Viral News: ಪತಿಯ ಜೊತೆಗೆ ಚಕ್ಕಂದವಾಡಿದ ಗೆಳತಿಗೆ ಪತ್ನಿ ಮಾಡಿದ್ದೇನು ನೋಡಿ!

Viral News: ಇತ್ತೀಚಿನ ದಿನಗಳಲ್ಲಿ ದಾಂಪತ್ಯ ದ್ರೋಹದ ಪ್ರಕರಣಗಳು ಹೆಚ್ಚು ನಡೆಯುತ್ತಿದೆ. ತನ್ನ ಸಂಗಾತಿಗೆ ತಿಳಿಯದಂತೆ ಮತ್ತೊಂದು ಸಂಬಂಧಗಳನ್ನು ಇಟ್ಟುಕೊಂಡು ನಂತರ ಆ ಸಂಬಂಧವನ್ನು ಉಳಿಸಿಕೊಳ್ಳಲು ತನ್ನ ಸಂಗಾತಿಯನ್ನು ಕ್ರೂರವಾಗಿ ಕೊಲೆ ಮಾಡುವುದು, ಅಥವಾ ಡಿವೋರ್ಸ್(Divorce) ಮಾಡುವಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ನಡೆಯುತ್ತಿದೆ. ಹೀಗಿರುವಾಗ ಇಲ್ಲೊಬ್ಬ ಚೀನಾದ ಮಹಿಳೆ ತನ್ನ ಪತಿ ತನ್ನ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿರುವುದು ತಿಳಿದು ಅದನ್ನು ಬಹಳ ವಿಭಿನ್ನ ರೀತಿಯಲ್ಲಿ ಬಹಿರಂಗಪಡಿಸಿದ್ದಾಳೆ.

ಚೀನಾದ(china) ಮಹಿಳೆಯೊಬ್ಬಳು ತನ್ನ ಆತ್ಮೀಯ ಸ್ನೇಹಿತೆ ತನ್ನ ಗಂಡನೊಂದಿಗೆ ಐದು ವರ್ಷಗಳ ಕಾಲ ಸಂಬಂಧದಲ್ಲಿರುವುದನ್ನು ಕಂಡುಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಆಕೆ ಹುನಾನ್ ಪ್ರಾಂತ್ಯದ ಚಾಂಗ್ಶಾದಲ್ಲಿರುವ ವಸತಿ ಸಂಕೀರ್ಣದ ಬೇಲಿಯ ಮೇಲೆ ದೊಡ್ಡ ಬ್ಯಾನರ್ಗಳನ್ನು ನೇತುಹಾಕಿ, ತನ್ನ ಪತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಶಿ ಎಂಬ ಉಪನಾಮ ಹೊಂದಿರುವ ತನ್ನ ಆತ್ಮೀಯ ಸ್ನೇಹಿತೆಗೆ ವ್ಯಂಗ್ಯವಾಗಿ ಧನ್ಯವಾದ ಅರ್ಪಿಸಿದ್ದಾಳೆ. “ನನ್ನ ಗಂಡನೊಂದಿಗೆ ಮಲಗಿದ್ದಕ್ಕಾಗಿ ಧನ್ಯವಾದಗಳು” ಎಂದು ಚೀನಾದ ಮಹಿಳೆ ಬ್ಯಾನರ್ಗಳಲ್ಲಿ ಬರೆದಿದ್ದಾಳೆ.

