ಕಾರ್ಕಳ: ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಗೆ ಗರ್ಭಪಾತ ಹಲ್ಲೆ

Karkala News (ಕಾರ್ಕಳ) : ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಆರೋಪಿ ಮಹಿಳೆಗೆ ಹಲ್ಲೆ ನಡೆಸಿ ಗರ್ಭಪಾತ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಮಾರ್ಗರೇಟ್ (48 ವರ್ಷ) ಎಂಬುವರ ಪತಿ ಮೃತಪಟ್ಟಿದ್ದು, 2023 ರಲ್ಲಿ ವಧು-ವರರ ಅನ್ವೇಷಣೆಯ ‘ಜೋಡಿ’ ಆಪ್ ಮೂಲಕ ರೋನಾಲ್ಡ್ ಫೆರ್ನಾಂಡಿಸ್ ಎಂಬಾತನ ಪರಿಚಯವಾಗಿತ್ತು. ರೋನಾಲ್ಡ್‌ ಆಕೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ (karkala) ತಾಲೂಕಿನ ಸೂಡ ಗ್ರಾಮದ ತನ್ನ ಮನೆಯಲ್ಲಿ ತಂದು ಇರಿಸಿಕೊಂಡಿದ್ದ.

2023ರ ನವೆಂಬರ್ 24 ರಿಂದ ಮಾರ್ಗರೇಟ್‌ ಹಾಗೂ ರೊನಾಲ್ಡ್‌ ಫೆರ್ನಾಂಡೀಸ್‌ ಇಬ್ಬರು ಕೂಡ ಒಂದು ವರ್ಷದ ಕಾಲ ಇವರಿಬ್ಬರು ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ : ಉಡುಪಿ : ವರದಕ್ಷಿಣೆ ಕಿರುಕುಳ,ಹಲ್ಲೆ ಕೊಲೆ ಬೆದರಿಕೆ : ಪತಿ ಸೇರಿ 7 ಮಂದಿ ವಿರುದ್ದ ಎಫ್‌ಐಆರ್‌

ಆದರೆ ಮಾರ್ಗರೇಟ್ ಗರ್ಭವತಿಯಾದಾಗ, ರೋನಾಲ್ಡ್‌ಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ.ಆದರೆ ರೋನಾಲ್ಡ್‌ ಮದುವೆ ನಿರಾಕರಿಸಿದ್ದಾನೆ. ಅಲ್ಲದೇ ನಂತರ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದಾಗ, ಮಾರ್ಗರೇಟ್ ಕತ್ತಿಯನ್ನು ಹಿಡಿದು ಕೈಗೆ ಗಾಯ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Yakshagana: ಯಕ್ಷಗಾನ ಒಂದು ಶ್ರೀಮಂತ ಕಲೆ – ಕೃಷ್ಣ ಪೂಜಾರಿ ಚಕ್ರಮಕ್ಕಿ

ರೋನಾಲ್ಡ್ ನಂತರ ಆಕೆಯ ಹೊಟ್ಟೆಗೆ ಕಾಲಿನಿಂದ ತುಳಿದು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಹೊಟ್ಟೆಗೆ ತುಳಿದಿದ್ದರಿಂದ ಗರ್ಭಪಾತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories