H1B Visas : ಎಚ್‌1ಬಿ ವೀಸಾ ರದ್ದು, ಭಾರತೀಯರನ್ನು ವಾಸಾಪ್‌ ಕಳಿಸಿದ ಅಮೇರಿಕಾ

H1B visas : ಅಮೇರಿಕಾದ ಎಚ್1ಬಿ ವೀಸಾ ಹೊಂದಿದ ಕೆಲವು ಭಾರತೀಯ ಕಾರ್ಮಿಕರಿಗೆ ಅಮೇರಿಕಾ ಪ್ರವೇಶ ನಿರಾಕರಿಸಿದೆ. ಈ ಕಾರ್ಮಿಕರು ಬೆಂಗಳೂರು ಹಾಗೂ ಹೈದ್ರಾಬಾದ್‌ ಮೂಲದವರು ಎಂದು ತಿಳಿದು ಬಂದಿದೆ. ಭಾರತದಲ್ಲಿ ಅವಧಿಗಿಂತ ಹೆಚ್ಚು ಕಾಲ ಉಳಿದುಕೊಂಡ ಕಾರಣಕ್ಕೆ ಅಮೇರಿಕಾ H-1B ವೀಸಾಗಳನ್ನು ರದ್ದುಗೊಳಿಸಿದೆ.

ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ H-1B ವೀಸಾ ಹೊಂದಿದ್ದ, ಮೂವರು ಭಾರತೀಯರಿಗೆ ಅಮೆರಿಕಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ. ಅಲ್ಲದೇ ಅವರ ವೀಸಾಗಳನ್ನು ರದ್ದುಗೊಳಿಸಿದ್ದಾರೆ. ಈ ಮೂವರು ವ್ಯಕ್ತಿಗಳು ಅಮೇರಿಕಾದಿಂದ ಹೊರಗಡೆ ಅಂದ್ರೆ, ಭಾರತದಲ್ಲಿ ನಿಯಮ ಮೀರಿ ಉಳಿದುಕೊಂಡಿದ್ದರು.

ಒಬ್ಬ ಕಾರ್ಮಿಕ ಸುಮಾರು ಮೂರು ತಿಂಗಳ ಕಾಲ ಭಾರತದಲ್ಲಿ ಉಳಿದಿದ್ದರೆ, ಇತರರು ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಳಿದಿದ್ದರು. ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನಾವು ಮಾಲೀಕರಿಗೆ ತಿಳಿಸಿಯೇ ಭಾರತದಲ್ಲಿ ಉಳಿದುಕೊಂಡಿದ್ದೇವು ಎಂದು ಕಾರ್ಮಿಕರು ತಿಳಿಸಿದ್ದರು.

ಆದರೆ ಯು.ಎಸ್. ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ಅಧಿಕಾರಿಗಳು ಅವರ ವೀಸಾಗಳನ್ನು ರದ್ದುಗೊಳಿಸಿ, ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ. H-1B ವೀಸಾ ಹೊಂದಿರುದವರು ಅಮೇರಿಕಾದಿಂದ ಹೊರಗೆ ಗರಿಷ್ಠ 60 ದಿನಗಳ ಕಾಲ ವಾಸ್ತವ್ಯ ಹೂಡುವುದಕ್ಕೆ ಅವಖಾಶವಿದೆ.

Also Read : Vastu Homes : ಮನೆ ಹೇಗಿರಬೇಕು ? ಏನು ಹೇಳುತ್ತೆ ವಾಸ್ತುಶಾಸ್ತ್ರ

ಒಂದೊಮ್ಮೆ ಹೆಚ್ಚು ದಿನಗಳ ಕಾಲ ಉಳಿಯಬೇಕಾದ್ರೆ ಅಮೇರಿಕಾದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಎಚ್‌ 1ಬಿ ವೀಸಾ ಹೊಂದಿವರು 30 ರಿಂದ 40 ದಿನಗಳ ಕಾಲ ಉಳಿಯುವುದು ಸೂಕ್ತ ಎನ್ನಲಾಗುತ್ತಿದೆ.

H-1B ವೀಸಾ ಹೊಂದಿರುವ ಭಾರತೀಯ ವೃತ್ತಿಪರರ ವಲಯದಲ್ಲಿ ಈ ಘಟನೆ ಆತಂಕ ಮೂಡಿಸಿದೆ. H-1B ವೀಸಾ ಹೊಂದಿದವರು ಯುಎಸ್‌ನಿಂದ ಹೊರಗೆ ಪ್ರಯಾಣಿಸುವ ಮೊದಲು ತಮ್ಮ ವೀಸಾದ ನಿಯಮ ಅರಿತಿರಬೇಕು. ತುರ್ತು ಪರಿಸ್ಥಿತಿಯಲ್ಲಿ ಸಿಬಿಪಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಕಡ್ಡಾಯ.

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಅದ್ರಲ್ಲೂ ಹೈದ್ರಬಾದ್‌ ಮೂಲದವರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೀಗ ಅಮೇರಿಕಾ ಕೈಗೊಂಡಿರುವ ಕ್ರಮ ಸಹಜವಾಗಿಯೇ ಭಾರತೀಯರನ್ನು ಇಕ್ಕಟ್ಟಿಗೆ ಸಿಲುಕಿದೆ.

Also Read : ಬ್ಯಾಂಕಿಂಗ್‌, ಎಟಿಎಂ, ರೈಲ್ವೆ, AI ತಂತ್ರಜ್ಞಾನ : ಜುಲೈ 1 ರಿಂದ ಹೊಸ ರೂಲ್ಸ್‌

H1B visas cancelled America sends Indians in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories