ಧರ್ಮಸ್ಥಳ ಎಸ್‌ಐಟಿ ತನಿಖೆ ಮಧ್ಯಂತರ ವರದಿ ಕೊಡಿ : ಶಾಸಕ ಸುನಿಲ್‌ ಕುಮಾರ್‌

Dharmasthala SIT investigation MLA Sunil Kumar : ಬೆಂಗಳೂರು : ಧರ್ಮಸ್ಥಳದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ನಂಬಿಕೆ ಹರಣ ನಡೆಯುತ್ತಿದೆ. ರಾಜ್ಯ ಸರಕಾರ ಎಸ್‌ಐಟಿ ತನಿಖೆಯ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ.

ಧರ್ಮಸ್ಥಳ ನಾಡಿನ ಪವಿತ್ರ ಪುಣ್ಯಕ್ಷೇತ್ರ. ಇಂತಹ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇದರ ಹಿಂದೆ ಒಂದು ಗುಂಪು ವ್ಯವಸ್ಥಿತವಾದ ಪಿತೂರಿ ನಡೆಸುತ್ತಿದೆ. ಆದರೆ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದರೂ ಕೂಡ ಸರಕಾರಕ್ಕೆ ಏನೂ ಅನಿಸಲೇ ಇಲ್ಲ ಅಲ್ವಾ ಅಂತಾ ಸರಕಾರಕ್ಕೆ ತಿವಿದಿದ್ದಾರೆ.

ಕಳೆದ ಹದಿಮೂರು ಹದಿನಾಲ್ಕು ದಿನಗಳಿಂದಲೂ ಧರ್ಮಸ್ಥಳ ಸುತ್ತಮುತ್ತಲೂ ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಸರಕಾರ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು. ಗುಂಡಿ ಅಗೆದ ಸ್ಥಳದಲ್ಲಿ ಏನಾದ್ರೂ ಪತ್ತೆಯಾಗಿದೆಯಾ ? ಪತ್ತೆಯಾಗಿಲ್ವಾ ಅನ್ನೋ ಬಗ್ಗೆ ಗೃಹಸಚಿವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಎಲ್ಲಿ ಹೋದ್ರು 100 ಡಿಕೆ ಶಿವಕುಮಾರ್‌ ?

ಧರ್ಮಸ್ಥಳಕ್ಕೆ ಈ ಹಿಂದೆ ಭೇಟಿ ನೀಡಿದ್ದ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಧರ್ಮಸ್ಥಳದ ರಕ್ಷಣೆಗೆ ನೂರಾರು ಡಿಕೆ ಶಿವಕುಮಾರ್‌ ಇದ್ದಾರೆ ಎಂದಿದ್ದಾರೆ. ಆಗ ಧರ್ಮಸ್ಥಳದ ಪರವಾಗಿ ಡಿಕೆ ಶಿವಕುಮಾರ್‌ ಅವರ ಭಕ್ತರು ಇದ್ದಾರೆ ಅಂದುಕೊಂಡಿದ್ದೇವು.

ಆದರೆ ಇದೀಗ ಧರ್ಮಸ್ಥಳ ಬಗ್ಗೆ ಅಪಪ್ರಚಾರ ನಡೆಯುವಾಗ ಡಿಕೆ ಶಿವಕುಮಾರ್‌ ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ದರ್ಶನ್‌ ತೂಗುದೀಪ್‌, ಪವಿತ್ರಾ ಗೌಡ ಜಾಮೀನು ರದ್ದು

ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ 164ರಲ್ಲಿ ಹೇಳಿಕೆ ನೀಡಿ. ನಂತರ ಬುರುಡೆಯನ್ನು ತೆಗೆದುಕೊಂಡು ಬಂದಿದ್ದಾನೆ. ಆತ ತಂದ ಬುರುಡೆಯ ಬಗ್ಗೆ ತನಿಖೆ ನಡೆದಿಲ್ಲ. ಆದರೆ ಗುಂಡಿ ಅಗೆಯುವ ಕೆಲಸ ನಡೆಯುತ್ತಿದೆ. ಆತ ಎಲ್ಲಿಂದ ಬುರುಡೆ ತಂದಿದ್ದಾನೆ ಅನ್ನೋ ಬಗ್ಗೆ ಮೊದಲು ತನಿಖೆ ನಡೆಸಿದೆ.

ಮುಸುಕುಧಾರಿ ಧರ್ಮಸ್ಥಳದಲ್ಲಿ ಸಾಕಷ್ಟು ಅಸಹಜ ಸಾವುಗಳು ನಡೆದಿದೆ. ಹೆಣಗಳನ್ನು ಹೂತಿದ್ದೇನೆ ಅಂದಾಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹೇಳಿಕೆ ನೀಡಿದ್ದರು. ಈತನನ್ನು ಮಂಪರು ಪರೀಕ್ಷೆಗೆ ಒಳಪಡಿಬೇಖು ಎಂದಿದ್ದರು.

ಆ ವೇಳೆಯಲ್ಲಿಯೇ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದ್ದರೆ, ಧರ್ಮಸ್ಥಳದ ಬಗ್ಗೆ ಇಷ್ಟೊಂದು ಅಪಪ್ರಚಾರ ನಡೆಯುತ್ತಲೇ ಇರಲಿಲ್ಲ ಎಂದಿದ್ದಾರೆ.

ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಪ್ರತಿನಿತ್ಯ ಮುಸುಧಾರಿ 13 ಪಾಯಿಂಟ್‌ ತೋರಿಸಿ ಗುಂಡಿಗಳನ್ನು ಅಗೆಸಿದ್ದಾನೆ. ಇದೊಂದು ಪತ್ತೆದಾರಿ ಸಿನಿಮಾದ ರೀತಿಯಲ್ಲಿದೆ.

ಬೆಳಗ್ಗೆ 10 ಗಂಟೆಗೆ ಭೀಮಾ ಹೊರಟಿದ್ದಾನೆ ಅಂತಾ ಆತನ ಜೊತೆ ಇರುವ ಒಂದಿಷ್ಟು ಮಾಧ್ಯಮಗಳು, ಯೂಟ್ಯೂಬರ್‌ ಗಳು ಸುದ್ದಿ ಮಾಡೋದು ನಂತರ. ಅವರೇ ಸುಳ್ಳು ಸುದ್ದಿ ಹಬ್ಬಿಸೋ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳದಲ್ಲಿ ಎಷ್ಟು ಗುಂಡಿ ತೆಗೆಯುತ್ತೀರಿ

ಬೆಳಗ್ಗೆಯಿಂದ ಸಂಜೆಯ ತನಕ ಎಸ್‌ಐಟಿ ವಶದಲ್ಲಿ ಅಲ್ಲಾ, ಜೊತೆಯಲ್ಲಿ ಇರುವ ದೂರುದಾರ ಭೀಮಾ ಸಂಜೆ ಎಲ್ಲಿಗೆ ಹೋಗ್ತಾನೆ ಅನ್ನೋದು ಗೊತ್ತಿಲ್ಲ. ಎಸ್ಐಟಿ ತನಿಖೆಯ ಬಗ್ಗೆ ನಮಗೂ ವಿಶ್ವಾಸವಿತ್ತು. ಆದರೆ ಆತ ಎಸ್‌ಐಟಿ ಜೊತೆಗೆ ಇರೋದಿಲ್ಲ. ಇದೀಗ ಜಿಪಿಆರ್‌ನಿಂದ ಶೋಧ ಕಾರ್ಯ ನಡೆಯುತ್ತಿದೆ.

ಸತ್ಯಾಸತ್ಯತೆಯ ಬಗ್ಗೆ, ಎಸ್‌ಐಟಿ ತನಿಖೆಯ ಬಗ್ಗೆ ಮಾತನಾಡಲಾರೆ, ಆದರೆ ನಿಮ್ಮ ಸರಕಾರಕ್ಕೆ ಮಂಕು ಕವಿಯುವ ಕೆಲಸವನ್ನು ಮುಸುಕುದಾರಿ ಮಾಡ್ತಾ ಇದ್ದಾನೆ. ಹೀಗಾಗಿ ಎಸ್‌ಐಟಿ ತನಿಖೆಯ ಬಗ್ಗೆ ಮಧ್ಯಂತರ ವರದಿ ಸಲ್ಲಿಸಿ ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿನ 16- 17 ಜಿಲ್ಲೆಗಳಲ್ಲಿ ಜನರು ಧರ್ಮಸ್ಥಳದ ಕುರಿತ ಅಪಪ್ರಚಾರವನ್ನು ಸಹಿಲಾರದೆ ಬೀದಿಗೆ ಬಂದಿದ್ದಾರೆ. ನಿಮ್ಮ ಸಹಕಾರದ ಸಹಾನುಭೂತಿಯಿಂದಲೇ ಇಷ್ಟೊ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಧರ್ಮಸ್ಥಳದ ಬಗ್ಗೆ ಅವಹೇಳನ ಸಹಿಸಲು ಸಾಧ್ಯವಿಲ್ಲ

ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಪೂಜ್ಯ ಭಾವನೆ ಇದೆ. ಆದರೆ ಮಂಜುನಾಥ ಪೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಅವಾಚ್ಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ.

ಡಿಜೆ ಹಳ್ಳಿ, ಕೆಜಿಹಳ್ಳಿ ಪ್ರಕರಣದ ವೇಳೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಒಂದು ಪೋಸ್ಟ್‌ನಿಂದ ಧಾರ್ಮಿಕ ಭಾವನೆ ಧಕ್ಕೆಯಾಗಿ ಪೊಲೀಸ್‌ ಸ್ಟೇಷನ್‌, ಶಾಸಕರ ಮನೆಯನ್ನು ಸುಟ್ಟು ಹಾಕಿದ್ದಾರೆ ಎಂದಿದ್ದರು. ಆದ್ರೀಗ ಇಷ್ಟೊಂದು ಪೋಸ್ಟ್‌ಗಳಲ್ಲಿ ಅವಹೇಳನಕಾರಿ ಹೇಳಿಕೆ ಬಂದಾಗ ನಿಮಗೆ ಯಾಕೆ ಅನಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರಕಾರ ಮಾಡಲಾರದ ಕಾರ್ಯವನ್ನು ಧರ್ಮಸ್ಥಳ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ. ಬಾಹುಬಲಿಯ ಬುಡಕ್ಕೆ ಬಂದವರು ನಾಳೆ ಸರಕಾರಕ್ಕೆ ಬುಡಕ್ಕೂ ಬರುತ್ತಾರೆ. ಈ ಕುರಿತು ಎಚ್ಚರವಾಗಿರಿ ಎಂದು ಸರಕಾರವನ್ನು ಸುನಿಲ್‌ ಕುಮಾರ್‌ ಎಚ್ಚರಿಸಿದ್ದಾರೆ.

ಹಣಕಾಸು, ಮುಸುಧಾರಿಯ ಸಂಪರ್ಕದ ತನಿಖೆಗೆ ಆಗ್ರಹ

ಧರ್ಮಸ್ಥಳದ ವಿರುದ್ದ ವ್ಯವಸ್ಥಿತ ಷಡ್ಯಂತ್ರವೊಂದು ನಡೆಯುತ್ತಿದೆ. ಮುಸುಕುಧಾರಿಗೆ, ಹೋರಾಟಗಾರರಿಗೆ ಹಣಕಾಸಿನ ನೆರವು ನೀಡ್ತಾ ಇರೋರು ಯಾರು ಅನ್ನೋ ಬಗ್ಗೆ ತನಿಖೆ ನಡೆಸಬೇಕು.

ಬೆಳಗಿನಿಂದ ಸಂಜೆಯವರೆಗೆ ಎಸ್‌ಐಟಿ ಜೊತೆಯಲ್ಲೇ ಇರುವ ಮುಸುಕುಧಾರಿ ಸಂಜೆ ಯಾರ ಜೊತೆಗೆ ಹೋಗ್ತಾನೆ. ಆತ ಯಾರ ಜೊತೆಗೆಲ್ಲಾ ಸಂಪರ್ಕದಲ್ಲಿ ಇದ್ದಾನೆ ಅನ್ನೋ ಬಗ್ಗೆ ಎಸ್‌ಐಟಿ ತನಿಖೆಯನ್ನು ನಡೆಸಲೇ ಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

Dharmasthala SIT investigation should submit interim report Demand MLA Sunil Kumar

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories