ಕುಂದಾಪುರ : ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ ; 1.10 ಲಕ್ಷ ಜಪ್ತಿ, 11 ಮಂದಿ ಅರೆಸ್ಟ್‌

ಕುಂದಾಪುರ : ಇಸ್ಪೀಟ್‌ ಜೂಜಾಟ (Kundapur gambling ) ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಹಣವನ್ನು ವಶ ಪಡಿಸಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕರ್ಕುಂಜೆಯಲ್ಲಿ ನಡೆದಿದೆ.

ಕರ್ಕುಂಜೆ ಗ್ರಾಮದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿರುವ ಖಚಿತ ಮಾಹಿತಿಯ ಮೇಲೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಜೂಜಾಟ ಆಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಮುಕ್ಕೋಡು ರಾಜೀವ ಎಂಬಾತನ ಕ್ಯಾಟರಿಂಗ್ ಶೆಡ್‌ನಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ‘ಅಂದರ್-ಬಾಹರ್’ ಜೂಜಾಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ದೊರೆತಿತ್ತು.

ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಚಂದ್ರಶೇಖರ, ಅಭಿಜಿತ್, ಸತೀಶ್, ಗಣಪತಿ, ಈಶ್ವರ, ಸುಬ್ಬಣ್ಣ, ಭಾಸ್ಕರ, ಮಂಜುನಾಥ, ಸುರೇಶ, ವಿಜಯ ಮತ್ತು ನಿತೇಶ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಕೋಟ : ಕೆಸ್ರು ಓಕ್ಳಿ – ಜನಮನ ಗೆದ್ದ ಕೆಸರುಗದ್ದೆ ಕ್ರೀಡಾಕೂಟ

ದಾಳಿಯ ವೇಳೆ, ಜೂಜಾಟಕ್ಕೆ ಬಳಸಿದ್ದ ಒಟ್ಟು ₹1,10,790/- ನಗದು, ಇಸ್ಪೀಟ್ ಎಲೆಗಳು, ಎರಡು ರೌಂಡ್ ಟೇಬಲ್‌ಗಳು, ಏಳು ಪ್ಲಾಸ್ಟಿಕ್ ಕುರ್ಚಿಗಳು, ಹತ್ತು ಕಬ್ಬಿಣದ ಕುರ್ಚಿಗಳು ಮತ್ತು 12 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಲ್ಲದೇ ಜೂಜಾಟಕ್ಕೆ ಬಂದಿದ್ದ ನಾಲ್ಕು ವಾಹನಗಳನ್ನೂ ವಶಕ್ಕೆ ಪಡೆಯಲಾಗಿದೆ. ಅವುಗಳೆಂದರೆ, KA-20-EP-6665 ಸಂಖ್ಯೆಯ ಸ್ಕೂಟರ್, KA-47-A-5600 ಸಂಖ್ಯೆಯ Ertiga ಕಾರು, ಮತ್ತು KA-20-MD-8270 ಹಾಗೂ KA-20-MD-1580 ಸಂಖ್ಯೆಯ Kia Seltos ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : ಕೋಟ : ಮಟ್ಕಾ ಜುಗಾರಿ 3 ಕಡೆ ಪೊಲೀಸರ ದಾಳಿ, 3 ಮಂದಿ ಅರೆಸ್ಟ್‌

ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2025 ರಂತೆ, ಕರ್ನಾಟಕ ಪೊಲೀಸ್ ಕಾಯಿದೆ (KP Act) ಕಲಂ 79 ಮತ್ತು 80 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕ್ರಮ ಮುಂದುವರಿಸಿದೆ.

Kundapur Police raid gambling 1.10 lakh seized 11 arrested

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories