Swarna Gowri Vratha 2025: ಇಂದು ಸ್ವರ್ಣ ಗೌರಿ ವ್ರತ

Swarna Gowri Vratha 2025: ಹಿಂದೂಗಳ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾದ ಗೌರಿ–ಗಣೇಶ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ವಿಘ್ನಹರ್ತ ಗಣೇಶನನ್ನು ಮನೆಗೆ ಕರೆತರಲು ಭರದಿಂದ ಸಿದ್ಧತೆಗಳಾಗುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲೂ ಗೌರಿ–ಗಣೇಶ ಮೂರ್ತಿಗಳು ಖರೀದಿಗಾಗಿ ಬಂದಿವೆ. ಗಣೇಶ ಚತುರ್ಥಿಯನ್ನು ಆಚರಿಸುವದಕ್ಕಿಂತ ಒಂದು ದಿನ ಮೊದಲು ಅಂದರೆ ತದಿಗೆ ತಿಥಿಯಂದು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ.

ಇದು ಮಾತೆ ಪಾರ್ವತಿಯನ್ನು ಪೂಜಿಸುವ ಹಬ್ಬವಾಗಿದೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯ ಹಾಗೂ ಕುಟುಂಬದ ಯಶಸ್ಸು ಮತ್ತು ಸಮೃದ್ಧಿಗಾಗಿ ಗೌರಿ ವ್ರತವನ್ನು ಆಚರಿಸುತ್ತಾರೆ.

ಇದನ್ನು ಸ್ವರ್ಣ ಗೌರಿ ವ್ರತವೆಂದೂ ಕರೆಯುತ್ತಾರೆ. ಈ ವರ್ಷ ಸ್ವರ್ಣ ಗೌರಿ ವ್ರತವನ್ನು ಆಗಸ್ಟ್‌ 26 ರಂದು ಆಚರಿಸಲಾಗುತ್ತಿದೆ.

ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ, ಶುಕ್ಲ ಪಕ್ಷದ ತದಿಗೆ ತಿಥಿಯಂದು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ.

ಸ್ವರ್ಣ ಗೌರಿ ವ್ರತದ ಮಹತ್ವವೇನು? ಪೂಜೆಯ ಸಮಯ ಹಾಗೂ ವ್ರತಾಚರಣೆ ಹೇಗೆ ಎಂದು ತಿಳಿದುಕೊಳ್ಳೋಣ.

ಸ್ವರ್ಣ ಗೌರಿ ವ್ರತ ಪೂಜಾ ಸಮಯ

ಹಿಂದೂ ಪಂಚಾಂಗದ ಪ್ರಕಾರ ಸ್ವರ್ಣ ಗೌರಿ ವ್ರತವನ್ನು ಆಗಸ್ಟ್‌ 26, ಮಂಗಳವಾರದಂದು ಆಚರಿಸಲಾಗುತ್ತದೆ.

ಗೌರಿ ಪೂಜೆಯ ಶುಭ ಮುಹೂರ್ತವು ಆಗಸ್ಟ್‌ 26 ರಂದು ಮಂಗಳವಾರ ಮುಂಜಾನೆ 6 ಗಂಟೆ 6 ನಿಮಿಷದಿಂದ ಬೆಳಿಗ್ಗೆ 8 ಗಂಟೆ 36 ನಿಮಿಷಗಳವರೆಗೆ ಇರುತ್ತದೆ.

ತದಿಗೆ ತಿಥಿಯು ಆಗಸ್ಟ್‌ 26 ರ ಮಧ್ಯಾಹ್ನ 3 ಗಂಟೆ 24 ನಿಮಿಷಕ್ಕೆ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: Sweet recipes:ಸಿಹಿ ಪ್ರಿಯರಿಗೆ ಇಷ್ಟವಾಗುತ್ತೆ “ಸವೆನ್‌ ಕಪ್‌‌ ” ಸ್ವೀಟ್

ಸ್ವರ್ಣ ಗೌರಿ ವ್ರತದ ಮಹತ್ವವೇನು?

ಸ್ವರ್ಣ ಗೌರಿ ವ್ರತವನ್ನು ವಿವಾಹಿತ ಮಹಿಳೆಯರು ಕೈಗೊಳ್ಳುತ್ತಾರೆ. ಈ ವ್ರತವು ಶಾಂತಿ, ಸಮೃದ್ಧಿ ಮತ್ತು ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ನೀಡುತ್ತದೆ.

ಈ ಹಬ್ಬದಲ್ಲಿ ವಿವಾಹಿತ ಮಹಿಳೆಯರು ತವರು ಮನೆಗೆ ಭೇಟಿ ನೀಡುವ ಸಂಪ್ರದಾಯವನ್ನು ಹೊಂದಿದೆ. ಸ್ವರ್ಣ ಗೌರಿ ವ್ರತವನ್ನು ಮಾಡುವುದರಿಂದ ಮಾತೆ ಪಾರ್ವತಿಯ ಆಶೀರ್ವಾದ ದೊರಕುತ್ತದೆ.

ಸ್ವರ್ಣ ಗೌರಿ ವ್ರತ ಮಾಡುವುದು ಹೇಗೆ?

– ಗೌರಿ ಹಬ್ಬದ ದಿನದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಚಿಯಾಗಬೇಕು. ನಂತರ ದೆವರ ಕೋಣೆಯನ್ನು ಸ್ವಚ್ಛಗೊಳಿಸಬೇಕು.

– ಪಾರ್ವತಿ ದೇವಿಯ ಫೋಟೊ ಅಥವಾ ಮಣ್ಣಿನ ಮೂರ್ತಿಯನ್ನುಇಟ್ಟು ಅಲಂಕರಿಸಬೇಕು.

– ಬಳಿಕ ದೇವಿಯ ಮುಂದೆ ತುಪ್ಪವನ್ನು ಹಚ್ಚಬೇಕು. ಆನಂತರ ಗೌರಿಗೆ ಹೂವು, ಹಣ್ಣು ಹಾಗು ಆಭರಣಗಳನ್ನು ಹಾಕಿ ಆಕರ್ಷಕವಾಗಿ ಸಿಂಗರಿಸಬೇಕು.

– ದೇವಿಯ ನೈವೇದ್ಯಕ್ಕಾಗಿ ಸಿಹಿಯನ್ನು ತಯಾರಿಸಬೇಕು. ಶಿವ ಪಾರ್ವತಿಯ ಮಂತ್ರಗಳನ್ನು ಪಠಿಸಬೇಕು.

– ನಂತರ ನೈವೇದ್ಯವನ್ನು ದೇವಿಗೆ ಸಮರ್ಪಿಸಬೇಕು

(swarna gowri vratha 2025 know the rituals poja time significance)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories