ಸಾಸ್ತಾ‌ನ ಗುಂಡ್ಮಿ ಟೋಲ್‌ನಲ್ಲಿ ಅವಮಾನ ಪ್ರಕರಣ : ಮಾಜಿ ಯೋಧ ಶ್ಯಾಮರಾಜ್ ಹೇಳಿದ್ದೇನು ?

ಕೋಟ : ಸಾಸ್ತಾನ ಟೋಲ್ ಗೇಟ್ ನಲ್ಲಿ ಮಾಜಿ ಸೈನಿಕನಿಗೆ ಅವಮಾನ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮಾಜಿ ಯೋಧ ಕಾಸರಗೋಡುವಿನ ಶ್ಯಾಮರಾಜ್ ಹೇಳಿಕೆ ನೀಡಿದ್ದಾರೆ.

ಟೋಲ್ ಸಿಬ್ಬಂದಿಗಳು ನನ್ನಿಂದ ಕ್ಷಮೆ ಯಾಚಿಸಿದ್ದಾರೆ. ನಾನು ಅವರನ್ನು ಕ್ಷಮಿಸದೆ ಮತ್ಯಾರು ಕ್ಷಮಿಸುತ್ತಾರೆ. ನನಗೆ ಅವಮಾನ ಮತ್ತು ಬೇಸರವಾಗಿದ್ದು ನಿಜ. ನನ್ನ ಜೊತೆ ದನಿಗೂಡಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ನನಗೆ ನ್ಯಾಯ ಒದಗಿಸಲು ನಿವೆಲ್ಲಾ ಸಾಕಷ್ಟು ಪ್ರಯತ್ನಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು‌. ಟೋಲ್ ಸಿಬಂದಿಗಳು ನನ್ನ ಸಹೋದರರಿದ್ದಂತೆ. ನಾವೆಲ್ಲರೂ ಸೇರಿ ಅವರನ್ನು ಕ್ಷಮಿಸೋಣ‌ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಎಲ್ಲರಿಗೂ ನನ್ನ ನಮಸ್ಕಾರ ಎಂದಿದ್ದಾರೆ.

ಇದನ್ನೂ ಓದಿ: ಅನಂತಪದ್ಮನಾಭ ದೇಗುಲದ ಆಡಳಿತಾಧಿಕಾರಿ ನೇಮಕ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​

ಶ್ಯಾಮರಾಜ ಅವರಿಗೆ ಸಾಸ್ತಾನ ಗುಂಡ್ಮಿಯ ಟೋಲ್ ಗೇಟ್ ನಲ್ಲಿ ವಿನಾಯಿತಿ ನೀಡಲು ನಿರಾಕರಿಸಲಾಗಿತ್ತು. ಇದರಿಂದ ನೊಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಬಳಿಕ ಟೋಲ್ ಸಿಬ್ಬಂದಿಗಳು ಬಹಿರಂಗ ಕ್ಷಮೆ ಯಾಚಿಸಿದ್ದರು. ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಯೋಧರು ದೂರು ನೀಡಿದ್ದರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories