ಉಡುಪಿ : ಐಸಿಐಸಿಐ ಸೆಕ್ಯೂರಿಟೀಸ್ ಟ್ರೇಡಿಂಗ್ ಹೆಸರಲ್ಲಿ 50 ಲಕ್ಷ ವಂಚನೆ

Udupi Crime Report : ಉಡುಪಿ : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ನಕಲಿ ಐಸಿಐಸಿಐ ಸೆಕ್ಯುರಿಟೀಸ್ ಟ್ರೇಡಿಂಗ್ (icici securities trading account) ಲಿಂಕ್ ಮತ್ತು ವಾಟ್ಸಾಪ್ ಗ್ರೂಪ್ ಮೂಲಕ ಉಡುಪಿಯ ವ್ಯಕ್ತಿಯೋರ್ವರಿಗೆ 50 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಉಡುಪಿಯ ನಿವಾಸಿಯಾಗಿರುವ ರಾಜಶೇಖರ್ (62 ವರ್ಷ) ಎಂಬವರೇ ವಂಚನೆಗೆ ಒಳಗಾದವರು. ರಾಜಶೇಖರ್ ಅವರಿಗೆ ICICI Exchange Study Group’ಎಂಬ ವಾಟ್ಸಾಪ್ ಗ್ರೂಪ್ಗೆ ಸೇರ್ಪಡೆ ಆಗಿದ್ದರು.
ಈ ವಾಟ್ಸಾಪ್ ಗ್ರೂಪ್ ಅಡ್ಮಿನ್ಗಳು ಒದಗಿಸಿದ ನಕಲಿ ICICI Securities trading ವೆಬ್ಸೈಟ್/ಆ್ಯಪ್ ಮೂಲಕ ಅವರು ಹೂಡಿಕೆ ಮಾಡಿದ್ದರು. ಜುಲೈ 16 ರಿಂದ ಆಗಸ್ಟ್ 13ರವರೆಗೆ ರಾಜಶೇಖರ್ ಹಂತ ಹಂತವಾಗಿ ₹52,70,955 ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ : ಮಣಿಪಾಲ ವಿದ್ಯಾರ್ಥಿಗೆ 68 ಸಾವಿರ ರೂಪಾಯಿ ಆನ್ಲೈನ್ ವಂಚನೆ
ಹೂಡಿಕೆ ಮಾಡಿದ ಮೊತ್ತದ ಪೈಕಿ ಕೇವಲ ₹2,47,900 ಮಾತ್ರ ಹಿಂಪಡೆಯಲು ಸಾಧ್ಯವಾಗಿದ್ದು, ಉಳಿದ ₹50,23,055 ಹಿಂಪಡೆಯಲು ಪ್ರಯತ್ನಿಸಿದಾಗ ಹಣ ಹಿಂಪಡೆಯಲಾಗದೆ ವಂಚನೆಗೊಳಗಾಗಿದ್ದಾರೆ.
ವಂಚಕರು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನು ಹಿಂತಿರುಗಿಸದೆ ಮೋಸ ಮಾಡಿದ್ದಾರೆ. ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉಡುಪಿಯಲ್ಲಿ 95 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಕಳವು : ವೈಭವ ಗೋಲ್ಡ್ ಅಂಗಡಿಯಲ್ಲಿ ದರೋಡೆ
ಆನ್ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಜನರು ಪದೇ ಪದೇ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಸಾರ್ವಜನಿಕರು ಇಂತಹ ನಕಲಿ ಗ್ರೂಪ್ಗಳು ಮತ್ತು ಆ್ಯಪ್ಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Udupi Crime Report icici securities trading account fraud



