ಉಡುಪಿ: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ₹17 ಲಕ್ಷ ರೂ. ವಂಚನೆ

ಉಡುಪಿ: ಅಧಿಕ ಲಾಭಾಂಶದ ಆಮಿಷವೊಡ್ಡಿ ಆನ್‌ಲೈನ್ ಹೂಡಿಕೆ(Online Investment) ಮಾಡುವಂತೆ ನಂಬಿಸಿ ಸುಮಾರು 16 ಲಕ್ಷಕ್ಕೂ ಅಧಿಕ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಕುರಿತು ಉಡುಪಿ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಂತ್ ಕುಮಾರ್ (27 ವರ್ಷ) ಎಂಬವರೇ ವಂಚನೆಗೆ ಒಳಗಾದವರು. ಸುಮಂತ್‌ ಕುಮಾರ್ ಅವರಿಗೆ ಜುಲೈ 2025ರಲ್ಲಿ ಅಪರಿಚಿತ ನಂಬರ್‌ನಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಬರುವುದಾಗಿ ಆಮಿಷ ಒಡ್ಡಲಾಗಿತ್ತು.

ಅವರು ಕಳುಹಿಸಿದ ಲಿಂಕ್ ಮೂಲಕ ಸುಮಂತ್ ಕುಮಾರ್ ಅವರು ‘F4-ರಿಲಯನ್ಸ್ ಮೋಷನ್ ಗ್ರೂಪ್’ ಎಂಬ ವಾಟ್ಸಾಪ್ ಗ್ರೂಪ್‌ಗೆ ‌ಸೇರ್ಪಡೆ ಅಗಿದ್ದಾರೆ. ಜುಲೈ 03, 2025 ರಂದು, ಗ್ರೂಪ್‌ನಲ್ಲಿದ್ದ ಅಂಜಲಿ ಮೆಹ್ತಾ ಮತ್ತು ಶ್ರೀಧರ್ ರಂಗರಾಜನ್ ಎಂದು ಪರಿಚಯಿಸಿಕೊಂಡ ಇಬ್ಬರು ವ್ಯಕ್ತಿಗಳು ವಿಶೇಷ ಆಫರ್‌ಗಳಿದ್ದು ಪ್ರೈಮರಿ ಮಾರ್ಕೆಟ್ ಟ್ರೇಡಿಂಗ್ ಅಕೌಂಟ್ ತೆರೆಯಲು ಪ್ರೇರೇಪಿಸಿದ್ದಾರೆ.

ಇದನ್ನೂ ಓದಿ : ಕಾರ್ಕಳ: ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಗೆ ಗರ್ಭಪಾತ ಹಲ್ಲೆ

ಅವರ ಮಾತು ನಂಬಿದ ಸುಮಂತ್ ಕುಮಾರ್ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆ ಮತ್ತು ತಮ್ಮ ತಾಯಿಯ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹16,99,605/- ಹಣವನ್ನು ವಿವಿಧ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಹಣ ವರ್ಗಾಯಿಸಿದ ನಂತರ ಅವರಿಗೆ ತಾವು ಹೂಡಿಕೆ ಮಾಡಿದ ಅಸಲು ಅಥವಾ ಯಾವುದೇ ಲಾಭಾಂಶವನ್ನು ವಂಚಕರು ಹಿಂತಿರುಗಿಸಿಲ್ಲ. ಇದರಿಂದ ತಾವು ಮೋಸ ಹೋಗಿರುವುದಾಗಿ ಅರಿತು ಸುಮಂತ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಉಡುಪಿ : ವರದಕ್ಷಿಣೆ ಕಿರುಕುಳ,ಹಲ್ಲೆ ಕೊಲೆ ಬೆದರಿಕೆ : ಪತಿ ಸೇರಿ 7 ಮಂದಿ ವಿರುದ್ದ ಎಫ್‌ಐಆರ್‌

ಈ ವಂಚನೆ ಕುರಿತು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/2025 ರಂತೆ ಪ್ರಕರಣ ದಾಖಲಾಗಿದೆ. ಐಟಿ ಕಾಯ್ದೆ-2000 ರ ಕಲಂ 66(C) (ಗುರುತಿನ ಕಳ್ಳತನ), ಕಲಂ 66(D) (ಕಂಪ್ಯೂಟರ್ ಸಂಪನ್ಮೂಲ ಬಳಸಿಕೊಂಡು ವಂಚನೆ) ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಇಂತಹ ಆನ್‌ಲೈನ್ ಹೂಡಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories