ಅಂಬಾನಿಯಿಂದ ಜಿಯೋ ಏರ್‌ಲೈನ್ಸ್; ಒಂದು ವರ್ಷ ಫ್ರೀ ಫ್ಲೈಟ್ ಟಿಕೆಟ್! ಮಿಸ್ ಮಾಡ್ಬೇಡಿ ಎಂದ ನೆಟ್ಟಿಗರು
ಭಾರತದ ವಿಮಾನಯಾನ ವಲಯದಲ್ಲಿ ಇಂಡಿಗೋ (IndiGo) ವಿಮಾನಗಳ ರದ್ದತಿ ಮತ್ತು ಮಾರುಕಟ್ಟೆಯಲ್ಲಿ ಅದರ ಪ್ರಬಲ ಏಕಸ್ವಾಮ್ಯತೆಯ ವಿರುದ್ಧ ಪ್ರಯಾಣಿಕರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆ, ಉದ್ಯಮಿ ಮುಖೇಶ್ ಅಂಬಾನಿಯವರು ಹೊಸ ವಿಮಾನಯಾನ ಸಂಸ್ಥೆಯನ್ನು (New Airlines) ಪ್ರಾರಂಭಿಸಬೇಕು ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.
ಜಿಯೋ ಸಿಮ್ ಮಾದರಿ: ದರ ಇಳಿಕೆ ನಿರೀಕ್ಷೆ
ನೆಟ್ಟಿಗರು ಜಿಯೋ ಏರ್‌ಲೈನ್ಸ್‌ಗಾಗಿ ಒತ್ತಾಯಿಸಲು ಪ್ರಮುಖ ಕಾರಣವಿದೆ. ಟೆಲಿಕಾಂ ವಲಯಕ್ಕೆ ಜಿಯೋ ಸಿಮ್ (Jio SIM) ಪ್ರವೇಶಿಸಿದಾಗ, ಅದು ಉಚಿತ ಕರೆ ಮತ್ತು ಕಡಿಮೆ ಡೇಟಾ ದರಗಳ ಮೂಲಕ ಇಡೀ ಉದ್ಯಮದಲ್ಲಿ ಕ್ರಾಂತಿ ತಂದಿತ್ತು. ಅದೇ ರೀತಿ, ಅಂಬಾನಿ ಅವರು ವಿಮಾನಯಾನ ವಲಯಕ್ಕೆ ಪ್ರವೇಶಿಸಿದರೆ, ಟಿಕೆಟ್ ದರಗಳು ಗಣನೀಯವಾಗಿ ಇಳಿಯುತ್ತವೆ. ಸೇವೆಯ ಗುಣಮಟ್ಟ ಸುಧಾರಿಸುತ್ತದೆ ಎಂಬ ಬಲವಾದ ನಂಬಿಕೆ ಮತ್ತು ನಿರೀಕ್ಷೆಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಜಿಯೋ ಸಿಮ್‌ನ ಯಶಸ್ಸನ್ನು ಉಲ್ಲೇಖಿಸಿ, “ಅಂಬಾನಿ ಈಗ ಏರ್‌ಲೈನ್ಸ್ ಪ್ರಾರಂಭಿಸಿ ಇಂಡಿಗೋ ಏಕಸ್ವಾಮ್ಯವನ್ನು ಮುರಿಯಬೇಕು” ಎಂದು ಅನೇಕರು ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಇತ್ತೀಚೆಗೆ ಸಿಬ್ಬಂದಿ ಕೊರತೆ ಮತ್ತು ಕಾರ್ಯಾಚರಣೆಯ ದೋಷಗಳಿಂದ ಇಂಡಿಗೋ ವಿಮಾನಗಳು ಪದೇ ಪದೇ ರದ್ದಾಗುತ್ತಿವೆ. ಮಾರುಕಟ್ಟೆಯಲ್ಲಿ ಬೇರೆ ದೊಡ್ಡ ಸ್ಪರ್ಧಿಗಳ ಕೊರತೆಯಿಂದಾಗಿ ಸ್ಪರ್ಧಾತ್ಮಕ ವಾತಾವರಣ ಕಡಿಮೆಯಾಗಿ ಟಿಕೆಟ್ ದರಗಳು ಅಧಿಕವಾಗುತ್ತಿವೆ. ಇದರಿಂದ ರೋಸಿಹೋದ ನೆಟ್ಟಿಗರು ಮತ್ತು ಪ್ರಯಾಣಿಕರು, “ಜಿಯೋದಂತಹ ದೊಡ್ಡ ಸಂಸ್ಥೆ ಬಂದರೆ ಈ ಏಕಸ್ವಾಮ್ಯ ಮುರಿಯುತ್ತದೆ, ತಕ್ಷಣ ಅಂಬಾನಿ ಏರ್‌ಲೈನ್ಸ್ ಶುರು ಮಾಡಬೇಕು” ಎಂದು ಕಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಆಶಯವೇ ‘ಉಚಿತ ಟಿಕೆಟ್’ ಸುಳ್ಳು ಸುದ್ದಿಯು ಕ್ಷಣಾರ್ಧದಲ್ಲಿ ಹರಡಲು ಕಾರಣವಾಯಿತು.
2016ರಲ್ಲಿ ಜಿಯೋ ಸಿಮ್ ಟೆಲಿಕಾಂ ಕ್ಷೇತ್ರಕ್ಕೆ ಉಚಿತ ಕರೆ ಮತ್ತು ಡೇಟಾದೊಂದಿಗೆ ಪ್ರವೇಶಿಸಿ, ಇಡೀ ಉದ್ಯಮದ ದರಗಳನ್ನು ತಳಮಟ್ಟಕ್ಕೆ ಇಳಿಸಿ ಕ್ರಾಂತಿ ಮಾಡಿತ್ತು. ಈಗ ವಿಮಾನ ಪ್ರಯಾಣದ ದರಗಳು ಗಗನಕ್ಕೇರಿರುವುದರಿಂದ, ಮುಖೇಶ್ ಅಂಬಾನಿ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಿದರೆ, ಆರಂಭದಲ್ಲಿ ಜಿಯೋ ಸಿಮ್‌ನಂತೆ ಉಚಿತ ಸೇವೆ ನೀಡಿ, ಮಾರುಕಟ್ಟೆಯಲ್ಲಿ ಬೆಲೆಗಳನ್ನು ನಿಯಂತ್ರಿಸಬೇಕು ಎಂಬುದು ಗ್ರಾಹಕರ ಪ್ರಬಲ ನಿರೀಕ್ಷೆಯಾಗಿದೆ. ಈ ಆಶಯವೇ ‘ಜಿಯೋ ಏರ್‌ಲೈನ್ಸ್’ ಕುರಿತ ವದಂತಿಗಳಿಗೆ ಇಂಧನ ತುಂಬುತ್ತಿದೆ.
ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಈ ಹೊಸ ಫೋನ್ ಹೇಗಿದೆ ನೋಡಿದ್ರಾ?
ಅಂಬಾನಿ ಜಿಯೋ ಏರ್‌ಲೈನ್ಸ್ ಶುರು ಮಾಡಿ ಒಂದು ವರ್ಷ ಉಚಿತ ಟಿಕೆಟ್ ನೀಡುತ್ತಾರೆ ಎಂಬ ಸುಳ್ಳು ಸುದ್ದಿ ಕೂಡಾ ಭಾರೀ ವೈರಲ್ ಆಗಿದೆ. ನೆಟ್ಟಿಗರ ಕಾಮೆಂಟ್ ನಡುವೆಯೇ ಕೆಲವೆಡೆ ಜಿಯೋ ಏರ್‌ಲೈನ್ಸ್ ಆರಂಭ ಎಂಬ ಸುಳ್ಳು ಸುದ್ದಿಗಳು ಸಹ ಹರಿದಾಡುತ್ತಿವೆ. ಆದರೆ, ರಿಲಯನ್ಸ್ ಅಥವಾ ಜಿಯೋ ಸಂಸ್ಥೆ, ಯಾವುದೇ ವಿಮಾನಯಾನ ಸಂಸ್ಥೆ ಪ್ರಾರಂಭಿಸುವ ಬಗ್ಗೆ ಅಥವಾ ಉಚಿತ ಟಿಕೆಟ್ ನೀಡುವ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.



