ಹಾಸ್ಯನಟ ಚಿಕ್ಕಣ್ಣ ಕೈಹಿಡಿಯಲಿದ್ದಾರೆ ಉದ್ಯಮಿ ಪಾವನಾ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಚಿಕ್ಕಣ್ಣ (Comedian Chikkanna) ಗೆ ಕಂಕಣಬಲ ಕೂಡಿಬಂದಿದೆ. ಮೆಕ್ಯಾನಿಕಲ್‌ ಇಂಜಿನಿಯರ್‌ ಪಾವನಾ ಜೊತೆಗೆ ಸಪ್ತಪದಿ ತುಳಿಯೋದಕ್ಕೆ ಚಿಕ್ಕಣ್ಣ ರೆಡಿಯಾಗಿದ್ದಾರೆ.

ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ. ಚಿಕ್ಕಣ್ಣ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬಂದಿತ್ತು. ಕೊನೆಗೂ ಚಿಕ್ಕಣ್ಣ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಅವರನ್ನು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ. ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾವನಾ ಅವರು ಚಿಕ್ಕಣ್ಣ ಜೊತೆ ಕಾಣಿಸಿಕೊಂಡಿದ್ದರು.

ಪಾವನಾ ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಬೆಂಗಳೂರಿನಲ್ಲಿ ‘ಪ್ರೂಡೆನ್ಸ್ ಎಲೆಕ್ಟ್ರಾನಿಕ್ಸ್’ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ.

ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದ ವಸ್ತುಗಳನ್ನು ತಯಾರಿಸುವ ಕಂಪನಿಯಾಗಿದೆ. ಇನ್ನು ಪಾವನಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಆಗಿದ್ದು, ‘ಮ್ಯಾಕ್ಸ್‌ಪ್ರೋ ಆಟೋಮೇಷನ್’ ಮತ್ತು ‘ಹನಿವೆಲ್’ ನಂತಹ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.

ಮುಂದಿನ ಏಪ್ರಿಲ್ ಚಿಕ್ಕಣ್ಣ ಮತ್ತು ಪಾವನಾ ಅವರ ಕುಟುಂಬಸ್ಥರು ಮದುವೆಯನ್ನು ನಿಶ್ಚಯ ಮಾಡಿದ್ದಾರೆ. ಈ ನಡುವೆ ಇತ್ತೀಚೆಗೆ ಎರಡೂ ಕುಟುಂಬಗಳು ಸೇರಿ ಹೂ ಮುಡಿಸುವ ಶಾಸ್ತ್ರವನ್ನು ನೆರವೇರಿಸಿದ್ದಾರೆ.

ಇದನ್ನೂ ಓದಿ : ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್‌ ಭೇಟಿ

ಎರಡೂ ಕುಟುಂಬಗಳು ಸೇರಿ ಹೂ ಮುಡಿಸುವ ಶಾಸ್ತ್ರವನ್ನು ನೆರವೇರಿಸಿದ್ದಾರೆ. ಮದುವೆಯ ನಿಶ್ಚಿತಾರ್ಥ ಮತ್ತು ದಿನಾಂಕದ ಬಗ್ಗೆ ಅಧಿಕೃತವಾಗಿ ಮುಂದಿನ ವಾರ ಘೋಷಣೆ ಆಗುವ ಸಾಧ್ಯತೆ ಇದೆ.

ಚಿಕ್ಕಣ್ಣ ಅವರು ಯಶ್ ನಟನೆಯ ‘ಕಿರಾತಕ’ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು.

ನಂತರ ‘ರಾಜಾ ಹುಲಿ’ ಮತ್ತು ‘ಅಧ್ಯಕ್ಷ’ ಚಿತ್ರಗಳಲ್ಲಿನ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದರು. ಇವರು ನಟಿಸಿರುವ ಪ್ರಮುಖ ಸಿನಿಮಾಗಳಲ್ಲಿ ‘ರನ್ನ’, ‘ಮಾಸ್ಟರ್‌ಪೀಸ್’, ‘ಕೋಟಿಗೊಬ್ಬ 2, ‘ರಾಜಕುಮಾರ’, ಹೆಬ್ಬುಲಿ’ ‘ರಾಂಬೋ 2’, ‘ಒಡೆಯ ಮತ್ತು ‘ಉಪಾಧ್ಯಕ್ಷ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟರಾಗಿ ಮಾತ್ರವಲ್ಲದೇ ಗೀತರಚನೆಕಾರರಾಗಿಯೂ ಅವರು ಕೆಲಸ ಮಾಡಿದ್ದಾರೆ. ಕನ್ನಡ ಶಾರ್ಪ್‌ಶೂಟರ್ ಚಿತ್ರದ ಕುಂಟೆಬಿಲ್ಲೆ ಹಾಡಿಗೆ ಗೀತರಚನೆ ಕೂಡ ಮಾಡಿದ್ದಾರೆ. ಈ ಹಾಡು ಬಹು ಖ್ಯಾತಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ : ಕಾಂತಾರ 2 ಸಿನಿಮಾಕ್ಕೆ ಸಾಲು ಸಾಲು ಸಂಕಷ್ಟ, ಅಭಯ ಕೊಟ್ಟ ಪಂಜುರ್ಲಿ ದೈವ

Comedian Chikkanna to marry with businessman Pawana Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories