
82-year-old woman bungee jump : ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಬಂಗಿ ಜಂಪ್ ಮಾಡಬೇಕು ಎನ್ನುವುದು ಅನೇಕರ ಕನಸು. ಈ ಬಂಗಿ ಜಂಪ್ ಮಾಡೋಕೆ ಎಂಟೆದೆ ಗುಂಡಿಗೆ ಕೂಡ ಬೇಕು. ಆದರೆ ಋಷಿಕೇಶದ ಶಿವಪುರಿಯಲ್ಲಿ ಬರೋಬ್ಬರಿ 82 ವರ್ಷದ ವೃದ್ಧೆಯೊಬ್ಬರು ಭಾರತದ ಅತೀ ಎತ್ತರದ ಬಂಗಿ ಜಂಪ್ ಪೂರ್ಣಗೊಳಿಸುವ ಮೂಲಕ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.
ವೃದ್ಧೆಯ ಬಂಗಿ ಜಂಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯು ಅತ್ಯಂತ ಉತ್ಸಾಹ ಹಾಗೂ ಆತ್ಮವಿಶ್ವಾಸದಿಂದ ಬಂಗಿಜಂಪ್ಗೆ ಸಿದ್ಧವಾಗುತ್ತಿರುವುದನ್ನು ಕಾಣಬಹುದಾಗಿದೆ.
ಕನಿಷ್ಟ ಭಯವೂ ಇಲ್ಲದವರಂತೆ ಮಹಿಳೆಯು ಬಂಗಿ ಜಂಪ್ ಮಾಡಿದ್ದು ನೋಡುಗರು ಬೆಕ್ಕಸ ಬೆರಗಾಗಿದ್ದಾರೆ. ಪ್ರಖ್ಯಾತ ಸಾಮಾಜಿಕ ಜಾಲತಾಣದ ವೇದಿಕೆ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಜನರು ವೃದ್ಧೆಯ ಧೈರ್ಯವನ್ನು ಕೊಂಡಾಡಿದ್ದಾರೆ.
ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಇವರು ಸಾಬೀತು ಪಡಿಸಿದ್ದಾರೆ ಎಂದು ಹಲವರು ಹೇಳಿದ್ದರೆ ಇನ್ನುಳಿದವರು ಆತ್ಮವಿಶ್ವಾಸ ಎಂದರೆ ಹೀಗಿರಬೇಕು ಅಂತಾ ವೃದ್ಧೆಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಕೇವಲ ಹಣ್ಣು ಮಾತ್ರ ತಿಂದು ಬದುಕುತ್ತೇನೆಂದು ಹೊರಟಿದ್ದ ಯುವತಿ 27ರ ಹರೆಯದಲ್ಲೇ ಸಾವು
ಕ್ಯಾಮರಾ ಕಡೆ ವೃದ್ಧೆ ನೋಡದಿದ್ದರೂ ಸಹ ಅವರು ಅವರದೇ ಲೋಕದಲ್ಲಿ ತೇಲುತ್ತಿದ್ದರು. ಆ ಆನಂದವನ್ನು ನಾವೆಲ್ಲ ನೋಡಬೇಕಿದೆ ಎಂದು ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ,ಅವರು ಇದೇ ರೀತಿ ಹಾರಾಟ ನಡೆಸಲಿ. ಬಂಗಿ ಜಂಪ್ ಮಾಡುವಾಗ ಅವರು ನರ್ತಕಿಯಂತೆ ಕಾಣುತ್ತಿದ್ದರು. ಈ ವಯಸ್ಸಿನಲ್ಲಿ ಇವರು ಜೀವನವನ್ನು ನೋಡುತ್ತಿರುವ ರೀತಿ ನಮಗೆಲ್ಲ ಸ್ಪೂರ್ತಿಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೃದ್ಧೆಯ ಶಕ್ತಿ, ಸಾಹಸ ಹಾಗೂ ಆತ್ಮವಿಶ್ವಾಸವನ್ನು ಪ್ರತಿಯೊಬ್ಬರೂ ಕೊಂಡಾಡಿದ್ದಾರೆ.ಈ ವಯಸ್ಸಿನಲ್ಲಿ ಮಹಿಳೆಯ ಚೈತನ್ಯವನ್ನು ಶ್ಲಾಘಿಸುತ್ತಿದ್ದಾರೆ. ಇವರು ಬದುಕನ್ನು ಜೀವಿಸುತ್ತಿರುವ ರೀತಿ ಮಾದರಿ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ : ವೆಜ್ ಬಿರಿಯಾನಿ ಬದಲು ಮಾಂಸಹಾರಿ ಬಿರಿಯಾನಿ ನೀಡದಕ್ಕೆ ಹೋಟೆಲ್ ಮಾಲೀಕನ ಹತ್ಯೆ
82-year-old woman at India’s highest bungee jump in Rishikesh



