ಧರ್ಮಸ್ಥಳ ಎಸ್‌ಐಟಿ ತನಿಖೆಯಲ್ಲಿ ಸಿಕ್ಕಿದ್ದೇನು ? ಸ್ಪೋಟಕ ಹೇಳಿಕೆ ನೀಡಿದ ಗೃಹ ಸಚಿವ ಪರಮೇಶ್ವರ್‌

Dharmasthala case Dr g parameshwar : ಬೆಂಗಳೂರು : ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಇಂದು ಸದನಕ್ಕೆ ತನಿಖೆಯ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ವೇಳೆಯಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಇಟ್ಟಿದ್ದೇನೆ ಎಂದು ಅನಾಮಿಕ ವ್ಯಕ್ತಿಯೋರ್ವನ ಹೇಳಿಕೆಯಂತೆ ಕರ್ನಾಟಕ ಸರಕಾರ ಎಸ್‌ಐಟಿ ರಚನೆ ಮಾಡಿದೆ. ಅಲ್ಲದೇ ಧರ್ಮಸ್ಥಳದಲ್ಲಿ ತನಿಖೆಯನ್ನು ತೀವ್ರಗೊಳಿಸಿದೆ.

ಧರ್ಮಸ್ಥಳ : ಉತ್ಕನನ ಕಾರ್ಯ ಸ್ಥಗಿತ

ಧರ್ಮಸ್ಥಳದಲ್ಲಿ ಎಸ್‌ಐಟಿ ಇನ್ನೂ ತನಿಖೆಯನ್ನು ಆರಂಭಿಸಿಲ್ಲ. ಅನಾಲಿಸಿಸ್‌ ಮೇಲೆ ತನಿಖೆ ಆರಂಭವಾಗಲಿದೆ. ಮಾಸ್ಕ್‌ ಮ್ಯಾನ್‌ ತೋರಿಸಿದ ಕಡೆಯಲ್ಲೆಲ್ಲಾ ಉತ್ಕನನ ನಡೆಸೋದಿಲ್ಲ. ಈಗಾಗಲೇ ಉತ್ಕನನ ಸ್ಥಗಿತಗೊಳಿಸುವ ಬಗ್ಗೆ ಎಸ್‌ಐಟಿಯವರೇ ನಿರ್ಧಾರ ಸ್ಪಷ್ಟ ಪಡಿಸಿದ್ದಾರೆ.

25 ವರ್ಷಗಳಿಂದ ಧರ್ಮಸ್ಥಳದಲ್ಲಿ ಮಹಿಳೆಯರು ಕಾಣೆಯಾಗಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ ಬರೆದಿದ್ದರು. ಅದರಂತೆ ಜುಲೈ 19 ರಂದು ಎಸ್‌ಐಟಿ ರಚನೆ ಮಾಡಲಾಗಿದೆ. ಪ್ರಣವ್‌ ಮೊಹಾಂತಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳಾದ ಅನುಚೇತ್‌, ಸೌಮ್ಯ ಲತಾ ಮತ್ತು ಜಿತೇಂದ್ರ ಕುಮಾರ್‌ ಅವರನ್ನು ಒಳಗೊಂಡು ಎಸ್‌ಐಟಿ ತನಿಖೆ ನಡೆಸುತ್ತಿದೆ. ಈಗಾಗಲೇ ಅನಾಮಿಕನಿಂದ 164 ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಆತ ನೀಡಿದ ಮಾಹಿತಿ ಆಧಾರದಲ್ಲಿಯೇ ತನಿಖೆ ನಡೆಯುತ್ತಿದೆ.

ಧರ್ಮಸ್ಥಳ ಅಸ್ತಿಪಂಜ ದೊರೆತ ಸ್ಥಳ ಹಾಗೂ ಸಿಕ್ಕಿರುವ ಮೂಳೆಗಳ ಬಗ್ಗೆಯೂ ವಿಶ್ಲೇಷಣೆ ನಡೆಯಬೇಕಾಗಿದೆ. ಇದುವರೆಗೆ ತನಿಖೆಯೂ ಆರಂಭವಾಗಿಲ್ಲ. ಈಗ ನಡೆಯುತ್ತಿರುವುದು ಎಸ್‌ಐಟಿ ತನಿಖೆಯ ಪೂರ್ವ ಭಾಗವಷ್ಟೆ.

Also Read : ಗೃಹಲಕ್ಷ್ಮೀ ಯೋಜನೆ : ಜುಲೈ-ಆಗಸ್ಟ್‌ ಕಂತಿನ 4,000 ರೂ. ಬಿಡುಗಡೆ

2 ಸ್ಥಳಗಳಲ್ಲಿ ಅಸ್ತಿಪಂಜರ ಪತ್ತೆ : ಸಚಿವ ಡಾ.ಜಿ.ಪರಮೇಶ್ವರ್‌

ದೂರುದಾರ ನೀಡಿರುವ ಹೇಳಿಕೆಯನ್ನು ಆಧರಿಸಿ ಉತ್ಕನನ ನಡೆಸಲಾಗಿದೆ. 2 ಸ್ಥಳಗಳಲ್ಲಿ ಅಸ್ಥಿಪಂಜರ ದೊರೆತಿದ್ದು, ಮೂಳೆ, ಬುರುಡೆ ಪತ್ತೆಯಾಗಿದೆ. ಇವುಗಳನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಎಫ್‌ಎಸ್‌ಎಲ್‌ ವರದಿ ಬಂದ ನಂತರವೇ ತನಿಖೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಸ್ಥಳದಲ್ಲಿ ದೊರೆತಿರುವ ಅಸ್ತಿಪಂಜರ, ಮಣ್ಣಿನ ಪರೀಕ್ಷೆಯ ವರದಿಗಳು ಬಂದ ನಂತರದಲ್ಲಿಯೇ ನಿಜವಾದ ತನಿಖೆ ಆರಂಭಗೊಳ್ಳಲಿದೆ. ಅಲ್ಲದೇ ತನಿಖೆ ತುಂಬಾ ಗಂಭೀರವಾಗಿಯೇ ನಡೆಯುತ್ತದೆ.

Also Read : ಧರ್ಮಸ್ಥಳ ಕೇಸ್‌ : ಮಹೇಶ್ ತಿಮರೋಡಿ ಬಂಧನಕ್ಕೆ ಸಚಿವ ಪರಮೇಶ್ವರ್‌ ಸೂಚನೆ

ಧರ್ಮಸ್ಥಳದಲ್ಲಿ ಪಾರದರ್ಶಕ ತನಿಖೆ

ಎಸ್‌ಐಟಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಯ ಕುರಿತು ಪಾರದರ್ಶಕವಾದ ತನಿಖೆಯನ್ನು ನಡೆಸುತ್ತದೆ. ತನಿಖೆ ಮುಂದಿನ ದಿನಗಳಲ್ಲಿ ಗಂಭೀರವಾಗಿ ಸಾಗಲಿದೆ. ದೂರುದಾರ ಹೇಳಿದ ಎಲ್ಲಾ ಸ್ಥಳಗಳನ್ನು ಅಗೆಯುವುದಿಲ್ಲ, ಬದಲಾಗಿ ಅನುಮಾನ ಇರುವ ಸ್ಥಳಗಳನ್ನು ಮಾತ್ರವೇ ಅಗೆಯಲಾಗುತ್ತದೆ.

Dharmasthala Mass Buried Case Karnataka Home minister Dr g parameshwar Reveals Sit Investigation report in assembly

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories