Realme GT ಹೊಸ ಸ್ಮಾರ್ಟ್ಫೋನ್ : 10,000mAh ಬ್ಯಾಟರಿ, 10 ನಿಮಿಷಕ್ಕೆ ಬ್ಯಾಟರಿ ಚಾರ್ಜ್

Realme GT : ದೀರ್ಘಾವಧಿ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವಂತಹ ಸ್ಮಾರ್ಟ್ಫೋನ್ ಖರೀದಿ ಮಾಡುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಎಷ್ಟೇ ಹಣಕೊಟ್ಟು ಮೊಬೈಲ್ ಖರೀದಿಸಿದರೂ ಬ್ಯಾಟರಿ ಸಾಮರ್ಥ್ಯ ಸಮಾಧಾನ ಎನಿಸುವುದಿಲ್ಲ.
ಆದರೆ ಇದೀಗ ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿ ಎಂಬಂತೆ Realme ಅತೀ ಹೆಚ್ಚು ಕಾಲ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯದ ಮೊಬೈಲ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಈ ವರ್ಷದ ಆರಂಭದಲ್ಲಿ Realme ಕಂಪನಿಯು 10,000mAh ಸಾಮರ್ಥ್ಯದ ಬ್ಯಾಟರಿಯುಳ್ಳ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿತ್ತು. ಆದರೆ ಇದೀಗ ಇದಕ್ಕೂ ಹೆಚ್ಚು ಸಾಮರ್ಥ್ಯದ ಮೊಬೈಲ್ ಕೂಡ Realme ಕಡೆಯಿಂದ ಮಾರುಕಟ್ಟೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೊಬೈಲ್ನಲ್ಲಿ ವೈಡ್ ಚಾರ್ಜಿಂಗ್ ಸ್ಪೀಡ್ ಇರಲಿದೆ. ಆಗಸ್ಟ್ 27ರಂದು ಈ ಹೊಸ ಮೊಬೈಲ್ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. Realme ಕಂಪನಿಯು ಟ್ವೀಟ್ ಮಾಡಿರುವ ಪ್ರಕಾರ 320W ಫಾಸ್ಟ್ ಚಾರ್ಜಿಂಗ್ ಹಾಗೂ 10,000mAh ಬ್ಯಾಟರಿ ಸಾಮರ್ಥ್ಯದ ಮೊಬೈಲ್ಫೋನ್ ಮಾರುಕಟ್ಟೆಯಲ್ಲಿದೆ.
ಇದನ್ನೂ ಓದಿ : BBSNL 4G ಬಳಕೆದಾರರಿಗೆ ಸಿಹಿಸುದ್ದಿ : ಕೇವಲ 1 ರೂಪಾಯಿಗೆ, 30 ದಿನ ವ್ಯಾಲಿಡಿಟಿ, ಅನಿಯಮಿತ ಕರೆ
ಮುಂದೆ ಏನು ಬರಬಹುದು ? ಎಂದು ಕೇಳಲಾಗಿದೆ. ಇಲ್ಲಿಯವರೆಗೆ ಕಂಪನಿಯು ಮುಂದೆ ಲಾಂಚ್ ಆಗಲಿರುವ ಸ್ಮಾರ್ಟ್ಫೋನ್ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಈ ಟ್ವೀಟ್ನ ಮೂಲಕ ಮುಂದೆ ಬರುವ ಸ್ಮಾರ್ಟ್ಫೋನ್ ಇನ್ನೂ ಹೆಚ್ಚಿನ ಸಾಮರ್ಥ್ಯವುಳ್ಳ ಬ್ಯಾಟರಿ ಹೊಂದಿದೆ ಎಂಬುದರ ಬಗ್ಗೆ ಸುಳಿವು ನೀಡಿದೆ.
ಮೇ ತಿಂಗಳಲ್ಲಿ ಈ ಕಂಪನಿಯು Realme GT ಕಾನ್ಸೆಪ್ಟ್ ಪರಿಚಯಿಸಿತ್ತು. ಇದರಲ್ಲಿ 10,000mAh ಬ್ಯಾಟರಿ ಹಾಗೂ 320W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಫೋನ್ಗಳು 8.5mmಗಿಂತಲೂ ಸಪೂರವಾಗಿದೆ.
ಇದನ್ನೂ ಓದಿ : ನೀವು ಬಾಯಲ್ಲಿ ಹೇಳಿದ್ರೆ ಪೋಟೋ ಎಡಿಟ್ : ಗೂಗಲ್ AI ಹೊಸ ಫೀಚರ್ಸ್ ರಿಲೀಸ್
200 ಗ್ರಾಂಕ್ಕಿಂತ ತುಸು ಹೆಚ್ಚು ತೂಕವನ್ನು ಹೊಂದಿವೆ. ಇದು Realme ಕಂಪನಿಯ ಅತಿ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಫೋನ್ ಆಗಿದ್ದು ಚೀನಾ ವೇರಿಯಂಟ್ನಲ್ಲಿ ಮಾತ್ರ ಲಭ್ಯವಿದೆ. ಮುಂಬರುವ Realme ಸ್ಮಾರ್ಟ್ಫೋನ್ ಯಾವೆಲ್ಲ ವಿಶೇಷತೆಗಳನ್ನು ಹೊಂದಿರಬಹುದು ಎಂಬುದನ್ನು ಕಾದು ನೋಡೋಣ.
Realme GT new smartphone 10000mAh battery charge in 10 minutes