ಇಲ್ಲಿ ಅವಳು ತನ್ನ ಗಂಡ ಮತ್ತು ಆಪ್ತ ಸ್ನೇಹಿತೆಯ ಸಂಬಂಧವನ್ನು ಬಹಿರಂಗಪಡಿಸಲು ಮಾತ್ರ ಬ್ಯಾನರ್ಗಳನ್ನು ಬಳಸಲಿಲ್ಲ, ಬದಲಿಗೆ ತನ್ನ ಸ್ನೇಹಿತೆಯ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿದ್ದಾಳೆ. ತನ್ನ 12 ವರ್ಷಗಳ ಸ್ನೇಹಿತೆಯಾಗಿದ್ದ ಶಿ, ಹಾಂಗ್ಶಾನ್ ಸಮುದಾಯದ ಪ್ರವಾಸೋದ್ಯಮ ನಿರ್ವಹಣಾ ಕಚೇರಿಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಆಕೆಯ ಬಗ್ಗೆ ಮಾಹಿತಿ ಬರೆದಿದ್ದಾಳೆ. ಅದರ ಜೊತೆಗೆ “ಶಿ ತನ್ನ ಆತ್ಮೀಯ ಸ್ನೇಹಿತೆಯ ಪತಿಯೊಂದಿಗೆ ಸಂಬಂಧ ಹೊಂದುವ ಮೂಲಕ ಸಾರ್ವಜನಿಕ ಸುವ್ಯವಸ್ಥೆ ಮತ್ತು ಉತ್ತಮ ನೈತಿಕತೆಯನ್ನು ಉಲ್ಲಂಘಿಸಿದ್ದಾಳೆ” ಎಂದು ಬರೆದು “ಹೆಂಡತಿ” ಎಂದು ಸಹಿ ಹಾಕಿದ್ದಾಳೆ.

ಇದರ ಜೊತೆಗೆ, ಆ ಮಹಿಳೆ ಕಾಂಪೌಂಡ್ ಒಳಗೆ ಒಂದು ಕಾರಿನ ಮೇಲೆ ರೆಡ್ ಪೆನ್ನಂಟ್ಗಳನ್ನು ಕೂಡ ಹಾಕಿದ್ದಳು. ಒಂದರಲ್ಲಿ “ಶಿ 12 ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತೆ ಮತ್ತು ಐದು ವರ್ಷಗಳಿಂದ ನನ್ನ ಪತಿಗೆ ಲೈಂಗಿಕ ಸೇವೆಗಳನ್ನು ಒದಗಿಸುತ್ತಿದ್ದಾಳೆ” ಎಂದು ಬರೆದಿದ್ದರೆ, ಇನ್ನೊಂದರಲ್ಲಿ “ಶಿ ತನ್ನ ಆತ್ಮೀಯ ಸ್ನೇಹಿತೆಯ ಪತಿಯೊಂದಿಗೆ ಕಚೇರಿ ಸಮಯದಲ್ಲಿ ಹೋಟೆಲ್ಗಳಿಗೆ ಹೋಗಿದ್ದಳು” ಎಂದು ಬರೆಯಲಾಗಿತ್ತು.

ಇಲ್ಲಿ ಮಹಿಳೆ ತನ್ನ ಪತಿ ಮತ್ತು ಸ್ನೇಹಿತೆಯ ಸಂಬಂಧವನ್ನು ಬಹಿರಂಗಪಡಿಸುವ ಭರದಲ್ಲಿ ಸ್ನೇಹಿತಯ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾಳೆ. ಅಲ್ಲದೇ ಈ ಬ್ಯಾನರ್ಗಳು ಸಾರ್ವಜನಿಕ ಸ್ಥಳದಲ್ಲಿ ಅಡಚಣೆ ಉಂಟುಮಾಡಿದರೆ, ಅವು ಸಾರ್ವಜನಿಕ ಭದ್ರತಾ ಆಡಳಿತ ಶಿಕ್ಷೆ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ. ಹಾಗಾಗಿ ಅಂತವರಿಗೆ 200 ಯುವಾನ್ (ಸುಮಾರು 2,300 ರೂ.) ವರೆಗೆ ದಂಡ ವಿಧಿಸಬಹುದು. ಇದರ ಜೊತೆಗೆ, ಅಂತಹ ಬ್ಯಾನರ್ಗಳನ್ನು ಹಾರಿಸುವವರಿಗೆ 500 ಯುವಾನ್ (ಅಂದಾಜು 5,800 ರೂ.) ವರೆಗೆ ದಂಡ ಮತ್ತು ಗಂಭೀರ ಸಂದರ್ಭಗಳಲ್ಲಿ 19 ದಿನಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಇದೇ ಮುಖ್ಯ ಕಾರಣವೆಂದ ಮಹಿಳೆ; ಏನಿದು ವಿವಾದ?

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories