Vastu Tips – ವಾಸ್ತು ಶಾಸ್ತ್ರ: ಸಂತೋಷದ ಜೀವನ ನಡೆಸಬೇಕೆಂಬುದೇ ಪ್ರತಿಯೊಬ್ಬ ಮನುಷ್ಯನ ಕನಸಾಗಿರುತ್ತದೆ. ಆ ಕನಸನ್ನು ನನಸಾಗಿಸಲು ಅವನು ತನ್ನ ಜೀವನದುದ್ದಕ್ಕೂ ಶ್ರಮಿಸುತ್ತಾನೆ. ಆದರೆ ಕೆಲವೊಮ್ಮೆ ಏನೇ ಮಾಡಿದರೂ ಸಂತೋಷ ಎನ್ನುವುದು ಮರೀಚಿಕೆ ಎನಿಸುತ್ತದೆ. ಅದಕ್ಕಾಗಿ ಪರಿಹಾರವನ್ನು ಹುಡುಕಲು ಮುಂದಾಗುತ್ತಾನೆ.
ವಾಸ್ತು ಶಾಸ್ತ್ರ (Vastu Shastra) ಜ್ಯೋತಿಷ್ಯ ಭಾಗ . ವಾಸ್ತು ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಹೇಳಲಾಗಿದೆ. ಮನುಷ್ಯ ಸಂತೋಷದಿಂದ ಬಾಳಲು ಅಗತ್ಯವಿರುವ ಸಲಹೆಗಳನ್ನುವಾಸ್ತು ಶಾಸ್ತ್ರದಲ್ಲಿ (Vastu Tips) ನೀಡಲಾಗಿದೆ. ನಾವೆಲ್ಲರೂ ವಾಸಿಸುವ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಸುಖ, ಸಂತೋಷ, ಸಮೃದ್ಧಿ ನೆಲೆಸುತ್ತದೆ ಎಂದು ಅದು ಹೇಳುತ್ತದೆ.
ವಾಸ್ತು ಪಾಲಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿರುತ್ತದೆ. ಮನೆಯಲ್ಲಿ ಕೆಲವು ರೀತಿಯ ಫೋಟೋಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಅನೇಕ ಪ್ರಯೋಜನವಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಯಾವ ರೀತಿಯ ಫೋಟೋಗಳನ್ನು, ಯಾವ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು ಎಂದು ನೋಡೋಣ.
Vastu Tips : ವಾಸ್ತು ಶಾಸ್ತ್ರದ ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಪರ್ವತ, ಜಲಪಾತದ ಫೋಟೋಗಳನ್ನು ಹಾಕಿ
ವಾಸ್ತು ಶಾಸ್ತ್ರದ ಪ್ರಕಾರ ಪರ್ವತ, ಹಸಿರು ಹೊಲಗದ್ದೆಗಳು, ಜಲಪಾತ ಮುಂತಾದ ನಿಸರ್ಗಕ್ಕೆ ಸಂಬಂಧಿಸಿದ ಚಿತ್ರಗಳು ಶುಭವನ್ನು ತರುತ್ತವೆ ಎಂದು ನಂಬಲಾಗಿದೆ. ಈ ಫೋಟೋಗಳನ್ನು ಮನೆಯಲ್ಲಿ ಹಾಕುವುದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ.
ಈ ರೀತಿಯ ಪಕ್ಷಿಗಳ ಫೋಟೋ ಮನೆಗೆ ತನ್ನಿ
ಕೆಲವು ಪಕ್ಷಿಗಳ ಚಿತ್ರಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಸಹ ಶುಭವನ್ನು ಹೊತ್ತುತರುತ್ತದೆ. ಅದರಲ್ಲಿ ಹಂಸದ ಚಿತ್ರವು ಶಾಂತಿ, ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಇದಲ್ಲದೇ ನಿಮ್ಮ ಮನೆಯಲ್ಲಿ ಹಾರುವ ಪಕ್ಷಿಗಳ ಚಿತ್ರಪಟವನ್ನು ಸಹ ಹಾಕಬಹುದು.
ಕುದುರೆಯ ಚಿತ್ರ ಯಾವ ದಿಕ್ಕಿಗೆ ಹಾಕಿದರೆ ಒಳ್ಳೆಯದು ?
ವಾಸ್ತು ಪ್ರಕಾರ ಮನೆಯಲ್ಲಿ ಓಡುತ್ತಿರುವ ಕುದುರೆಗಳ ಚಿತ್ರಪಟವಿರುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. 7 ಕುದುರೆಗಳು ಓಡುತ್ತಿರುವ ಚಿತ್ರಪಟವನ್ನು ದಕ್ಷಿಣದ ದಿಕ್ಕಿಗೆ ಹಾಕುವುದು ಅತ್ಯುತ್ತಮ ಪರಿಣಾಮ ತರುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಕುಟುಂಬದ ಶಾಂತಿ, ನೆಮ್ಮದಿ ಕಾಪಾಡಿ, ಸಂಪತ್ತು ಹೆಚ್ಚಾಗುವಂತೆ ಮಾಡುತ್ತದೆ.
ಇದನ್ನೂ ಓದಿ : International Yoga Day : ಯೋಗದಲ್ಲಿದೆ ಆರೋಗ್ಯ: ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದೇ ಆಚರಿಸುವುದೇಕೆ ?
ಯಾವ ದೇವರ ಫೋಟೋ ಮನೆಯಲ್ಲಿರಬೇಕು ?
ಬಹುತೇಕ ಎಲ್ಲರ ಮನೆಯಲ್ಲೂ ದೇವರ ಫೋಟೋಗಳು ಇರುತ್ತವೆ. ಹೀಗೆ ಫೋಟೋಗಳನ್ನು ಮನೆಯಲ್ಲಿರಿಸಿಕೊಳ್ಳುವುದು ವಾಸ್ತು ದೃಷ್ಟಿಯಿಂದಲೂ ಲಾಭದಾಯಕ ಎಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಣೇಶ, ಲಕ್ಷ್ಮಿ, ಸರಸ್ವತಿ ಹಾಗೂ ನಿಮ್ಮ ಕುಲದೇವರ ಫೋಟೋಗಳನ್ನು ಇಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ.
ಈ ಫೋಟೋಗಳನ್ನಂತೂ ಖಂಡಿತ ಮನೆಯಲ್ಲಿ ಇಟ್ಟುಕೊಳ್ಳಬೇಡಿ
ವಾಸ್ತು ಶಾಸ್ತ್ರದಲ್ಲಿ ಯಾವ ಫೋಟೋಗಳನ್ನು ಇಟ್ಟುಕೊಳ್ಳುವುದರಿಂದ ಲಾಭವಿದೆ ಎಂದು ಹೇಳಲಾಗಿದೆಯೋ, ಅದೇ ರೀತಿ ಯಾವ ಫೋಟೋಗಳನ್ನು ಇಟ್ಟುಕೊಳ್ಳಬಾರದು ಎಂದೂ ಹೇಳಲಾಗಿದೆ. ಅದರ ಪ್ರಕಾರ ಮನೆಯಲ್ಲಿ ಹಿಂಸಾತ್ಮಕ ಪ್ರಾಣಿಗಳ, ಸೂರ್ಯಾಸ್ತ, ಮುಳುಗುತ್ತಿರುವ ಹಡಗು ಮುಂತಾದ ಫೋಟೋಗಳನ್ನು ಇಟ್ಟುಕೊಳ್ಳಬಾರದು. ಇದರಿಂದ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಆ ರೀತಿಯ ಫೋಟೋಗಳನ್ನು ಮನೆಗೆ ತರದಿರುವುದೆ ಉತ್ತಮ.
ಇದನ್ನೂ ಓದಿ : Best Cars Under 6 Lakh : 6 ಲಕ್ಷಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಈ ಕಾರು
Vastu Tips according to vastu shastra keeping these pictures in the house brings prosperity and happiness arc Kannada News