ಉಡುಪಿಯಲ್ಲಿ 95 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಕಳವು: ವೈಭವ ಗೋಲ್ಡ್‌ ಅಂಗಡಿಯಲ್ಲಿ ದರೋಡೆ

ಉಡುಪಿ: ಉಡುಪಿ ನಗರದ ಚಿತ್ತರಂಜನ್‌ ಸರ್ಕಲ್‌ನಲ್ಲಿರುವ ವೈಭವ ಗೋಲ್ಡ್‌ & ಸಿಲ್ವರ್‌ ಮೆಲ್ಟಿಂಗ್‌ & ರಿಫೈನರಿ (Udupi Vaibhav Gold Shop) ಅಂಗಡಿಯಲ್ಲಿ ಭಾರಿ ಕಳ್ಳತನ ನಡೆದಿದ್ದು, ಸುಮಾರು ₹95,71,000 ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ದೋಚಲಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನಿವಾಸಿ ವೈಭವ್‌ ಮೋಹನ ಘಾಟಗೆ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ವೈಭವ್‌ ಘಾಟಗೆ ಅವರ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್‌ 8, 2025ರಂದು ರಾತ್ರಿ 10:00 ಗಂಟೆಗೆ ಅವರು ಮತ್ತು ಅವರ ಸಂಬಂಧಿ ಆದರ್ಶ್‌ ಅಂಗಡಿಯನ್ನು ಮುಚ್ಚಿ ಹೋಗಿದ್ದಾರೆ.

ಮರುದಿನ, ಅಂದರೆ ಸೆಪ್ಟೆಂಬರ್‌ 9, 2025ರಂದು ಬೆಳಿಗ್ಗೆ 7:00 ಗಂಟೆಗೆ ಆದರ್ಶ್‌ ಅಂಗಡಿ ತೆರೆಯಲು ಬಂದಾಗ, ಶಟರ್‌ ಬಾಗಿಲು ಅರ್ಧ ತೆರೆದಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ವೈಭವ್‌ ಅವರಿಗೆ ವಿಷಯ ತಿಳಿಸಿದ ನಂತರ, ಇಬ್ಬರೂ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ದೃಢಪಟ್ಟಿದೆ.

ಇದನ್ನೂ ಓದಿ : ಮಣಿಪಾಲ ವಿದ್ಯಾರ್ಥಿಗೆ ಆನ್‌ಲೈನ್‌ ವಂಚನೆ

ಅಂಗಡಿಯ ಶಟರ್‌ ಮತ್ತು ಚಿನ್ನ ಇಡುವ ಡ್ರಾವರ್‌ನ ಬೀಗಗಳನ್ನು ಯಾವುದೋ ಕೀಯನ್ನು ಬಳಸಿ ಕಳ್ಳರು ತೆರೆದಿದ್ದಾರೆ. ಕಳ್ಳರು ₹65,96,000 ಮೌಲ್ಯದ ಸುಮಾರು 680 ಗ್ರಾಂ ಚಿನ್ನ, ಡ್ರಾವರ್‌ ನಲ್ಲಿದ್ದ ₹22,00,000 ಮೌಲ್ಯದ 200 ಗ್ರಾಂ ಚಿನ್ನ, ₹6,25,000 ಮೌಲ್ಯದ ಸುಮಾರು 5 ಕೆಜಿ ಬೆಳ್ಳಿ ಗಟ್ಟಿಗಳು ಮತ್ತು ₹1,50,000 ನಗದು ಹಣವನ್ನು ಕದ್ದೊಯ್ದಿದ್ದಾರೆ.

ಒಟ್ಟಾರೆಯಾಗಿ, ₹95,71,000 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 168/2025ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕುಂದಾಫುರ : ಅಂದರ್‌ ಬಾಹರ್‌ ಜೂಜಾಟ : 11 ಮಂದಿ ಆರೆಸ್ಟ್‌

ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಕಳ್ಳರನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಈ ಘಟನೆ ಉಡುಪಿ ಪೇಟೆಯ ಇತರ ವ್ಯಾಪಾರಿಗಳಲ್ಲೂ ಆತಂಕ ಮೂಡಿಸಿದೆ.

Gold, silver worth Rs 95 lakh stolen in Udupi: Robbery at Vaibhav Gold shop

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories