ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್‌ ಭೇಟಿ

ಉಡುಪಿ : ಕನ್ನಡ ಖ್ಯಾತ ನಟಿ ರಕ್ಷಿತಾ ಪ್ರೇಮ್‌ (Rakshitha Prem) ಅವರು ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಾರಿಯಮ್ಮನಿಗೆ ಘಂಟಾನಾದ ಸೇವೆಯ ಜೊತೆಗೆ ಅನ್ನದಾನ ಸೇವೆಯನ್ನು ನೆರವೇರಿಸಿದ್ದಾರೆ.

ಉಡುಪಿ ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರವಾಗಿರುವ ಕಾಪುವಿನ ಮಾರಿಯಮ್ಮನ ದೇವಸ್ಥಾನಕ್ಕೆ ಖ್ಯಾತ ನಟ, ನಟಿಯರು, ಕ್ರಿಕೆಟ್‌ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು ಭೇಟಿ ನೀಡುತ್ತಲೇ ಇರುತ್ತಾರೆ.

ಇದೀಗ ನಟಿ ರಕ್ಷಿತಾ ಪ್ರೇಮ್‌ ಅವರು ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮನ ದರ್ಶನ ಪಡೆದಿದ್ದಾರೆ. ಈ ವೇಳೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ವೇದಮೂರ್ತಿ ಶ್ರೀನಿವಾ ತಂತ್ರಿ ಕಲ್ಯಾ ಅವರು ಗೌರವಿಸಿದ್ದಾರೆ.

ಈ ವೇಳೆಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ರಕ್ಷಿತಾ ಪ್ರೇಮ್‌ ಅವರು, ಕಳೆದ ವಾರ ನನ್ನ ತಾಯಿ ಇಲ್ಲಿಗೆ ಬಂದು ಹರಿಕೆ ಹೊತ್ತುಕೊಂಡಿದ್ದರು. ಜೊತೆಗೆ ನಾನು ಕೂಡ ಮಾರಿಯಮ್ಮನ ದೇವಸ್ಥಾನಕ್ಕೆ ಬರಬೇಕು ಅಂತಾ ಅಂದುಕೊಂಡಿದ್ದೆ ಎಂದಿದ್ದಾರೆ.

ಇದನ್ನೂ ಓದಿ : ನಟ ಅಜಯ್‌ ರಾವ್‌ ದಾಂಪತ್ಯದಲ್ಲಿ ಬಿರುಗಾಳಿ

ಆದರೆ ಅಮ್ಮ ನನ್ನನ್ನು ಅಷ್ಟು ಬೇಗ ಕರೆಯಿಸಿಕೊಳ್ತಾಳೆ ಅನ್ನೋದನ್ನು ನಾನು ಅಂದುಕೊಂಡಿರಲಿಲ್ಲ. ದೇವಸ್ಥಾನಕ್ಕೆ ಭೇಟಿ ನೀಡಿದ ನನಗೆ ತುಂಬಾ ಖುಷಿಯಾಗಿದೆ. ದೇವಸ್ಥಾನ ತುಂಬಾ ಚೆನ್ನಾಗಿದೆ ಎಂದಿದ್ದಾರೆ.

ಮಾರಿಯಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವೀಂದ್ರ ಮಲ್ಲಾರ್‌, ಮಾಧವ ಆರ್.‌ ಪಾಲನ್‌, ಚರಿತ ದೇವಾಡಿಗ, ಪ್ರಬಂಧಕ ಗೋವರ್ಧನ ಸೇರಿಗಾರ್‌, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ್‌ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಕೋಣ ಸಾವು

Actress Rakshitha Prem Visit Kaup Hosa Marigudi Temple

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories