Women Assault: ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಇದೇ ಮುಖ್ಯ ಕಾರಣವೆಂದ ಮಹಿಳೆ; ಏನಿದು ವಿವಾದ?
Women Ass: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಕಾಮುಕರು ತಮ್ಮ ಅಟ್ಟಹಾಸ ಮೇರೆಯುತ್ತಿದ್ದಾರೆ. ಇತ್ತೀಚೆಗೆ ಕೇರಳ (kerala) ಮೂಲದ ಕಂಟೆಂಟ್ ಕ್ರಿಯೇಟರ್ ಒಬ್ಬಳಿಗೆ ಬಸ್ ಪ್ರಯಾಣದ ಸಮಯದಲ್ಲಿ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ಆಕೆ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿಕೊಂಡಿದ್ದಾಳೆ. ಇದು ಈಗ ಎಲ್ಲರ ಗಮನ ಸೆಳೆದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ನಿರಂತರವಾಗಿ ಅವಳನ್ನು ಅನುಚಿತವಾಗಿ ನೋಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ವಿಡಿಯೊದಲ್ಲಿದ್ದ ಮಹಿಳೆ ಕೇರಳದ ಸಾಂಪ್ರದಾಯಿಕ ಸೀರೆಯನ್ನು ಧರಿಸಿ ಕಿಕ್ಕಿರಿದ ಬಸ್ಸಿನಲ್ಲಿ ಕುಳಿತಿದ್ದು, ಪಕ್ಕದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಅವನು ಪದೇ ಪದೇ ಅವಳನ್ನು ಅನುಚಿತವಾಗಿ ನೋಡುತ್ತಿರುವುದು ಕಂಡುಬಂದಿದೆ. ಇದನ್ನು ಕಂಟೆಂಟ್ ಕ್ರಿಯೇಟರ್ ತನ್ನ ಮೊಬೈಲ್ ಫೋನ್ನ ಸೆಲ್ಫಿ ಕ್ಯಾಮೆರಾ ಬಳಸಿ ಅದನ್ನು ರೆಕಾರ್ಡ್ ಮಾಡಿದ್ದಾಳೆ. ಅವಳು ತನ್ನನ್ನು ಗಮನಿಸುತ್ತಿದ್ದಾಳೆಂದು ತಿಳಿದಿದ್ದರೂ, ಆ ವ್ಯಕ್ತಿ ಏನೂ ಆಗಿಲ್ಲ ಎಂಬಂತೆ ನಟಿಸುತ್ತಾನೆ. ಸ್ವಲ್ಪ ಹೊತ್ತು ಬೇರೆಡೆ ನೋಡುತ್ತಾನೆ ಮತ್ತು ನಂತರ ನಾಚಿಕೆಯಿಲ್ಲದೆ ತನ್ನ ನಡವಳಿಕೆಯನ್ನು ಮುಂದುವರಿಸುತ್ತಾನೆ.
ಇಲ್ಲಿ ಆ ಮಹಿಳೆ ಈ ರೀಲ್ ಅನ್ನು ಪೋಸ್ಟ್ ಮಾಡಲು ಕಾರಣವೇನೆಂಬುದನ್ನು ಬಹಿರಂಗಪಡಿಸಿದ್ದಾಳೆ. ಪುರುಷರು ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡಲು ಅವರು ಧರಿಸುವ ಬಟ್ಟೆ ಎಂದು ಹೇಳುತ್ತಾರೆ. ಈ ವಿಡಿಯೊದಲ್ಲಿ, ಆಕೆ ಸಾಂಪ್ರದಾಯಿಕವಾಗಿ ಸೀರೆ ಧರಿಸಿ ತನ್ನ ದೇಹವನ್ನು ಮುಚ್ಚಿಕೊಂಡಿದ್ದರೂ ಕೂಡ ಕಾಮುಕನ ಕಣ್ಣು ಆಕೆಯ ಮೇಲೆ ಬಿದ್ದಿದೆ. ಹಾಗಾದರೆ ಆಕೆ ಇಲ್ಲಿ ತಿಳಿಸಲು ಹೊರಟ್ಟಿರುವುದೇನೆಂದರೆ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣ ಮಹಿಳೆಯರು ಹೇಗೆ ಉಡುಗೆ ತೊಡುತ್ತಾರೆ ಎಂಬುದರ ಬಗ್ಗೆಯೇ? ಅಥವಾ ಕಾಮುಕರು ನೋಡುವ ದೃಷ್ಟಿಕೋನವೇ? ಎಂದು ಆಕೆ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾಳೆ.
ಹಾಗೂ ಆಕೆ ಕಾಮೆಂಟ್ಗಳ ವಿಭಾಗದಲ್ಲಿ, ಆ ವ್ಯಕ್ತಿ ನಂತರ ತನ್ನನ್ನು ಅನುಚಿತವಾಗಿ ಮುಟ್ಟಿದ, ತಕ್ಷಣ ಆಕೆ ಅವನಿಗೆ ಹೊಡೆದ ಕಾರಣ ನಂತರ ಆ ವ್ಯಕ್ತಿ ಬೇಗನೆ ಬಸ್ಸಿನಿಂದ ಇಳಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬುದಾಗಿ ತಿಳಿಸಿದ್ದಾಳೆ. ಅಲ್ಲದೇ ಮಹಿಳೆಯರು ಧರಿಸುವ ಉಡುಪಿನಲ್ಲಿ ಯಾವುದೇ ತಪ್ಪಿಲ್ಲ. ಇದು ಮಾನಸಿಕ ಅಸ್ವಸ್ಥತೆ, ವಿಕೃತಿ!” ಎಂದು ಆಕೆ ತಿಳಿಸಿದ್ದಾಳೆ.
ಈ ವಿಡಿಯೊಗೆ ಆಕೆಯ ಫಾಲೋವರ್ಸ್ಗಳು ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬರು, “ಕೆಟ್ಟ ದೃಷ್ಟಿಯಿಂದ ನೋಡುವಾಗಲೇ ಅವನನ್ನು ಹೊಡೆಯಿರಿ ” ಎಂದು ಹೇಳಿದರು. “ಓ ದೇವರೇ… ಇದು ತುಂಬಾ ಅನಾನುಕೂಲಕರವಾಗಿದೆ…” ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಕೇವಲ ಒಂದು ದಿನದಲ್ಲಿ ಈ ವಿಡಿಯೊ 333,394 ಲೈಕ್ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಪುರುಷರ ಮುಖದ ಒರಟು ಚರ್ಮದ ಆರೈಕೆ ಹೀಗಿರಲಿ



