ಕಾರ್ಮಿಕನಿಂದ ಖ್ಯಾತ ಹೋಟೆಲ್ ಉದ್ಯಮಿ ಎಣ್ಣೆಹೊಳೆ ಸಂತೋಷ್ ಶೆಟ್ಟಿ ಹತ್ಯೆ

Yennehole Santhosh Shetty Murder : ಕಾರ್ಕಳ : ಹೋಟೆಲ್ ಕಾರ್ಮಿಕನೇ ತನ್ನ ಮಾಲೀಕನನ್ನು ಹತ್ಯೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಸಂತೋಷ್ ಶೆಟ್ಟಿ (46 ವರ್ಷ) ಎಂಬವರೇ ಹತ್ಯೆಯಾದವರು.
ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಸಂತೋಷ್ ಶೆಟ್ಟಿ ಅವರು ಕಳೆದ ಹಲವು ವರ್ಷಗಳಿಂದಲೂ ಪುಣೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.
ಹೋಟೆಲ್ ಉದ್ಯಮಿ ಸಾವಿಗೆ ಕಾರಣವೇನು ?
ಸಂತೋಷ್ ಶೆಟ್ಟಿ ಅವರು ಎಂದಿನಂತೆಯೇ ಹೋಟೆಲ್ನಲ್ಲಿದ್ದರು. ಈ ವೇಳೆಯಲ್ಲಿ ಉತ್ತರ ಪ್ರದೇಶ ಮೂಲಕ ವೈಟರ್ ಕುಡಿದು ಕೆಲಸ ಮಾಡುತ್ತಿದ್ದ. ಈ ಕುರಿತು ಸಂತೋಷ್ ಶೆಟ್ಟಿ ಕಾರ್ಮಿಕನಿಗೆ ಬೈದಿದ್ದಾರೆ.
ಇಷ್ಟಕ್ಕೆ ಕೋಪಗೊಂಡ ಕಾರ್ಮಿಕ ಕಿಚನ್ನಲ್ಲಿದ್ದ ಕತ್ತಿಯನ್ನು ತಂದು ಸಂತೋಷ್ ಶೆಟ್ಟಿ ಅವರ ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಪುಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಳೆ ಗಾಳಿ ಹಾನಿಗೆ ತುರ್ತು ಪರಿಹಾರ ಘೋಷಿಸಿ : ಸರಕಾರಕ್ಕೆ ಸುನಿಲ್ ಕುಮಾರ್ ಮನವಿ
ಉದ್ಯಮಿ ಸಂತೋಷ್ ಶೆಟ್ಟಿ ಅವರು ತುಳುಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದರು. ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತ ಸಂತೋಷ್ ಶೆಟ್ಟಿ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಉದ್ಯಮಿಯ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕೋಟ : ಕೆಸ್ರು ಓಕ್ಳಿ – ಜನಮನ ಗೆದ್ದ ಕೆಸರುಗದ್ದೆ ಕ್ರೀಡಾಕೂಟ
Karkala Yennehole Santhosh Shetty Murder in Pune Kannada News



