ಬಿಡುಗಡೆಗೆ ಸಜ್ಜಾದ ಒನ್‌ಪ್ಲಸ್ 15: ಇನ್ಮುಂದೆ ನಿರಂತರ ಫೋನ್ ಬಳಸಿದರೂ ಬಿಸಿಯಾಯಿತೆಂಬ ಚಿಂತೆ ಇಲ್ಲ
OnePlus 15 Launch: ಒನ್‌ಪ್ಲಸ್ ತನ್ನ ಹೊಸ ಫ್ಲಾಗ್‌ಶಿಪ್‌ನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 15 ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
ಇದೇ ಅಕ್ಟೋಬರ್ 27ಕ್ಕೆ ಚೀನಾದಲ್ಲಿ ಬಿಡುಗಡೆ ಮಾಡಲಿದೆ. ಇದರ ನಂತರ ನವೆಂಬರ್‌ನಲ್ಲಿ ಜಗತ್ತಿನಾದ್ಯಂತ ಬಿಡುಗಡೆ ಮಾಡಲಿದೆ.
ಇದು ಒನ್‌ಪ್ಲಸ್ 13 ರ ಅಪ್‌ಗ್ರೇಡೆಡ್ ಆವೃತ್ತಿಯಾಗಿದೆ. ಕಂಪನಿಯು ಒನ್‌ಪ್ಲಸ್ 14 ಅನ್ನು ಸಂಪೂರ್ಣವಾಗಿ ಸ್ಕಿಪ್ ಮಾಡಿ ಅದರ ಹಿಂದಿನ ಆವೃತ್ತಿಯನ್ನು ಇದರಲ್ಲಿ ಮುಂದುವರಿಸಿದ್ದು ವಿಶೇಷವಾಗಿದೆ.
ಒನ್‌ಪ್ಲಸ್ 15 ವಿನ್ಯಾಸ
ಒನ್‌ಪ್ಲಸ್ 15 ಅನ್ನು ಸ್ಟೈಲಿಶ್ ಮತ್ತು ಹೆಚ್ಚು ಪ್ರೀಮಿಯಂ ಆಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಹಿಂಬದಿಯಲ್ಲಿ ಒನ್‌ಪ್ಲಸ್ 13 ರಂತೆ ಸ್ಕ್ವೇರ್ ಶೇಪ್‌ನಲ್ಲಿ ಕ್ಯಾಮೆರಾ ಮೊಡ್ಯೂಲ್‌ಅನ್ನು ನೀಡಲಾಗಿದೆ.
ಈ ಆವೃತ್ತಿಯ ಫೋನ್‌ನಲ್ಲಿ ಕಂಪನಿಯು ಸ್ಯಾಂಡ್‌ಸ್ಟೋರ್ಮ್ ಹೆಸರಿನ ಸ್ಯಾಂಡ್–ಇಂಸ್ಪಾಯರ್ಡ್ ಬಣ್ಣವನ್ನು ಪರಿಚಯಿಸುತ್ತಿದೆ. ಇದು ಉಳಿದ ಸ್ಮಾರ್ಟಫೋನ್‌ಗಿಂತ ವಿಭಿನ್ನ ಎನಿಸುವಂತೆ ತೋರಿಸುತ್ತದೆ.
ಇನ್ನು ಇದರ ಬಾಡಿಯನ್ನು ಏರೋಸ್ಪೇಸ್ ಗ್ರೇಡ್ ನ್ಯಾನೋ–ಸಿರಾಮಿಕ್ ಮೆಟಲ್ ಫ್ರೇಮ್‌ನಿಂದ ತಯಾರಿಸಲಾಗಿದೆ. ಹಾಗಾಗಿ ಇದು ಗಟ್ಟಿಮುಟ್ಟಾದ ಬಾಡಿಯನ್ನು ಹೊಂದಿದೆ ಎನ್ನಬಹುದಾಗಿದೆ.
ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಇದರಲ್ಲಿ IP68 ರೇಟಿಂಗ್ ಅಳವಡಿಸಲಾಗಿದೆ.
ಒನ್‌ಪ್ಲಸ್ 15 ಡಿಸ್ಪ್ಲೇ
ಒನ್‌ಪ್ಲಸ್ 15 ರಲ್ಲಿ 6.78 ಇಂಚಿನ ದೊಡ್ಡದಾದ 1.5K AMOLED ಡಿಸ್ಪ್ಲೇ ಅನ್ನು ನೀಡಲಾಗಿದೆ. ಇದು ಉತ್ಯುತ್ತಮ ಬಣ್ಣ ಮತ್ತು ಬ್ರೈಟ್‌ನೆಸ್ ಅನ್ನು ನೀಡುತ್ತದೆ.
ಇದರ ಸ್ಕ್ರೀನ್ ಕ್ರಿಸ್ಟಲ್ ಕ್ಲಿಯರ್‌ನಷ್ಟು ಹೊಳಪನ್ನು ನೀಡುತ್ತದೆ. ಇದರಿಂದ ಗೇಮಿಂಗ್ ಮತ್ತು ಮೂವಿ ನೋಡುವವರಿಗೆ ಉತ್ತಮ ಅನುಭವ ನೀಡುತ್ತದೆ.
ಇನ್ನು ಇದರ ರಿಫ್ರೆಶ್ ದರವು ಮೊದಲಿಗಿಂತಲೂ ಬಹಳಷ್ಟು ಸ್ಮೂತ್ ಅನುಭವ ನೀಡುತ್ತದೆ. ಇದರಲ್ಲಿ ನೀಡಿರುವ 165Hz ರಿಫ್ರೆಶ್ ದರವು ಸ್ಕೋಲಿಂಗ್, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಗೆ ಹೆಚ್ಚು ಅನುಕೂಲವಾಗಿದೆ.
ಇದನ್ನೂ ಓದಿ: ಬಂದೇ ಬಿಟ್ಟಿತು ಓಪನ್‌ಎಐ ನ ಚಾಟ್‌ಜಿಪಿಟಿ ಅಟ್ಲಾಸ್! ಗೂಗಲ್ ಕ್ರೋಮ್‌ನಿಂದ ಅದೆಷ್ಟು ಭಿನ್ನ?
ಹೇಗಿದೆ ಒನ್‌ಪ್ಲಸ್ 15ರ ಪ್ರೊಸೆಸ್ಸರ್
ಒನ್‌ಪ್ಲಸ್ 15 ಸ್ಮಾರ್ಟ್‌ಫೋನ್‌ಗೆ ಕ್ವಾಲ್ಕಮ್‌ನ ಹೊಚ್ಚಹೊಸ ಸ್ನಾಪ್‌ಡ್ರಾಗನ್ 8 ಇಲೈಟ್ ಜೆನ್ 5 ಚಿಪ್‌ಸೆಟ್ ನಿಂದ ಪವರ್ ನೀಡಲಾಗಿದೆ.
ಈ ಚಿಪ್‌ಸೆಟ್ ಸದ್ಯದ ವೇಗದ ಪ್ರೊಸೆಸ್ಸರ್ ಎಂದು ಹೇಳಲಾಗಿದೆ. ಇದು ಪ್ರೊಸೆಸ್ಸರ್‌ನ ಕ್ಷಮತೆಯ ಜೊತೆಗೆ ಬ್ಯಾಟರಿಯ ಕ್ಷಮತೆಯನ್ನು ಸಹ ಹೆಚ್ಚಿಸುತ್ತದೆ.
ಕ್ಯಾಮೆರಾ ವೈಶಿಷ್ಟ್ಯ
ಬಹಳ ವರ್ಷಗಳಿಂದ ಒನ್‌ಪ್ಲಸ್, ಹ್ಯಾಸಲ್‌ಬ್ಲಾಡ್ ಸಹಯೋಗದೊಂದಿಗೆ ಅಳವಡಿಸುವ ಕ್ಯಾಮೆರಾವನ್ನು ಉತ್ತಮ ಗುಣಮಟ್ಟದ ಕ್ಯಾಮೆರಾ ಎಂದು ಗುರುತಿಸಲಾಗಿದೆ.
ಆದರೆ ಈ ಬಾರಿ ಕಂಪನಿಯು ತನ್ನದೇ ಕ್ಯಾಮೆರಾವನ್ನು ಅಳವಡಿಸಿದೆ. ಹಾಗಾಗಿ ಒನ್‌ಪ್ಲಸ್ 15 ಸ್ವಯಂ ನಿರ್ಮಿತ ಕ್ಯಾಮೆರಾ ಫ್ಲಾಗ್‌ಶಿಪ್‌ನಿಂದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಈ ಕ್ಯಾಮೆರಾ ಇಂಜಿನ್‌ಗೆ ಡಿಟೇಲ್‌ಮ್ಯಾಕ್ಸ್ ಎಂದು ಹೆಸರಿಸಿದೆ. ಚೀನಾದಲ್ಲಿ ಇದನ್ನು ಲುಮೊ ಎಂದು ಕರೆಯಲಾಗಿದೆ.
ಇದರ ಉದ್ದೇಶ ಫೋಟೋಗಳಲ್ಲಿ ಹೆಚ್ಚಿನ ಡಿಟೇಲ್, ನ್ಯಾಚುರಲ್ ಟೋನ್ ಮತ್ತು ಉತ್ತಮ ಬಣ್ಣದ ಔಟ್‌ಪುಟ್ ನೀಡುವುದಾಗಿದೆ. ಇನ್ನು ಇದರ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ.
ಅದರಲ್ಲಿ ಮುಖ್ಯ ಲೆನ್ಸ್, ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಟೆಲಿಫೋಟೋ ಲೆನ್ಸ್ ಕಾಣಬಹುದಾಗಿದೆ. ಎಲ್ಲಾ ಕ್ಯಾಮೆರಾಗಳು 50 ಮೆಗಾಪಿಕ್ಸೆಲ್‌ಗಳಾಗಿದ್ದು, ಪ್ರತಿ ಫೋಟೋದಲ್ಲು ಹೆಚ್ಚಿನ ಸ್ಪಷ್ಟತೆಯನ್ನು ಖಚಿತಪಡಿಸುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಈ ಫೋನ್‌ನಲ್ಲಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಮತ್ತು ಹೆಚ್ಚು ಬಿಸಿಯಾಗದೇ ಇರುವ 7,300mAh ಸಾಮರ್ಥ್ಯದ “ಗ್ಲೇಸಿಯರ್ ಬ್ಯಾಟರಿ”ಯನ್ನು ಅಳವಡಿಸಿದೆ.
ಇದು ಹೊಸ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತಿರುವುದರಿಂದ ದೀರ್ಘಕಾಲದ ಬಳಕೆಯಲ್ಲಿಯೂ ಫೋನ್ ಅನ್ನು ತಂಪಾಗಿರಿಸುತ್ತದೆ.
ಇನ್ನು ಇದರ ಚಾರ್ಜಿಂಗ್ ವಿಷಯಕ್ಕೆ ಬಂದಾಗ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಅರ್ಥ ಈ ಫೋನ್ ಅನ್ನು ಕೆಲವೇ ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಬಹುದಾಗಿದೆ.
ಬೆಲೆ ಎಷ್ಟಿರಬಹುದು?
ಭಾರತದಲ್ಲಿ ನವೆಂಬರ್ ತಿಂಗಳಿನಲ್ಲಿ ನಿರೀಕ್ಷಿಸಬಹುದಾದ ಈ ಫೋನ್‌ನ 16GB RAM ಮತ್ತು 512GB ಸ್ಟೊರೇಜ್ ಮಾದರಿಯ ಬೆಲೆ 1,11,165 ರೂ. (1,260 ಡಾಲರ್) ಎಂದು ಅಂದಾಜಿಸಲಾಗಿದೆ.
ಸ್ಟೈಲಿಶ್, ಶಕ್ತಿಶಾಲಿ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್ ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುವುದು ಖಚಿತವೆಂದು ತೋರುತ್ತಿದೆ.
ಇದನ್ನೂ ಓದಿ: 50MP ಸೆಲ್ಪಿ ಕ್ಯಾಮೆರಾ, 200MP ಮೇನ್ ಕ್ಯಾಮೆರಾ ಇರುವ ವಿವೋ V60e ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆ
(OnePlus preparing to unveil OnePlus 15 phone soon know the specifications and expected price)


