ಗುಂಡ್ಮಿ ಟೋಲ್‌ ನಲ್ಲಿ ನಿವೃತ್ತ ಯೋಧನಿಗೆ ಅವಮಾನ : ಕ್ರಮಕ್ಕೆ ಶ್ಯಾಮ ಸುಂದರ ನಾಯರಿ ಆಗ್ರಹ

Gundmi toll : ಕೋಟ : ಸಾಸ್ತಾನದ ಟೋಲ್​ ಪ್ಲಾಜಾದಲ್ಲಿ ನಿವೃತ್ತ ಆರ್ಮಿ ಕಮಾಂಡರ್​ಗೆ ಟೋಲ್​ ಪ್ಲಾಜಾ ಸಿಬ್ಬಂದಿ ಅವಮಾನ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಸಿಬ್ಬಂದಿಯ ವಿರುದ್ದ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ ನಾಯರಿ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದ್ದು, ಜನವರಿ 25ರಂದು ರಾತ್ರಿ 9.30ರ ಸುಮಾರಿಗೆ ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಒಬ್ಬ ಆರ್ಮಿ ಕಮಾಂಡರ್‌ ಆದ ಶ್ಯಾಮರಾಜ್‌ ಎಂಬವರಿಗೆ ಟೋಲ್‌ ವಿನಾಯಿತಿ ಪತ್ರವಿದ್ದರೂ ಕೂಡ ಟೋಲ್‌ ವಿನಾಯಿತಿ ನೀಡದೇ ಟೋಲ್‌ ಸಿಬ್ಬಂದಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೇರಳದ ಕಾಸರಗೋಡು ಮೂಲದವರಾದ ಶ್ಯಾಮರಾಜ್‌ ಅವರು ಆಪರೇಷನ್‌ ಪರಾಕ್ರಮದ ವೇಳೆ ಉಗ್ರರ ವಿರುದ್ದ ಜಯಶೀಲರಾಗಿದ್ದು, ವಾಪಾಸು ಬರುವ ವೇಳೆಯಲ್ಲಿ ಇವರ ವಾಹನ ಲ್ಯಾಂಡ್‌ ಮೈನ್ಸ್‌ ಮೇಲೆ ಹರಿದ ಪರಿಣಾಮ ಲ್ಯಾಂಡ್‌ಮೈನ್ಸ್‌ ಸ್ಪೋಟಗೊಂಡು ಇವರ ವಾಹನ ಜಖಂಗೊಂಡಿತ್ತು.

15 ಮಂದಿ ಹುತಾತ್ಮರಾಗಿ ಇಬ್ಬರು ಸೈನಿಕರು ಮಾತ್ರವೇ ಬದುಕುಳಿದ್ದರು. ಇವರಲ್ಲಿ ಶ್ಯಾಮರಾಜ್‌ ಕೂಡ ಒಬ್ಬರಾಗಿದ್ದು, ಅವರ ಮೂಳೆ ಸರಪಣಿಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಸಂಪೂರ್ಣ ವಿಕಲಾಂಗರಾಗಿದ್ದಾರೆ. ಅವರ ಪತ್ನಿ ಮಿಲಿಟರಿ ನರ್ಸಿಂಗ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಪತ್ತೆ: ಉಡುಪಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಪತ್ನಿಯ ವರ್ಗಾವಣೆಗೆ ಸಂಬಂಧಿಸಿದಂತೆ ತೆರಳುತ್ತಿದ್ದ ವೇಳೆಯಲ್ಲಿ ಸಾಸ್ತಾನ ಟೋಲ್‌ ಸಿಬ್ಬಂದಿ ಅವಮಾನ ಮಾಡಿದ್ದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಹಿಂಜರಿಯದ ಇಂತಹ ಸೈನಿಕರನ್ನು ಅವಮಾನ ಮಾಡಿದರೆ ದೇಶದಕ್ಕೆ ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ಟೋಲ್‌ ವಿನಾಯಿತಿ ಪತ್ರವಿದ್ದರೂ ಕೂಡ ವಿನಾಯಿತಿ ನೀಡದ ಟೋಲ್‌ ಸಿಬ್ಬಂದಿಯ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಶ್ಯಾಮಸುಂದರ ನಾಯರಿ ಅವರು ಆಗ್ರಹಿಸಿದ್ದಾರೆ.

ಆಪರೇಶನ್​ ಪರಾಕ್ರಮದ ಸಂದರ್ಭದಲ್ಲಿ ಭಾರತೀಯರ ರಕ್ಷಣೆಗೆ ಹೋರಾಡಿದ್ದ ಶ್ಯಾಮರಾಜ್​ ಅವರು ಯುದ್ಧದಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಇವರಿದ್ದ ವಾಹನ ಲ್ಯಾಂಡ್ಸ್​ಮೈನ್​ ಸ್ಫೋಟದಿಂದ ಜಖಂಗೊಂಡ ಪರಿಣಾಮ ಗಂಭೀರ ಗಾಯಕ್ಕೊಳಗಾಗಿದ್ದರು.

ಬೆನ್ನುಮೂಳೆಗೆ ಏಟಾದ ಪರಿಣಾಮ ಶಾಶ್ವತ ಅಂಗವಿಕಲತನಕ್ಕೆ ಒಳಗಾಗಿರುವ ಶ್ಯಾಮರಾಜ್​ ಮಿಲಿಟರಿ ನರ್ಸಿಂಗ್​​ನಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ನಿಯ ವರ್ಗಾವಣೆ ಕಾರ್ಯದ ಸಂಬಂಧ ಸಾಸ್ಥಾನ ಟೋಲ್​ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಬಂಧಿಸಿದೆ.

ಇದನ್ನೂ ಓದಿ : ಉಡುಪಿ: ಮಲ್ಪೆ ಸಮೀಪ ಪ್ರವಾಸಿ ದೋಣಿ ಉರುಳಿ ಇಬ್ಬರು ಸಾ*ವು

ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ ನ್ಯಾರಿ ಪತ್ರ ಬರೆದಿದ್ದು, ದೇಶಕ್ಕಾಗಿ ಹೋರಾಡಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ನಿವೃತ್ತ ಯೋಧನಿಗೆ ಅವಮಾನಗೈದ ಟೋಲ್​ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Retired soldier insulted at Gundmi toll: Shyama Sundar Nairy demands action

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories