BSNLನ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್: ಪ್ರತಿದಿನ 2GB ಡೇಟಾ, 100 SMS, ಅನ್‌ಲಿಮಿಟೆಡ್ ಕರೆ, 72 ದಿನಗಳ ವ್ಯಾಲಿಡಿಟಿ!
BSNL Best Prepaid Plan: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಪ್ರಿಪೇಯ್ಡ್ ಯೋಜನೆಯೊಂದನ್ನು ಹೊರ ತಂದಿದೆ.
ಅದು 72 ದಿನಗಳ ಮಾನ್ಯತೆಯ ಪ್ರಿಪೇಯ್ಡ್ ಯೊಜನೆಯಾಗಿದೆ. ಇದರ ಬೆಲೆ 500 ರೂ. ಗಿಂತಲೂ ಕಡಿಮೆ. ಈ ಯೋಜನೆಯು ಧ್ವನಿ ಕರೆ, ಡೇಟಾ ಮತ್ತು ಎಸ್‌ಎಮ್‌ಎಸ್ ಪ್ರಯೋಜನಗಳನ್ನ ನೀಡುತ್ತದೆ.
ಈ ಯೋಜನೆಯು ಉಳಿದ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗಿಂತ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಬಿಎಸ್‌ಎನ್‌ಎಲ್‌ನ ಈ ಪ್ರಿಪೇಯ್ಡ್ ಯೋಜನೆಯ ಬೆಲೆ ಕೇವಲ 485 ರೂ. ಆಗಿದೆ.
ಈ ಪ್ರಿಪೇಯ್ಡ್ ಯೋಜನೆಯಲ್ಲಿ ಚಂದಾದರರಿಗೆ ಏನೇನು ಸೌಲಭ್ಯಗಳು ಸಿಗುತ್ತವೆ ಎಂದು ನೋಡೋಣ.
ಬಿಎಸ್ಎನ್ಎಲ್ 485 ರೂ. ಪ್ರಿಪೇಯ್ಡ್ ಪ್ಲಾನ್ ವಿವರ
BSNL ನ 485 ರೂ. ಗಳ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು 2GB ದೈನಂದಿನ ಡೇಟಾವನ್ನು ನೀಡುತ್ತದೆ.
2GB ಡೇಟಾ ಮಿತಿ ಮುಗಿದ ನಂತರ, ವೇಗವು 40 Kbps ಗೆ ಇಳಿಯುತ್ತದೆ. ಈ ಪ್ರಿಪೇಯ್ಡ್ ಯೋಜನೆಯು 72 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿರುತ್ತದೆ.
ಈ ಯೋಜನೆಯನ್ನು, BSNL ಬಳಕೆದಾರರು BSNL ಸೆಲ್ಫ್ ಕೇರ್ ಅಪ್ಲಿಕೇಶನ್ ಅಥವಾ ಟೆಲಿಕಾಂ ಕಂಪನಿಯ ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಗ್ರಾಹಕರು ಈ ಯೋಜನೆಯನ್ನು PhonePe, CRED, GPay ಮತ್ತು ಇತರ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು/ಪ್ಲಾಟ್‌ಫಾರ್ಮ್‌ಗಳ ಮೂಲಕವೂ ರೀಚಾರ್ಜ್ ಮಾಡಿಕೊಳ್ಳಬಹುದಾದ ಅವಕಾಶವಿದೆ.
ಇದನ್ನೂ ಓದಿ: Amazon Layoffs: ಅಮೆಜಾನ್‌ನಿಂದ 30,000 ಉದ್ಯೋಗಿಗಳು ಮನೆಗೆ! ಕಾರಣ ಏನು?
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು, ಭಾರತದಲ್ಲಿ ತನ್ನ ಹೈ-ಸ್ಪೀಡ್ ನೆಟ್‌ವರ್ಕ್ ಅನ್ನು ವಿಸ್ತರಿಸುವತ್ತ ಸದ್ಯ ಗಮನಹರಿಸಿದೆ. ಸರ್ಕಾರಿ ಅಧಿಕಾರಿಗಳ ಪ್ರಕಾರ, ಕಂಪನಿಯು ದೇಶಾದ್ಯಂತ ಸುಮಾರು 98,000 4G ಸೈಟ್‌ಗಳನ್ನು ಸ್ಥಾಪಿಸುತ್ತಿದೆ.
ಮುಂದಿನ ಕೆಲವು ತಿಂಗಳುಗಳಲ್ಲಿ ಟೆಲಿಕಾಂ ಕಂಪನಿಯು 5G ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಕಂಪನಿಯ 4G ಮತ್ತು 5G ಎರಡೂ ಸ್ವದೇಶಿ ತಂತ್ರಜ್ಞಾನವನ್ನು ಆಧರಿಸಿದೆ.
ಈಗಾಗಲೇ ನಿಯೋಜಿಸಲಾದ 4G ಮೂಲಸೌಕರ್ಯವನ್ನು ತೇಜಸ್ ನೆಟ್‌ವರ್ಕ್ಸ್ ಮತ್ತು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DoT) ಸೇರಿದಂತೆ ಭಾರತೀಯ ಕಂಪನಿಗಳು ಸಂಪೂರ್ಣವಾಗಿ ನಿರ್ಮಿಸಿವೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಸಿಸ್ಟಮ್ಸ್ ಇಂಟಿಗ್ರೇಟರ್ ಆಗಿದ್ದು, ಮೊಬೈಲ್ ನೆಟ್‌ವರ್ಕ್‌ಗಳ ನಿಯೋಜನೆ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತಿದೆ.
ಇದನ್ನೂ ಓದಿ: ಓಪ್ಪೋ ಫೈಂಡ್ X8 ಪ್ರೋ ಮೇಲೆ ಭಾರಿ ರಿಯಾಯಿತಿ: ಖರೀದಿಸುವುದು ಎಲ್ಲಿ?
(Which is the BSNL Best prepaid plan with 2gb data 72 days validity 100 SMS unlimited call)


