ಜಿಯೋ ಹಾಟ್‌ಸ್ಟಾರ್‌ನಲ್ಲಿ ಉದ್ಯೋಗದ ಆಮಿಷ; ಯುವಕನಿಗೆ 1 ಲಕ್ಷ ವಂಚನೆ

ಉಡುಪಿ : ಜಿಯೋ ಹಾಟ್‌ಸ್ಟಾರ್‌ನಲ್ಲಿ (Jio Hotstar Job Cheating) ಸಹಾಯಕ ಡಿಸೈನರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಸಂತೆಕಟ್ಟೆ ಎಂಬಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸಂತೆಕಟ್ಟೆ ಶಾಂತಿವನ ಟೌನ್‌ಶಿಪ್‌ನ ನಿವಾಸಿ, ಅಂಚಲ್ ಸಂತೋಷ್ ಶೆಟ್ಟಿ (23 ವರ್ಷ ) ವಂಚನೆಗೊಳಗಾದ ಯುವಕ.
ಸೆಪ್ಟೆಂಬರ್ 9 ರಂದು ಶಿವಂ ದಗ್ಗುಬಾತಿ ಎಂಬ ವ್ಯಕ್ತಿಯು ಅಂಚಲ್ ಅವರಿಗೆ ಕರೆ ಮಾಡಿ ದೂರವಾಣಿ ಮೂಲಕ ಮೊದಲ ಸುತ್ತಿನ ಸಂದರ್ಶನ ನಡೆಸಿದ್ದಾನೆ.
ಒಂದು ವಾರದ ನಂತರ, recruit@careershotstar.com ಇಮೇಲ್ ಮೂಲಕ ಉದ್ಯೋಗದ ಆಫರ್ ಲೆಟರ್ ಬಂದಿದೆ. ಈ ಆಫರ್‌ನಲ್ಲಿ ಆಲ್ ಇಂಡಿಯಾ ಫಿಲ್ಮ್ ಕಾಸ್ಟ್ಯೂಮ್ ಡಿಸೈನರ್ಸ್ ಅಸೋಸಿಯೇಟ್ ಮೆಂಬರ್‌ಶಿಪ್‌ಗಾಗಿ ಮೊದಲು ₹2,800 ಪಾವತಿಸಲು ಸೂಚಿಸಲಾಗಿದೆ.
ಅಂಚಲ್ ಶೆಟ್ಟಿ ಕೂಡಲೇ ಆರೋಪಿ ನೀಡಿದ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಹಣ ವರ್ಗಾಯಿಸಿದ್ದಾರೆ. ಅಕ್ಟೋಬರ್ 1ರಂದು ನೇಮಕಾತಿ ಪತ್ರವೂ ದೊರೆತಿತ್ತು.
ಆದರೆ ಟ್ರಾವೆಲ್ ಇನ್ಶೂರೆನ್ಸ್‌ಗಾಗಿ ₹48,500 ಮತ್ತು ₹1,500 ಪಾವತಿಸಲು ಕೇಳಲಾಗಿದೆ. ಅಂಚಲ್ ಅವರು ಅದೇ ದಿನ ಫೋನ್ ಪೇ ಸ್ಕ್ಯಾನರ್ (priyeranjan007@axl) ಮೂಲಕ ಈ ಹಣವನ್ನೂ ಪಾವತಿಸಿದ್ದಾರೆ.
ಇದನ್ನೂ ಓದಿ : ಉಡುಪಿ : ಹೋಟೆಲ್ ರೂಂನಲ್ಲಿ ಒಡಿಸ್ಸಾ ಉದ್ಯಮಿ ಅನುಮಾನಾಸ್ಪದ ಸಾವು
ತದನಂತರ ವಸತಿ (Accommodation) ಗಾಗಿ ₹47,200 ಕಟ್ಟುವಂತೆ ಸೂಚಿಸಲಾಗಿದೆ. ಅದರಂತೆ, ಅಂಚಲ್ ಅವರು ದಿನಾಂಕ 03/10/2025 ಮತ್ತು 04/10/2025 ರಂದು ಒಟ್ಟು ₹47,200 ಪಾವತಿಸಿದ್ದಾರೆ.
ಹೀಗೆ ಒಟ್ಟು ₹1,05,000 ಪಾವತಿಸಿದ ನಂತರ, ಆರೋಪಿಗಳು ಇನ್ನೂ ಹೆಚ್ಚಿನ ಟ್ರಾವೆಲ್ ಇನ್ಶೂರೆನ್ಸ್ ಮೊತ್ತವನ್ನು ಕಟ್ಟಲು ಒತ್ತಾಯಿಸಿದ್ದಾರೆ.
ತಾನು ವಂಚನೆಗೆ ಒಳಗಾಗಿರುವುದು ಅರಿವಾದಾಗ ಅಂಚಲ್ ಶೆಟ್ಟಿ ಅವರು ತಮ್ಮ ಹಣವನ್ನು ವಾಪಸ್ ಕೇಳಿದಾಗ, ಆರೋಪಿಗಳು ಹಣ ನೀಡದೇ, ಉದ್ಯೋಗವನ್ನೂ ನೀಡದೇ ವಂಚಿಸಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಪರವಾನಗಿ ಇಲ್ಲದೇ ಜಲ್ಲಿಕಲ್ಲು ಅಕ್ರಮ ಸಾಗಾಟ
Udupi Jio Hotstar Job Cheating



