ನೆಚ್ಚಿನ ಫೋನ್ ಆಗಿದೆ.
ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಆಕರ್ಷಕ ವಿನ್ಯಾಸ ಹೊಂದಿರುವ ಪ್ರೀಮಿಯಂ ಸ್ಮಾರ್ಟ್‌ಪೋನ್ ಖರೀದಿಸುವ ಆಸೆಯಿದ್ದರೆ ಈ ಉತ್ತಮ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.
ಓಪ್ಪೋ ಫೈಂಡ್ X8 ಪ್ರೋ ರಿಯಾಯಿತಿ ಕೊಡುಗೆ ಏನು?
ಕಳೆದ ವರ್ಷ ಓಪ್ಪೋ ಈ ಶಕ್ತಿಶಾಲಿ ಫೋನ್ ಅನ್ನು ಬಿಡುಗಡೆ ಮಾಡಿತ್ತು. 99,999 ರೂ. ಗಳ ಆರಂಭಿಕ ಬೆಲೆಯಲ್ಲಿ ಈ ಫೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು.
ಆದರೆ ಈಗ ಈ ಪ್ರೀಮಿಯಂ ಸ್ಮಾಟ್‌ಪೋನ್ ಅನ್ನು ಇ–ಕಾಮರ್ಸ್ ವೇದಿಕೆ ಕ್ರೋಮಾದಲ್ಲಿ ಕೇವಲ 86,999 ರೂ.ಗೆ ಖರೀದಿಸಬಹುದಾಗಿದೆ. ಅಂದರೆ ಈ ಫೋನ್ ಮೇಲೆ 13,000 ರೂ. ಗಳ ಸಂಪೂರ್ಣ ರಿಯಾಯಿತಿ ಲಭ್ಯವಿದೆ.
ಇದನ್ನೂ ಓದಿ: ಬಿಡುಗಡೆಗೆ ಸಜ್ಜಾದ ಒನ್‌ಪ್ಲಸ್ 15: ಇನ್ಮುಂದೆ ನಿರಂತರ ಫೋನ್ ಬಳಸಿದರೂ ಬಿಸಿಯಾಯಿತೆಂಬ ಚಿಂತೆ ಇಲ್ಲ
ಓಪ್ಪೋ ಫೈಂಡ್ X8 ಪ್ರೊ ವೈಶಿಷ್ಟ್ಯ
ಓಪ್ಪೋದ ಫೈಂಡ್ X8 ಪ್ರೋ ಫೋನ್, 120Hz ರಿಫ್ರೆಶ್ ದರ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ 6.78-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ.
ಇದು 4,500 ನಿಟ್‌ಗಳವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ. ಇದರಿಂದ ಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇದು ಪ್ರಬಲವಾದ ಮೀಡಿಯಾ ಟೆಕ್ 9400 ಚಿಪ್‌ಸೆಟ್ ಮತ್ತು 5,910mAh ಬ್ಯಾಟರಿಯಿಂದ ಚಲಿಸುತ್ತದೆ.
80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.
ಇನ್ನು ಫೋನ್ ಛಾಯಾಗ್ರಹಣವಂತೂ ಸಾಕಷ್ಟು ಶಕ್ತಿಶಾಲಿಯಾಗಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
ಈ ಸಾಧನವು 50MP ಸೋನಿ LYT808 ಪ್ರಾಥಮಿಕ ಸಂವೇದಕವನ್ನು ಹೊಂದಿದೆ. 3x ಆಪ್ಟಿಕಲ್ ಜೂಮ್‌ನೊಂದಿಗೆ 50MP ಸೋನಿ LYT600 ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಸಹ ಹೊಂದಿದೆ.
ಈ ಫೋನ್ 6x ಆಪ್ಟಿಕಲ್ ಜೂಮ್ ಮತ್ತು 120x ಡಿಜಿಟಲ್ ಜೂಮ್‌ನೊಂದಿಗೆ 50MP ಸೋನಿ IMX858 ಸಂವೇದಕವನ್ನು ಮತ್ತು 50MP ಸ್ಯಾಮ್‌ಸಂಗ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಸಹ ಹೊಂದಿದೆ.
ಸೆಲ್ಫಿಗಳಿಗಾಗಿ, ಫೈಂಡ್ X8 ಪ್ರೊ ಸ್ಮಾರ್ಟ್‌ಫೋನ್ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ: ಬಂದೇ ಬಿಟ್ಟಿತು ಓಪನ್‌ಎಐ ನ ಚಾಟ್‌ಜಿಪಿಟಿ ಅಟ್ಲಾಸ್! ಗೂಗಲ್ ಕ್ರೋಮ್‌ನಿಂದ ಅದೆಷ್ಟು ಭಿನ್ನ?
(Oppo Find X8 Pro Price Drops are available with Rs 13000 discount in e-commerce platform Croma)

