Udupi PM Modi : ಉಡುಪಿಗೆ ಮೋದಿ : ಬಸ್ ಪ್ರಯಾಣಿಕರಿಗೆ ಹೊಸ ರೂಲ್ಸ್

Udupi PM Modi : ಉಡುಪಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಬಸ್ ಸಂಚಾರದ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಹಾಗಾದ್ರೆ ಬಸ್ನಲ್ಲಿ ಪ್ರಯಾಣಿಸುವವರು ಈ ಸುದ್ದಿ ತಪ್ಪದೇ ಓದಿ.
ಉಡುಪಿ ನಗರದಾದ್ಯಂತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಬಸ್ ಪ್ರಯಾಣಕ್ಕೆ ಸಂಬಂಧಿಸಿದಿಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅಲ್ಲದೇ ಬಸ್ ಸಂಚಾರದ ಪ್ರಮುಖ ಮಾರ್ಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಮೋದಿ ರೋಡ್ ಶೋ – ವಾಹನ ಸಂಚಾರ ನಿರ್ಬಂಧ
ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯುವ ಆದಿ ಉಡುಪಿ ಹೆಲಿಪ್ಯಾಡ್ನಿಂದ ಕರಾವಳಿ ಜಂಕ್ಷನ್ – ಬನ್ನಂಜೆ – ಸಿಟಿ ಬಸ್ ನಿಲ್ದಾಣ – ಕಲ್ಸಂಕ – ಶ್ರೀ ಕೃಷ್ಣ ಮಠದವರೆಗಿನ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಸ್ ನಿಲ್ದಾಣ ಪ್ರವೇಶ ನಿರ್ಬಂಧ
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬನ್ನಂಜೆ ಬಳಿಯಲ್ಲಿದ್ರೆ, ಸಿಟಿ ಹಾಗೂ ಖಾಸಗಿ ಬಸ್ ನಿಲ್ದಾಣಗಳು ನಗರದ ಹೃದಯ ಭಾಗದಲ್ಲಿವೆ. ಬಸ್ ನಿಲ್ದಾಣಕ್ಕೆ ತೆರಳು ಮಾರ್ಗದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಬಸ್ ಗಳು ಸಂಚರಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಹೀಗಾಗಿ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳಿಗೆ ಉಡುಪಿ ಸಿಟಿ ಬಸ್ ನಿಲ್ದಾಣ ಪ್ರವೇಶಿಸಲು ಅನುಮತಿ ಇರುವುದಿಲ್ಲ.
ಇದನ್ನೂ ಓದಿ : ಉಡುಪಿ ಶ್ರೀ ಕೃಷ್ಣಮಠಕ್ಕೆ ನರೇಂದ್ರ ಮೋದಿ : ಎಷ್ಟು ಹೊತ್ತು ನಡೆಯಲಿದೆ ರೋಡ್ ಶೋ
Udupi PM Modi : ಈ ಮಾರ್ಗದಲ್ಲಷ್ಟೇ ಬಸ್ ಸಂಚಾರ
ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ಸುಗಳು ನಗರವನ್ನು ತಪ್ಪಿಸಿ, ಅಂಬಾಗಿಲು – ಮಣಿಪಾಲ – ಆಲೆವೂರು – ಕೊರಂಗ್ರಪಾಡಿ ಮಾರ್ಗವಾಗಿ ಬಾಳೈಪಾಡೆ ಕಡೆಗೆ ಸಂಚರಿಸಬೇಕು. ಮಣಿಪಾಲದಿಂದ ಉಡುಪಿ ಕಡೆಗೆಶಾರದಾ ಕಲ್ಯಾಣ ಮಂಟಪ – ಬೀಡಿನಗುಡ್ಡೆ ಮಾರ್ಗವಾಗಿ ಸಂಚರಿಸಬೇಕು.
ಕುಂದಾಪುರದಿಂದ ಉಡುಪಿ ಕಡೆಗೆ ಕರಾವಳಿ ಫ್ಲೈಓವರ್ – ಅಂಬಲಪಾಡಿ – ಬ್ರಹ್ಮಗಿರಿ – ಜೋಡುಕಟ್ಟೆ ಮಾರ್ಗವಾಗಿ ಸಂಚರಿಸಬೇಕು.ಮಂಗಳೂರಿನಿಂದ ಉಡುಪಿ ಕಡೆಗೆಕಿನ್ನಿಮುಲ್ಕಿ – ಸ್ವಾಗತ ಗೋಪುರ ಮೂಲಕ ಆಗಮಿಸಿ ಜೋಡುಕಟ್ಟೆ ಮಾರ್ಗವಾಗಿ ಸಂಚರಿಸಬೇಕು.
ಅಂಬಾಗಿಲು ಮೂಲಕ ಉಡುಪಿ ಕಡೆಗೆಗುಂಡಿಬೈಲು ರಸಿಕಾ ಬಾರ್ – ದೊಡ್ಡಂಗುಡ್ಡೆ ಎಂಜಿಎಂ – ಬೀಡಿನಗುಡ್ಡೆ ಮಾರ್ಗವಾಗಿ ಸಂಚರಿಸಬೇಕು. ಮಲ್ಪೆಯಿಂದ ಉಡುಪಿ ಕಡೆಗೆ ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ತಲುಪಿ ನಂತರ ಉಡುಪಿಗೆ ಸಾಗಬೇಕು. ಪ್ರಯಾಣಿಕರು ಈ ನಿರ್ಬಂಧಿತ ಅವಧಿಯಲ್ಲಿ ಪ್ರಯಾಣಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ.
ತೀರಾ ಅಗತ್ಯ ಇಲ್ಲ ಅಂತಾದ್ರೆ ಬೆಳಗ್ಗೆ 9 ಗಂಟೆಯ ಒಳಗೆ ಅಥವಾ ಮಧ್ಯಾಹ್ನ 3 ಗಂಟೆಯ ನಂತರ ಪ್ರಯಾಣಿಸುವುದು ಉತ್ತಮ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಧಿಸಿರುವ ಆದೇಶವನ್ನು ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಪಾಲಿಸಲೇ ಬೇಕು.
PM Narendra Modi Visit Udupi Krishna Mutt New Bus Rules and travel Restrictions



