ಉಡುಪಿಯಲ್ಲಿ 95 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಕಳವು: ವೈಭವ ಗೋಲ್ಡ್ ಅಂಗಡಿಯಲ್ಲಿ ದರೋಡೆ

ಉಡುಪಿ: ಉಡುಪಿ ನಗರದ ಚಿತ್ತರಂಜನ್ ಸರ್ಕಲ್ನಲ್ಲಿರುವ ವೈಭವ ಗೋಲ್ಡ್ & ಸಿಲ್ವರ್ ಮೆಲ್ಟಿಂಗ್ & ರಿಫೈನರಿ (Udupi Vaibhav Gold Shop) ಅಂಗಡಿಯಲ್ಲಿ ಭಾರಿ ಕಳ್ಳತನ ನಡೆದಿದ್ದು, ಸುಮಾರು ₹95,71,000 ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ದೋಚಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನಿವಾಸಿ ವೈಭವ್ ಮೋಹನ ಘಾಟಗೆ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ವೈಭವ್ ಘಾಟಗೆ ಅವರ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್ 8, 2025ರಂದು ರಾತ್ರಿ 10:00 ಗಂಟೆಗೆ ಅವರು ಮತ್ತು ಅವರ ಸಂಬಂಧಿ ಆದರ್ಶ್ ಅಂಗಡಿಯನ್ನು ಮುಚ್ಚಿ ಹೋಗಿದ್ದಾರೆ.
ಮರುದಿನ, ಅಂದರೆ ಸೆಪ್ಟೆಂಬರ್ 9, 2025ರಂದು ಬೆಳಿಗ್ಗೆ 7:00 ಗಂಟೆಗೆ ಆದರ್ಶ್ ಅಂಗಡಿ ತೆರೆಯಲು ಬಂದಾಗ, ಶಟರ್ ಬಾಗಿಲು ಅರ್ಧ ತೆರೆದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ವೈಭವ್ ಅವರಿಗೆ ವಿಷಯ ತಿಳಿಸಿದ ನಂತರ, ಇಬ್ಬರೂ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ.
ಇದನ್ನೂ ಓದಿ : ಮಣಿಪಾಲ ವಿದ್ಯಾರ್ಥಿಗೆ ಆನ್ಲೈನ್ ವಂಚನೆ
ಅಂಗಡಿಯ ಶಟರ್ ಮತ್ತು ಚಿನ್ನ ಇಡುವ ಡ್ರಾವರ್ನ ಬೀಗಗಳನ್ನು ಯಾವುದೋ ಕೀಯನ್ನು ಬಳಸಿ ಕಳ್ಳರು ತೆರೆದಿದ್ದಾರೆ. ಕಳ್ಳರು ₹65,96,000 ಮೌಲ್ಯದ ಸುಮಾರು 680 ಗ್ರಾಂ ಚಿನ್ನ, ಡ್ರಾವರ್ ನಲ್ಲಿದ್ದ ₹22,00,000 ಮೌಲ್ಯದ 200 ಗ್ರಾಂ ಚಿನ್ನ, ₹6,25,000 ಮೌಲ್ಯದ ಸುಮಾರು 5 ಕೆಜಿ ಬೆಳ್ಳಿ ಗಟ್ಟಿಗಳು ಮತ್ತು ₹1,50,000 ನಗದು ಹಣವನ್ನು ಕದ್ದೊಯ್ದಿದ್ದಾರೆ.
ಒಟ್ಟಾರೆಯಾಗಿ, ₹95,71,000 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 168/2025ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಕುಂದಾಫುರ : ಅಂದರ್ ಬಾಹರ್ ಜೂಜಾಟ : 11 ಮಂದಿ ಆರೆಸ್ಟ್
ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಕಳ್ಳರನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಈ ಘಟನೆ ಉಡುಪಿ ಪೇಟೆಯ ಇತರ ವ್ಯಾಪಾರಿಗಳಲ್ಲೂ ಆತಂಕ ಮೂಡಿಸಿದೆ.
Gold, silver worth Rs 95 lakh stolen in Udupi: Robbery at Vaibhav Gold shop



