ಕರಗುತ್ತಿದೆ ಪಶ್ಚಿಮ ಅಂಟಾರ್ಟಿಕಾದ ಮಂಜುಗಡ್ಡೆ : ಕರಾವಳಿ ಭಾಗಕ್ಕೆ ಕಾದಿದೆ ಗಂಡಾಂತರ

ಪಶ್ಚಿಮ ಅಂಟಾರ್ಟಿಕದಲ್ಲಿ ಮಂಜುಗಡ್ಡೆಗಳು ಕುಸಿಯುವ (West Antarctic ice sheet weakening ) ಅಂಚಿನಲ್ಲಿದೆ ಎಂದು ವಿಜ್ಞಾನಿಗಳು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಒಂದು ಅಧ್ಯಯನದ ಪ್ರಕಾರ, ಸರಿ ಸುಮಾರು 7,60,000 ಚದರ ಮೈಲುಗಳಷ್ಟು ವಿಸ್ತೀರ್ಣ ಹೊಂದಿರುವ ಮಂಜುಗಡ್ಡೆಯು ದುರ್ಬಲಗೊಳ್ಳುತ್ತಿದೆ.

ಒಂದು ವೇಳೆ ಈ ಮಂಜುಗಡ್ಡೆಯು ಸಂಪೂರ್ಣ ಕರಗಿ ಹೋದರೆ ಪ್ರಪಂಚಾದ್ಯಂತ ಅನೇಕ ನಗರಗಳು ಸಂಪೂರ್ಣವಾಗಿ ಮುಳುಗಿ ಹೋಗಬಹುದು. ಭಯಾನಕ ದುರಂತಕ್ಕೆ ನಾಂದಿ ಹಾಡಬಹುದು ಎಂದು ಆಸ್ಟ್ರೇಲಿಯನ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಇಂಗಾಲದ ಡೈ ಆಕ್ಸೈಡ್​​ನ ಮಟ್ಟವು ಅನೇಕ ಕರಾವಳಿ ಪ್ರದೇಶಗಳಲ್ಲಿ ವಿನಾಶಕ್ಕೆ ನಾಂದಿ ಹಾಡಬಹುದು. ಈ ಭಾರೀ ಪ್ರಮಾಣದ ಮಂಜುಗಡ್ಡೆ ಕುಸಿತ ಕಂಡಾದ ಸಮುದ್ರ ಮಟ್ಟವು 9.8 ಅಡಿಗಳಿಗೂ ಹೆಚ್ಚು ಏರಿಕೆ ಕಾಣಬಹುದು.

ಇದನ್ನೂ ಓದಿ : 8 ಕಿಲೋ ಮೀಟರ್‌ ದೂರದ ಓಟದ ಸ್ಪರ್ಧೆ ಗೆದ್ದ ಕುಡುಕ

ಜಾಗತಿಕ ತಾಪಮಾನ ಏರಿಕೆಯಾಗುತ್ತಾ ಹೋದಂತೆ ಮಂಜುಗಡ್ಡೆ ಹದಗೆಡುತ್ತಾ ಹೋಗಲಿದೆ ಎಂದು ಅಧ್ಯಯನದ ಪ್ರಮುಖ ಲೇಖಕಿ ಡಾ. ನೆರೆಲಿ ಅಬ್ರಾಮ್​ ಮಾಹಿತಿ ನೀಡಿದ್ದಾರೆ.

ಈ ದುರಂತವು ಭಯಾನಕವಾಗಿರುತ್ತದೆ. ಯಾವ ಮಟ್ಟಿಗೆ ಎಂದರೆ ಮುಂದಿನ ತಲೆಮಾರುಗಳ ಮೇಲೂ ಇದು ಪರಿಣಾಮ ಬೀರಬಹುದು. ಹವಾಮಾನ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಲಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಅಂಟಾರ್ಟಿಕಾದಲ್ಲಿ ಉಂಟಾಗುತ್ತಿರುವ ಈ ಬದಲಾವಣೆಯು ವನ್ಯ ಜೀವಿಗಳು ಹಾಗೂ ಸಾಗರ ಪರಿಸರ ವ್ಯವಸ್ಥೆಗೆ ಭಾರೀ ಹೊಡೆತವನ್ನು ನೀಡಲಿದೆ. ಪೆಂಗ್ವಿನ್​​ಗಳು ಅಳಿವಿನಂಚಿಗೆ ಸೇರಬಹುದು.

ಇದನ್ನೂ ಓದಿ : 80ನೇ ವಯಸ್ಸಿನಲ್ಲೂ ಸಾವಿರ ಮೆಟ್ಟಿಲು ಏರಿದ ವೃದ್ದೆ

ಸಮುದ್ರ ಮಟ್ಟವು 9.8ಅಡಿಗಳಷ್ಟು ಏರಿಕೆ ಕಂಡರೆ, ಪ್ರಪಂಚದ ಕರಾವಳಿ ಭಾಗದಲ್ಲಿರುವ ನಗರಗಳು ಜಲಸಮಾಧಿಯಾಗಲಿವೆ. ಯಾವ ಸ್ಥಳಗಳು ನಿಖರವಾಗಿ ಪ್ರವಾಹಕ್ಕೆ ಸಿಲುಕಿವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ಆದರೆ ಬ್ರಿಟನ್​ನ ಪೂರ್ವ ಕರಾವಳಿ ಭಾಗವು ಅತೀ ಹೆಚ್ಚು ಪ್ರವಾಹ ಪೀಡಿತ ಪ್ರದೇಶ ಎನಿಸಿಕೊಳ್ಳಲಿದೆ. ಲಂಡನ್​ನ ಕೆಲ ಭಾಗಗಳು ಹಾನಿಗೊಳಗಾಗಲಿವೆ ಎಂದು ಅಂದಾಜಿಸಲಾಗಿದೆ.

ಯುಕೆಯಲ್ಲಿ, ಪೂರ್ವ ಕರಾವಳಿಯು ಹೆಚ್ಚು ಪರಿಣಾಮ ಬೀರುತ್ತದೆ. ಹಲ್, ಸ್ಕೆಗ್ನೆಸ್ ಮತ್ತು ಗ್ರಿಮ್ಸ್‌ಬಿ ಮುಳುಗುತ್ತವೆ, ಆದರೆ ಲಂಡನ್‌ನ ಕೆಲವು ಭಾಗಗಳು ಸಹ ಹಾನಿಗೊಳಗಾಗುತ್ತವೆ. ಈ ಸನ್ನಿವೇಶದಲ್ಲಿ ಪಶ್ಚಿಮ ಕರಾವಳಿ ನಗರಗಳು ಸಹ ಮುಳುಗಬಹುದು.

West Antarctic ice sheet is weakening : Danger awaits Karnataka coastal areas in Kannada News

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories