ಉಡುಪಿ : ವಿಮಾನ ಹಾರಾಟದ ಬಗ್ಗೆ ಆತಂಕ ಬೇಡ : ಎಸ್ಪಿ ಸ್ಪಷ್ಟನೆ
ಕೇಂದ್ರ ಸರಕಾರ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೂ ಸಂಪತ್ತಿನ ಸಂಶೋಧನೆ ನಡೆಸುತ್ತಿದ್ದು, ಇದಕ್ಕಾಗಿ ಲಘು ವಿಮಾನದ ಮೂಲಕ ವೈಜ್ಞಾನಿಕ ಸರ್ವೆ ಕಾರ್ಯವನ್ನು ನಡೆಸುತ್ತಿದೆ
ಉಡುಪಿ : ಇರಾನ್- ಅಮೇರಿಕಾ- ಇಸ್ರೇಲ್ ಯುದ್ದದ ನಡುವಲ್ಲೇ ಕರಾವಳಿ ಭಾಗದಲ್ಲಿ ಅತೀ ಕಡಿಮೆ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಆತಂಕವನ್ನು ಮೂಡಿಸಿತ್ತು. ಆದರೆ ವಿಮಾನ ಹಾರಾಟದ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆಯನ್ನು (Udupi SP Clarifies )ನೀಡಿದೆ.
ಉಡುಪಿ ಜಿಲ್ಲೆಯಾದ್ಯಂತ ಲಘು ವಿಮಾನವೊಂದು ಹಾರಾಟ ನಡೆಸುತ್ತಿರೋದು ಕರಾವಳಿಗರ ಆತಂಕಕ್ಕೆ ಕಾರಣವಾಗಿತ್ತು. ಒಂದೆಡೆ ಯುದ್ದ ನಡೆಯುತ್ತಿದ್ದು, ಮತ್ತೊಂದೆಡೆಯಲ್ಲಿ ವಿಮಾನದ ಹಾರಾಟದಿಂದಾಗಿ ಜನರು ಬೆದರಿದ್ದರು. ಇದೀಗ ವಿಮಾನ ಸರ್ವೇ ಕಾರ್ಯ ನಡೆಸುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಮಲ್ಪೆ ಬೀಚ್ ಬಳಿ ಚಾಕು ಇರಿತ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಉಡುಪಿಯಲ್ಲಿ ಭೂವೈಜ್ಞಾನಿಕ ಸರ್ವೇ ಕಾರ್ಯ
ಕೇಂದ್ರ ಸರಕಾರ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೂ ಸಂಪತ್ತಿನ ಸಂಶೋಧನೆ ನಡೆಸುತ್ತಿದ್ದು, ಇದಕ್ಕಾಗಿ ಲಘು ವಿಮಾನದ ಮೂಲಕ ವೈಜ್ಞಾನಿಕ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಹೀಗಾಗಿ ಯಾವುದೇ ಆತಂಕ ಬೇಡ ಎಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಕಡಿಮೆ ಎತ್ತರದಲ್ಲಿ ವಿಮಾನಗಳನ್ನು ಹಾರಾಟ ನಡೆಸಲಾಗುತ್ತಿದೆ. ಈ ಬಗ್ಗೆ ಆತಂಕ ಬೇಡ, ಇದೊಂದು ಕಾನೂನು ಬದ್ಧವಾಗಿದ್ದು, ಸರಕಾರದಿಂದಲೇ ಮಾನ್ಯತೆ ಪಡೆದು ಹಾರಾಟ ನಡೆಸಲಾಗುತ್ತಿದೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಈ ಮೊದಲೇ ಮಾಹಿತಿ ನೀಡಲಾಗಿದೆ ಎಂದು ತಿಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್, ಈ ಸರ್ವೇ ಕಾರ್ಯಕ್ಕೆ ಕೆಸ್ನಾ ಕಾರಾವಾನ್ 208 ಬಿ ಮಾದರಿಯ ಎರಡು ವಿಮಾನ ಬಳಕೆ ಮಾಡಲಾಗುತ್ತಿದೆ.
ಸುಮಾರು 80 ಮೀಟರ್ ಎತ್ತರದಲ್ಲಿ ಗಂಟೆಗೆ ಸುಮಾರು 108 ನಾಟ್ಸ್ ವೇಗದಲ್ಲಿ ಸಂಚಾರ ಮಾಡುತ್ತಿದ್ದು, ಸೂರ್ಯೋದಯ ದಿಂದ ಸಮೀಕ್ಷೆ ಸೂರ್ಯಸ್ತದವರೆಗೂ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Udupi SP Clarifies : No Need to Panic Over Low-Flying Aircraft



