Viral Video: ಅಮ್ಮನ ಸೀರೆಯನ್ನೇ ಧೋತಿ ಮಾಡಿಕೊಂಡ ಮಗ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ!
Viral Video: ಹಿಂದಿನ ಕಾಲದಲ್ಲಿ ಜನರು ಸಂಸ್ಕೃತಿ, ಆಚರಣೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಹಾಗಾಗಿ ಹಬ್ಬ(Festival)) ಹರಿದಿನಗಳಲ್ಲಿ ಎಲ್ಲರೂ ಒಟ್ಟು ಸೇರಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ , ಸಂಪ್ರದಾಯಗಳು, ಆಚರಣೆಗಳು ಕಣ್ಮರೆಯಾಗಿದೆ. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳು ಕಳೆದುಹೋದ ಅನೇಕ ಸಂಸ್ಕೃತಿ(Culture), ಸಂಪ್ರದಾಯಗಳನ್ನು ಮರಳಿ ತರುತ್ತಿದೆ. ಅನೇಕ ಕಂಟೆಂಟ್ ಕ್ರಿಯೇಟರ್ಸ್ ಭಾರತೀಯ ಸಾಂಸ್ಕೃತಿಕ ಉಡುಪಿನ ಕಲ್ಪನೆಗಳನ್ನು, ಪಾಕವಿಧಾನಗಳನ್ನು ಮರಳಿ ತರುತ್ತಿದ್ದಾರೆ. ಅಂತಹ ಒಂದು ರೀಲ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವೈರಲ್ ವಿಡಿಯೊವನ್ನು ಮುಂಬೈ ಮೂಲದ ಭೂಷನ್ ಮಲ್ಕಾನಿ ಎಂಬುವವರು ತಮ್ಮ ಇನ್ಸ್ಟಾಗ್ರಾಮ್(Instagram) ಹ್ಯಾಂಡಲ್ @insta_bhoo ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಭೂಷನ್ ಅವರು ತಮ್ಮ ಸಾಂಪ್ರದಾಯಿಕ ಉಡುಪಿನ ಭಾಗವಾಗಿ ಸೀರೆಯನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಅವರು ತಮ್ಮ ತಾಯಿಯ ಹಳೆಯ ಸಾಮಾನ್ಯ ಸೀರೆಯನ್ನು ಧೋತಿಯಂತೆ ಕಾಣುವ ರೀತಿಯಲ್ಲಿ ಉಡುತ್ತಾರೆ. ಅವರು ಸೀರೆಯ ಜೊತೆಗೆ ಸೊಗಸಾದ ಕುರ್ತಾವನ್ನು ಧರಿಸಿದ್ದಾರೆ. ಅದು ಇಡೀ ಉಡುಪನ್ನು ಸುಂದರವಾಗಿ ಮತ್ತು ರಾಯಲ್ ಆಗಿ ಕಾಣುವಂತೆ ಮಾಡಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ಈ ವಿಡಿಯೊಗ ಲಕ್ಷಾಂತರ ವ್ಯೂವ್ಸ್ ಮತ್ತು ಲಕ್ಷಾಂತರ ಲೈಕ್ಗಳನ್ನು ಗಳಿಸಿತು. ಭೂಷಣ್ ಅವರ ನವೀನ ಶೈಲಿಯನ್ನು ಕಂಡು ಸೋಶಿಯಲ್ ಮೀಡಿಯಾ(Social media) ನೆಟ್ಟಿಗರು ಆಕರ್ಷಿತರಾಗಿದ್ದಾರೆ. ಭೂಷನ್ ಅವರ ಕೌಶಲ್ಯವನ್ನು ಕಂಡು ಯುವಕರು ಮಾತ್ರವಲ್ಲ ಯುವತಿಯರು ಸಹ ಹೊಗಳಿದ್ದಾರೆ. ಒಬ್ಬರು, “ಅಮ್ಮನ ಸೀರೆಗಳನ್ನು ಅವರ ಮಗಳಿಗೆ ಮತ್ತು ಸೊಸೆಯಂದಿರಿಗೆ ಮಾತ್ರ ರವಾನಿಸಬಹುದೆಂದು ಯಾರು ಹೇಳಿದರು?
ಆದರೆ ಇಲ್ಲಿ ಗಂಡು ಮಕ್ಕಳು ಮತ್ತು ಅಳಿಯಂದಿರಿಗೂ ನೀಡಬಹುದು” ಎಂದು ತಮಾಷೆಯಾಗಿ ಬರೆದಿದ್ದಾರೆ. “ಪುರುಷರು ಸಾಂಪ್ರದಾಯಿಕವಾಗಿ ಉಡುಗೆ ತೊಟ್ಟರೆ ನನಗೆ ತುಂಬಾ ಇಷ್ಟ” ಎಂದು ಮತ್ತೊಬ್ಬರು ಬರೆದಿದ್ದಾರೆ. “ನೀವು ಆನುವಂಶಿಕವಾಗಿ ಪಡೆದ ಇನ್ನೊಂದು ವಿಷಯವೆಂದರೆ ತಾಯಿಯ ಸೊಬಗು ಮತ್ತು ದಯೆ” ಎಂದು ಇನ್ನೊಬ್ಬರು ಬರೆದಿದ್ದಾರೆ. ನಾಲ್ಕನೇಯವರು, “ಈಗ ಪುರುಷರು ಕೂಡ ರೆಡಿಯಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಮೂತ್ರ ವಿಸರ್ಜಿಸಲು ಒಳ್ಳೆಯ ಸ್ವಚ್ಛವಾದ ವಾಶ್ರೂಮ್ ಬರುವವರೆಗೆ ಕಾಯುತ್ತಾರೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಪತಿಯ ಜೊತೆಗೆ ಚಕ್ಕಂದವಾಡಿದ ಗೆಳತಿಗೆ ಪತ್ನಿ ಮಾಡಿದ್ದೇನು ನೋಡಿ!



