ಉಡುಪಿ : ಆರ್‌ಟಿಓ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

Udupi Lokayukta Raid : ಉಡುಪಿ : ಆರ್‌ಟಿಓ ಅಧಿಕಾರಿಯ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉಡುಪಿಯ ಆರ್‌ಟಿಓ ಅಧಿಕಾರಿ ಲಕ್ಷ್ಮೀ ನಾರಾಯಣ ಪಿ.ನಾಯಕ್ ಎಂಬವರಿಗೆ ಮನೆ ಮೇಲೆ ಈ ದಾಳಿ ನಡೆದಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.
ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಫ್ಲ್ಯಾಟ್ ಹಾಗೂ ಉಡುಪಿಯ ಮಣಿಪಾಲದಲ್ಲಿರುವ ಆರ್‌ಟಿಓ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರಾದ ಲಕ್ಷ್ಮೀನಾರಾಯಣ ಅವರು ಆರ್‌ಟಿಓ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ಲಕ್ಷ್ಮೀನಾರಾಯಣ ಅವರಿಗೆ ಸೇರಿದ ಮನೆ, ಕಚೇರಿ ಮಾತ್ರವಲ್ಲ ಉಡುಪಿಯ ಪಡು ಅಲೆವೂರು ಮತ್ತು ಕುಮಟಾದಲ್ಲಿರುವ ಸಂಬಂಧಿಕರ ಮನೆಗಳ ಮೇಲಯೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಲಕ್ಷ್ಮೀ ನಾರಾಯಣ ಅವರ ಆಸ್ತಿ ಮತ್ತು ಆದಾಯದಲ್ಲಿ ಹೊಂದಾಣಿಕೆ ಕಂಡು ಬಾರದ ಹಿನ್ನೆಲೆಯಲ್ಲಿ ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
Udupi Lokayukta Raid RTO Office Lakshminarayan House at Kinnimulki



